ಕಿಚ್ಚ ಸುದೀಪ್ ವೈಭವ: ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ ಸಿಂಪಲ್ ಸುನಿ ಗತವೈಭವ!

ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಅಂದ್ರೆ ಅದು ‘ಗತವೈಭವ’.. ಸಿಂಪಲ್​ ನಿರ್ದೇಶನದಲ್ಲಿ ಮೂಡಿ ಬರ್ತಾಯಿರೀ ಈ ಫ್ಯಾಂಟಸಿ ಸಿನಿಮಾ ಇದೇ 14ನೇ ತಾರೀಖು ಅದ್ಧೂರಿಯಾಗಿ ರಿಲೀಸ್ ಆಗ್ತಾಯಿದೆ.

Share this Video
  • FB
  • Linkdin
  • Whatsapp

ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ಅಂದ್ರೆ ಅದು ‘ಗತವೈಭವ’.. ಸಿಂಪಲ್​ ನಿರ್ದೇಶನದಲ್ಲಿ ಮೂಡಿ ಬರ್ತಾಯಿರೀ ಈ ಫ್ಯಾಂಟಸಿ ಹಾಗೂ ಪಿರಿಯಾಡಿಕ್ ಸಿನಿಮಾ ಇದೇ 14ನೇ ತಾರೀಖು ಅದ್ಧೂರಿಯಾಗಿ ರಿಲೀಸ್ ಆಗ್ತಾಯಿದೆ. ಸದ್ಯ ಗತವೈಭವ ಸಿನಿಮಾದ ಟ್ರೇಲರ್‌ ರಿಲೀಸ್ ಆಗಿದ್ದು, ಬಾದ್​ ಷಾ ಕಿಚ್ಚಾ ಸುದೀಪ್ ಸಾಥ್ ನೀಡಿದ್ದಾರೆ. ಹಾಗಾದ್ರೆ​ ಹೇಗಿದೆ ಗತವೈಭವ ಟ್ರೇಲರ್‌..? ಟ್ರೇಲರ್‌ ನೋಡಿ ಸುದಪ್ ಹೇಳಿದ್ದೇನು..? ಬಾದ್​ ಷಾ ಸುದೀಪ್​ ಮಾರ್ಕ್​​​ ಟೀಸರ್ ಕೊಟ್ಟು ಫ್ಯಾನ್ಸ್​ಗೆ ಮಾರ್ಕ್​ ಮತ್ತೇರಿಸಿದ್ದಾರೆ. ಇದರ ಜೊತೆ ಬಿಗ್​ಬಾಸ್​​ನ ಹೋಸ್ಟ್​ ಮಾಡ್ತಾ ಪ್ರೇಕ್ಷಕರನ್ನ ಹೈ ಅಲರ್ಟ್ ಆಗಿ ಇರುವಂತೆ ಮಾಡುತ್ತಿದ್ದಾರೆ. ಆದ್ರೆ ಇದೆಲ್ಲದರ ಮಧ್ಯೆ ಕಿಚ್ಚ ಪಟ್ ಅಂತ ಪ್ರತ್ಯಕ್ಷ ಆಗಿದ್ದು, ಸ್ಯಾಂಡಲ್​ವುಡ್​​ನಲ್ಲಿ ಹೊಸ ಅಲೆ ಎಬ್ಬಿಸಿರೋ ಗತವೈಭವ ಸಿನಿಮಾ ಟ್ರೇಲರ್‌ ರಿಲೀಸ್ ಕಾರ್ಯಕ್ರಮದಲ್ಲಿ.

ಯೆಸ್, ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಸಿನಿಮಾಗಳ ಮೂಲಕ ವಿಶೇಷವಾಗಿ ಗಮನಸೆಳೆದ ಪ್ರತಿಭೆ ಎಂದರೆ, ಅದು ನಿರ್ದೇಶಕ ಸಿಂಪಲ್ ಸುನಿ. ಇದೀಗ ಅವರು 'ಗತವೈಭವ' ಎಂಬ ಸಿನಿಮಾ ತೆರೆಗೆ ತರುತ್ತಿದ್ದಾರೆ. ಹೊಸ ಹೀರೋ ದುಷ್ಯಂತ್ ಜೊತೆಗೆ ಆಶಿಕಾ ರಂಗನಾಥ್​ರನ್ನ ಜೋಡಿ ಮಾಡಿ ಗತ ವೈಭವ ರೆಡಿ ಮಾಡಿದ್ದಾರೆ. ಈ ಸಿನಿಮಾ ನವೆಂಬರ್​ 14ರಂದು ಬಿಡುಗಡೆ ಆಗುತ್ತಿದ್ದು, ಟ್ರೇಲರ್‌​ಅನ್ನ ಬೆಂಗಳೂರಿನ ಮಾಲ್​ ಒಂದರಲ್ಲಿ ಸುದೀಪ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾತ್ನಾಡಿದ ರನ್ನ, ‘ಈ ರೀತಿ ಸಿನಿಮಾಗಳಿಗೆ ಬಂದು ಬೆಂಬಲ ನೀಡುವುದು ಸಹಕಾರ ಅಲ್ಲ. ಇದು ಕನ್ನಡ ಸಿನಿಮಾ ಅಂದಮೇಲೆ ನಮ್ಮ ಸಿನಿಮಾ, ಗತ ವೈಭವ ಟ್ರೇಲರ್ ತುಂಬಾ ಚೆನ್ನಾಗಿದೆ.

ಇಡೀ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಚಿತ್ರತಂಡಕ್ಕೆ ಆಲ್‌ ದಿ ಬೆಸ್ಟ್‌ ಎಂದಿದ್ದಾರೆ ಸುದೀಪ್. ಇನ್ನೂ ಚಿತ್ರದ ನಾಯಕ ದುಶ್ಯಂತ್ ಬಗ್ಗೆ ಮಾತ್ನಾಡಿದ ಸುದೀಪ್​, ‘ಈ ಚಿತ್ರದ ಹೀರೋ ದುಷ್ಯಂತ್ ಅವರಿಗೆ ನಾನು ಟಿಪ್ಸ್ ಕೊಡುವುದು ಏನಿಲ್ಲ. ಅವರು ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಇದು ಹೇಗೆ ಸಾಧ್ಯ ಅಂತ ನೋಡಿದ್ರೆ ದುಷ್ಯಂತ್ ರಾಜಕಾರಣಿ ಮಗ ಅಂತ ಗೊತ್ತಾಯ್ತು ಎಂದು ಸುದೀಪ್ ದುಶ್ಯಂತ್​ರನ್ನು ಕಾಲೆಳೆದ್ರು. ಗತ ವೈಭವ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, ವಿಲೀಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ. ಸುಧಾ ಬೆಳವಾಡಿ, ಕಿಶನ್ ಬಿಳಗಲಿ, ಕೃಷ್ಣ ಹೆಬ್ಬಾಳೆ, ಕೃಷ್ಣ ಜೋರಾಪುರ್ ನಟಿಸಿದ್ದಾರೆ. ಇದೇ ನವೆಂಬರ್​ 14ನೇ ತಾರೀಖು ಸಿನಿಮಾ ಅದ್ಧೂರಿಯಾಗಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗ್ತಾ ಇದೆ.

Related Video