ಡಿಲೀಟ್.. ಮತ್ತೆ ಅಪ್ ಲೋಡ್.. ಏನಿದು ಮಾರ್ಕ್? ಸೈಕೋ ಸೈತಾನ ಸಾಂಗ್ ಗೊಂದಲ ಹುಟ್ಟಿಸಿದ್ದೇಕೆ..?

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಮೊದಲ ಸಾಂಗ್ ಸೋಮವಾರ ಸಂಜೆ ರಿಲೀಸ್ ಆಗಿತ್ತು. ಇನ್ನೇನು ಸಾಂಗ್ಸ್ ವೀವ್ಸ್ ಲೆಕ್ಕದಲ್ಲಿ ದಾಖಲೆ ಬರೆಯುತ್ತೆ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ಹಾಡನ್ನ ಡೀಲಿಟ್ ಮಾಡಿ ಮತ್ತೆ ಅಪ್​ಲೋಡ್ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಮೊದಲ ಸಾಂಗ್ ಸೋಮವಾರ ಸಂಜೆ ರಿಲೀಸ್ ಆಗಿತ್ತು. ಇನ್ನೇನು ಸಾಂಗ್ಸ್ ವೀವ್ಸ್ ಲೆಕ್ಕದಲ್ಲಿ ದಾಖಲೆ ಬರೆಯುತ್ತೆ ಫ್ಯಾನ್ಸ್ ಅಂದುಕೊಂಡಿದ್ರು. ಆದ್ರೆ ಹಾಡನ್ನ ಡೀಲಿಟ್ ಮಾಡಿ ಮತ್ತೆ ಅಪ್​ಲೋಡ್ ಮಾಡಲಾಗಿದೆ. ಸೈಕೋ ಸೈತಾನನ ಗೊಂದಲಕ್ಕೆ ಕಾರಣ ಏನು..? ಈ ಸ್ಟೋರಿ ನೋಡಿ. ಸೋಮವಾರ ಸಂಜೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿತ್ತು. ಅಜನೀಶ್ ಲೋಕನಾಥ್ ಮ್ಯೂಸಿಕ್ ಅನೂಪ್ ಭಂಡಾರಿ ಲಿರಿಕ್ಸ್, ವಿಜಯ್ ಪ್ರಕಾಶ್ ವಾಯ್ಸ್​ ಇದ್ದ ಈ ಮಾಸ್ ಸಾಂಗ್ ಕೇಳಿ ಫ್ಯಾನ್ಸ್ ಇದು ಧೂಳ್ ಎಬ್ಬಿಸುತ್ತೆ ಅಂತ ಮಾತನಾಡಿಕೊಂಡಿದ್ರು.

ಲಿರಿಕಲ್ ಸಾಂಗ್ ನಡುನಡುವೆ ಹಾಡಿನ ದೃಶ್ಯಗಳು ಕೂಡ ಇದ್ದು, ಕಿಚ್ಚ ಸಹಕಲಾವಿದರ ಜೊತೆ ಸ್ಟೆಪ್ ಹಾಕಿದ್ರು. ಕಿಚ್ಚ ತೆರೆ ಮೇಲೆ ಡ್ಯಾನ್ಸ್ ಸ್ಟೆಪ್ ಹಾಕೋದು ಕಮ್ಮಿ. ಆದ್ರೆ ಮಾರ್ಕ್ ಸಾಂಗ್​ನಲ್ಲಿ ಮಾತ್ರ ನೂರಕ್ಕೆ ನೂರು ಮಾರ್ಕ್ಸ್ ಕೊಡುವಂತೆ ಕುಣಿದಿದ್ರು. ದಿ ಡೆವಿಲ್ ಸಿನಿಮಾದ ಮೊದಲ ಸಾಂಗ್​ಗಿಂಗ ಮಾರ್ಕ್ ಸಾಂಗ್ ಹೆಚ್ಚು ವಿವ್ಸ್ ಪಡೆಯೋದು ಖಾತ್ರಿ ಅಂತ ಕಿಚ್ಚನ ಫ್ಯಾನ್ಸ್ ರೇಸ್​ಗೆ ಸಜ್ಜಾಗಿದ್ರು. ಆದ್ರೆ ಅಷ್ಟರಲ್ಲಿ ಯುಟ್ಯೂಬ್​ನಿಂದ ಈ ಹಾಡನ್ನ ಡಿಲೀಟ್ ಮಾಡಲಾಗಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಂಗ್​ನ ಡಿಲೀಟ್ ಮಾಡಿ ಮತ್ತೆ ಮರುದಿನ ಬೆಳಿಗ್ಗೆ ಅಪ್ಲೋಡ್ ಮಾಡಲಾಗಿದೆ.

ಇದ್ರಿಂದ ಹಾಡಿಗೆ ಮೊದಲು ಬಂದ ವೀವ್ಸ್ ಲೆಕ್ಕವೂ ಡಿಲೀಟ್ ಆಗಿದೆ. ಅಷ್ಟಾದ್ರೂ ಮಾರ್ಕ್ ಸಾಂಗ್ ಕನ್ನಡದಲ್ಲಿ 7 ಮಿಲಿಯನ್​ಗೂ ಅಧಿಕ ವಿವ್ಸ್ ಪಡೆದಿದೆ. ಸೈಕೋ ಸೈತಾನ ಸಾಂಗ್​ನ ರೀ ಅಪ್​ಲೋಡ್ ಮಾಡಿ ಮತ್ತೆ ಟ್ರೆಂಡ್ ಮಾಡೋಣ ಅಂದಿದೆ ತಂಡ. ಮೂಲಗಳ ಪ್ರಕಾರ ಕೆಲ ತಾಂತ್ರಿಕ ತೊಂದರೆಗಳಿದ್ದ ಈ ಹಾಡನ್ನ ಡಿಲೀಟ್ ಮಾಡಿ , ಸರಿಪಡಿಸಿ ಮತ್ತೆ ಅಪ್​ಲೋಡ್ ಮಾಡಲಾಗಿದೆ, ಒಟ್ನಲ್ಲಿ ಸೈಕೋ ಸೈತಾನನ ಈ ಸಾಂಗ್ ಡಿಲೀಟ್ & ಅಪ್​ಲೋಡ್ ವಿಚಾರ ಕಿಚ್ಚನ ಫ್ಯಾನ್ಸ್​ ನಡುವೆ ಗೊಂದಲ ಮೂಡುವಂತೆ ಮಾಡಿದ್ದು ಸುಳ್ಳಲ್ಲ.

Related Video