Asianet Suvarna News Asianet Suvarna News

51ನೇ ಹುಟ್ಟುಹಬ್ಬ ಸಂಭ್ರಮದಲ್ಲಿ ಬಾದ್ ಷಾ ಸುದೀಪ್: ಹೊಸ ರಕ್ತ ಚರಿತ್ರೆ ಹೇಳಲು ಬರ್ತಾನೆ ಬಿಲ್ಲ ರಂಗ ಬಾಷಾ.!

ಕಿಚ್ಚ ಸುದೀಪ್​​...ಅಭಿನಯ ಚಕ್ರವರ್ತಿ... ಸ್ಯಾಂಡಲ್​ವುಡ್​ ಬಾದ್​​ಷಾ..ಕನ್ನಡಿಗರ ಪ್ರೀತಿಯ ಮಾಣಿಕ್ಯ.. ತಮ್ಮ ಆ್ಯಂಗ್ರಿ ಯಂಗ್​ ಮ್ಯಾನ್ ಲುಕ್​ನಿಂದಲ್ಲೇ ಹೆಬ್ಬುಲಿಯಾಗಿ ಘರ್ಜಿಸುವ ಮೂಲಕ, ಗಂಧದ ಗುಡಿ ರಸಿಕರನ್ನು ಸೆಳೆದಿರೋ ಕೋಟಿಗೊಬ್ಬ.

First Published Sep 3, 2024, 10:50 AM IST | Last Updated Sep 3, 2024, 10:50 AM IST

ಅಭಿಮಾನಿಗಳ ಪಾಲಿಗೆ ತಮ್ಮ ನೆಚ್ಚಿನ ಹೀರೋಗಳು ದೇವರ ಸಮಾನ. ತಮ್ಮ ಫೇವರಿಟ್​​​​ ಹೀರೋ ಬರ್ತ್​ಡೇ ಬಂದ್ರೆ ಅದ್ಧೂರಿಯಾಗಿ ಸೆಲಬ್ರೇಷನ್​ ಮಾಡ್ತಾರೆ. ಕಿಚ್ಚ ಸುದೀಪ್ ಕೂಡ ಅದ್ಯಾವ ಜನ್ಮದಲ್ಲಿ ಅದೇನು ಪುಣ್ಯ ಮಾಡಿದ್ರೋ ಏನೋ. ಪ್ರತಿ ವರ್ಷ ಹುಟ್ಟುಹಬ್ಬದ ದಿನ ಅಪ್ಪಟ ಅಭಿಮಾನಿಗಳ ಅಭಿಮಾನದಲ್ಲಿ ತೇಲಿ ಬಿಡ್ತಾರೆ. ಇವತ್ತು ಸುದೀಪ್ ಹುಟ್ಟುಹಬ್ಬ. ಸಾವಿರಾರು ಫ್ಯಾನ್ಸ್​ ಜೊತೆ ಕಿಚ್ಚ ಜನ್ಮದಿನ ಆಚರಿಸಿದ್ದಾರೆ. ಇದರ ಜೊತೆಗೆ ತನ್ನ ಅಭಿಮಾನಿಗಳಿಗಾಗೆ ಎರಡು ಸೂಪರ್ ಸರ್​​ಪ್ರೈಸ್​​ಅನ್ನೂ ಕೊಟ್ಟಿದ್ದಾರೆ. ಹಾಗಾದ್ರೆ ಕಿಚ್ಚನ ಬರ್ತ್​ಡೇ ಹೇಗಿತ್ತು..? ನೋಡೋಣ ಬನ್ನಿ. 

ಕಿಚ್ಚ ಸುದೀಪ್​​...ಅಭಿನಯ ಚಕ್ರವರ್ತಿ... ಸ್ಯಾಂಡಲ್​ವುಡ್​ ಬಾದ್​​ಷಾ..ಕನ್ನಡಿಗರ ಪ್ರೀತಿಯ ಮಾಣಿಕ್ಯ.. ತಮ್ಮ ಆ್ಯಂಗ್ರಿ ಯಂಗ್​ ಮ್ಯಾನ್ ಲುಕ್​ನಿಂದಲ್ಲೇ ಹೆಬ್ಬುಲಿಯಾಗಿ ಘರ್ಜಿಸುವ ಮೂಲಕ, ಗಂಧದ ಗುಡಿ ರಸಿಕರನ್ನು ಸೆಳೆದಿರೋ ಕೋಟಿಗೊಬ್ಬ..ಇಷ್ಟೇ ಯಾಕೆ ಗುರು ಸ್ಯಾಂಡಲ್​​​ವುಡ್​ ಟು ಬಾಲಿವುಡ್​​ ​ವರೆಗೂ ತನ್ನದೇ ಛಾಪು ಮೂಡಿಸಿರೋ ರನ್ನನಿಗೆ ಇಂದು 51ನೇ ಹುಟ್ಟುಹಬ್ಬ. ಇವತ್ತು ಬೆಂಗಳೂರಿನ ಜೆ ಪಿ ನಗರ ಹಾಗು ಜಯನಗರ ಜಾತ್ರೆಯಾಗಿತ್ತು. ಯಾಕಂದ್ರೆ ಇವತ್ತು ಸುದೀಪ್​ ಹುಟ್ಟುಹಬ್ಬ. ಕಳೆದ ವರ್ಷ ಕಿಚ್ಚನ ಬರ್ತ್​ಡೇಗೆ 38 ಸಾವಿರ ಜನ ಫ್ಯಾನ್ಸ್ ಸಾಕ್ಷಿಯಾಗಿದ್ರು. ಈ ವರ್ಷವೂ ಸೇಮ್ ಟು ಸೇಮ್.. ಎಲ್ಲೆಲ್ಲೂ ಸುದೀಪ್ ಅಭಿಮಾನಿಗಳೇ ಕಾಣಿಸುತ್ತಿದ್ರು. ಕಿಚ್ಚ ಅಭಿಮಾನಿಗಳ ಅಭಿಮಾನದ ತೇರಿನಲ್ಲಿ ತೇಲಾಡಿ ಬಿಟ್ರು. 

ಜಯನಗರದ  ಎಂಇಎಸ್​ ಗ್ರೌಂಡ್​ ನಲ್ಲಿ ಸುದೀಪ್​​ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ಫ್ಯಾನ್ಸ್​ ಜತೆ ಹುಟ್ಟುಹಬ್ಬ ಮಾಡಿದ್ದಾರೆ. ಕೆಲ ಹೀರೋಗಳು ಫ್ಯಾನ್ಸ್ ಮಾಡಿದ್ದೆಲ್ಲಾ ಸರಿ ಅಂತಾರೆ. ಹೀರೋಗಳು ಕುಡ ಅವರ ಅಭಿಮಾನಿಗಳಂತೆ ನಡೆದುಕೊಳ್ತಾರೆ. ಆದ್ರೆ ಸುದೀಪ್ ವಿಷಯದಲ್ಲಿ ಹಾಗಲ್ಲ. ಕಿಚ್ಚ ಅಭಿಮಾನಿಗಳನ್ನ ಅತಿಯಾಗಿ ಪ್ರೀತಿಸ್ತಾರೆ. ಅವರ ಫ್ಯಾನ್ಸ್ ಕೂಡ ಕಿಚ್ಚನನ್ನ ಎಲ್ಲೂ ಬಿಟ್​ ಕೊಡೋ ಮಾತೇ ಇಲ್ಲ. ಹೀಗಾಗೆ ತನ್ನ ಫ್ಯಾನ್ಸ್​ ಬಗ್ಗೆ ಮಾತನಾಡಿದ ಸುದೀಪ್. ಅಭಿಮಾನಿಗಳು ತೋರಿಸೋ ಪ್ರೀತಿಯಿಂದ ನಾನು ಇವತ್ತು ಇಲ್ಲಿದ್ದೀನಿ. ಅಭಿಮಾನಿಗಳು ನಮ್ಮ ಪ್ರತಿಬಿಂಬ. ನಾನು ಹೋದಲೆಲ್ಲಾ ತಲೆ ಎತ್ಕೊಂಡು ಓಡಾಡ್ತೀನಿ ಅಂದ್ರೆ ಅದಕ್ಕೆ ಅಭಿಮಾನಿಗಳೇ ಕಾರಣ. ಅಭಿಮಾನಿಗಳಿಗೆ ಕಳಂಕ ತರೋ ಕೆಲಸ ಮಾಡಲ್ಲ ಅಂದ್ರು. 

Video Top Stories