Asianet Suvarna News Asianet Suvarna News

ಮೊಟ್ಟ ಮೊದಲ ಬಾರಿಗೆ ರೀಲ್ಸ್ ಅಂಗಳಕ್ಕೆ ಕಿಚ್ಚನ ಎಂಟ್ರಿ; ಸುದೀಪ್ ಮೊದಲ ರೀಲ್ಸ್ ಹೇಗಿದೆ ಗೊತ್ತಾ?‌

ಸ್ಯಾಂಡಲ್‌ವುಡ್‌ನ ಬಾದ್‌ಷಾ, ಕಿಚ್ಚ ಸುದೀಪ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರ್ತಾರೆ. ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ.ಕೆಲವೊಮ್ಮೆ ತಮಗೆ ಅನ್ನಿಸಿದ ಅಭಿಪ್ರಾಯವನ್ನ ಬರವಣಿಗೆ ಮೂಲಕವೂ ಶೇರ್ ಮಾಡಿಕೊಳ್ತಿರ್ತಾರೆ. 

ಸ್ಯಾಂಡಲ್‌ವುಡ್‌ನ ಬಾದ್‌ಷಾ, ಕಿಚ್ಚ ಸುದೀಪ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರ್ತಾರೆ. ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರ್ತಾರೆ.ಕೆಲವೊಮ್ಮೆ ತಮಗೆ ಅನ್ನಿಸಿದ ಅಭಿಪ್ರಾಯವನ್ನ ಬರವಣಿಗೆ ಮೂಲಕವೂ ಶೇರ್ ಮಾಡಿಕೊಳ್ತಿರ್ತಾರೆ. ಕಿಚ್ಚ ರೀಲ್ಸ್ ಎಲ್ಲಾ ಟ್ರೈ ಮಾಡೋ ಸಾಹಸಕ್ಕೆ ಎಂದಿಗೂ ಕೈ ಹಾಕಿರಲಿಲ್ಲ. ಆದ್ರೆ ಫರ್ ದಿ ಫಸ್ಟ್ ಟೈಂ ರೀಲ್ಸ್ ದುನಿಯಾಗೂ ಲಗ್ಗೆ ಇಟ್ಟಿದ್ದಾರೆ ಅಭಿನಯ ಚಕ್ರವರ್ತಿ. ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ಭಾಷೆಯ ಬಗ್ಗೆ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ರು. ಈಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವ್ರಿಗೆ ಕನ್ನಡ ಪಾಠ ಮಾಡಿ ಅವ್ರಿಂದ ಕನ್ನಡಿಗರಿಗೆ ನಮಸ್ಕಾರ ಹೇಳಿಸಿದ್ದಾರೆ. ಹೌದು! ಕಿಚ್ಚ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಇಬ್ಬರು ವಿಕ್ರಾಂತ್ ರೋಣ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. 

ಪ್ರಚಾರಕ್ಕಾಗಿ ಸೂಪರ್ ಸುಪ್ರೀಂ ಆಗಿರೋ ಪ್ಲಾನ್ ಮಾಡಿದ್ದಾರೆ. ಸುದೀಪ್ ರೀಲ್ಸ್ ಮಾಡುವ ಮೊದಲು ಜಾಕ್ವೆಲಿನ್‌ಗೆ ಒಂದು ಷರತ್ತು ಹಾಕಿದ್ರು. ಅದೇನಂದ್ರೆ ಕನ್ನಡದಲ್ಲಿ ನಾನು ಒಂದು ಲೈನ್ ಹೇಳುತ್ತೇನೆ. ಅದನ್ನ ನೀವು ಹೇಳಬೇಕು ಎಂದು ಕನ್ನಡದಲ್ಲಿ ಕೆಲವು ಸಾಲುಗಳನ್ನ ಹೇಳಿಕೊಟ್ರು. ಜಾಕ್ವೆಲಿನ್ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಅಂತ ಹೇಳಿ ಕಿಚ್ಚನ ಷರತ್ತನ್ನ ಪೂರೈಸಿದ್ರು. ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡ ಕಲಿತ ಖುಷಿಯಲ್ಲಿ ಕಿಚ್ಚ ಸುದೀಪ್ ರೀಲ್ಸ್ ಅಂಗಳಕ್ಕೆ ಕಾಲಿಟ್ಟೆ ಬಿಟ್ರು. ಇಷ್ಟು ದಿನ ಬೇರೆ ಅವರು ಮಾಡೋ ರೀಲ್ಸ್ ನಲ್ಲಿ ಕಾಣಿಸಿಕೊಳ್ತಿದ್ರು ಕಿಚ್ಚ. ಅದು ಕೂಡ ಅಪರೂಪವಾಗಿತ್ತು. ಆದ್ರೆ ಈಗ ತಾವೇ ರೀಲ್ಸ್ ಮಾಡೋ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಆಸೆ ಪೂರೈಸಿವುದರ ಜೊತೆಗೆ ಸಿನಿಮಾ ಪ್ರಚಾರವನ್ನೂ ಮಾಡಿದ್ದಾರೆ. 

ಫೈನಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ ಕಿಚ್ಚ: ಸುದೀಪ್ ಕನ್ನಡ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಶರಣು‌

ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಸಾಂಗ್ ಇತ್ತೀಚಿಗಷ್ಟೇ ರಿಲೀಸ್ ಆಗಿದೆ. ಹಾಡು , ಡ್ಯಾನ್ಸ್ , ಮ್ಯೂಸಿಕ್ ಸಿನಿಮಪ್ರೇಮಿಗಳಿಗೆ ಸಖತ್ ಇಷ್ಟವಾಗಿದೆ. ಇನ್ನು ಹಾಡಿನಲ್ಲಿ ಸುದೀಪ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಹಾಕಿರೋ ಸಿಗ್ನೇಚರ್ ಸ್ಟೆಪ್ಸ್ ಎಲ್ಲರನ್ನ ಇಂಪ್ರೆಸ್ ಮಾಡಿದ್ದು ಸದ್ಯ ಅಭಿಮಾನಿಗಳು ಸಿನಿಮಾ ಸ್ಟಾರ್ ಗಳು ಇದೇ ಸ್ಟೆಪ್ಸ್ ಹಾಕಿ ಕಿಚ್ಚನ ಸಿನಿಮಾ ಪ್ರಚಾರಕ್ಕೆ ಸಾತ್ ಕೊಡ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಜುಲೈ 28 ರಂದು ವಿಶ್ವದಾಧ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕೆಲ್ವಿನ್ ಫರ್ನಾಂಡಿಸ್, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ಏಳು ಭಾಷೆಯಲ್ಲಿ 3D ವರ್ಷನ್‌ನಲ್ಲಿ ವಿಕ್ರಾಂತ್ ರೋಣ ತೆರೆಗೆ ಬರಲಿದೆ

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories