Asianet Suvarna News Asianet Suvarna News

ಫೈನಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ ಕಿಚ್ಚ: ಸುದೀಪ್ ಕನ್ನಡ ಸಿನಿಮಾ ಪ್ರೀತಿಗೆ ಫ್ಯಾನ್ಸ್ ಶರಣು‌

ಕೆಜಿಎಫ್ 2.. ಭಾರತೀಯ ಸಿನಿಮಾರಂಗವೇ ಮೆಚ್ಚಿ ಕೊಂಡಾಡುತ್ತಿರೋ ಸಿನಿಮಾ. ನಟ ಕಿಚ್ಚ ಸುದೀಪ್ ಕೂಡ ಕೆಜಿಎಫ್ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು. 

ಕೆಜಿಎಫ್ 2.. ಭಾರತೀಯ ಸಿನಿಮಾರಂಗವೇ ಮೆಚ್ಚಿ ಕೊಂಡಾಡುತ್ತಿರೋ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ಗಳಿಕೆ ಮಾಡಿರೋ ಕೆಜಿಎಫ್ 2 ಸಿನಿಮಾವನ್ನ ಪ್ರತಿಯೊಬ್ಬರು ಇಷ್ಟ ಪಟ್ಟಿದ್ದಾರೆ. ಪ್ರತಿ ಕನ್ನಡಿಗನು ಹೆಮ್ಮೆಯಿಂದ ನಮ್ಮ ನೆಲದ ಸಿನಿಮಾ ವಿಶ್ವದಾದ್ಯಂತ ಹೆಸರು ಮಾಡುತ್ತಿರೋದನ್ನ ಕಂಡು ಸಂಭ್ರಮಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಕೂಡ ಕೆಜಿಎಫ್ 2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಇತ್ತೀಚಿಗಷ್ಟೇ ದುಬೈಗೆ ಭೇಟಿ ಕೊಟ್ಟಿದ್ದರು. ತಮ್ಮ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದ ಪ್ಲಾನಿಂಗ್‌ಗಾಗಿ ಕಿಚ್ಚ ದುಬೈಗೆ ಹೋದಾಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ರು ಆ ಸಮಯದಲ್ಲಿ ಕೆಜಿಎಫ್ 2 ಬಗ್ಗೆ ಮಾತನಾಡಿದ್ದಾರೆ. 

ದುಬೈನಲ್ಲಿ ನಡೆದ ಸಂದರ್ಶನದಲ್ಲಿ ರ್ಯಾಪಿಡ್ ಫೈಯರ್ ರೌಂಡ್ ನಲ್ಲಿ ಕಿಚ್ಚನಿಗೆ ಆರ್‌ಆರ್‌ಆರ್ ಹಾಗೂ ಕೆಜಿಎಫ್ ಎಂದು ಎರಡು ಆಯ್ಕೆಯನ್ನ ನೀಡಲಾಗುತ್ತೆ. ಅದರಲ್ಲಿ ಕಿಚ್ಚ ಕೆಜಿಎಫ್ ಚಿತ್ರವನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗದ ಒಗ್ಗಟ್ಟನ್ನ ಎತ್ತಿ ಹಿಡಿದಿದ್ದಾರೆ. ಕೆಜಿಎಫ್ 2 ಬಿಡುಗಡೆ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಹಳೆ ವಿಡಿಯೋವೊಂದು ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಕೆಜಿಎಫ್ ಚಿತ್ರದ ಬಗ್ಗೆ ಕಿಚ್ಚನಿಗೆ ಮಾಧ್ಯಮದವ್ರು ಪ್ರಶ್ನೆ ಕೇಳಿದ್ರು ಅದಕ್ಕೆ ಕಿಚ್ಚ ನೇರ ನೇರವಾಗಿ ನಾನು ಆ ಸಿನಿಮಾದಲ್ಲಿ ಇಲ್ಲ ಎಂದಿದ್ರು. 

Kichcha Sudeep: ವಿಕ್ರಾಂತ್ ರೋಣ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಡೈಲಾಗ್.!

ಆಗ ಕಿಚ್ಚನ ಮೇಲೆ ಯಶ್ ಅಭಿಮಾನಿಗಳು ಗರಂ ಆಗಿದ್ರು. ಆನಂತರ ಆ ವಿಡಿಯೋ ಹಳೆಯದ್ದು ಅನ್ನೋದು ಕೂಡ ಗೊತ್ತಾಯ್ತು. ಆದ್ರೆ ಈಗ ಕಿಚ್ಚ ತಾನು ವರ್ಕ್ ಮಾಡಿರೋ ನಿರ್ದೇಶಕರ ಸಿನಿಮಾವನ್ನ ಮೆಚ್ಚಿಕೊಳ್ಳದೆ ಕನ್ನಡದ ಕೆಜಿಎಫ್ ಸಿನಿಮಾವನ್ನ ಆಯ್ಕೆ ಮಾಡಿಕೊಂಡಿರುವುದಕ್ಕೆ ಕನ್ನಡ ಸಿನಿ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ. ಇದಷ್ಟೆ ಅಲ್ಲದೆ ಕಿಚ್ಚ ಸುದೀಪ್ ದುಬೈನಲ್ಲಿ ಕ್ರಿಕೆಟ್, ಲೈಫ್‌ಸ್ಟೈಲ್, ಸಿನಿಮಾ ಹೀಗೆ ಬೇರೆ ಬೇರೆ ಕ್ಷೇತ್ರದ ವಿಚಾರದ ಬಗ್ಗೆ ಮಾತನಾಡಿದ್ದಾರೆ ಅದ್ರ ಝಲಕ್ ನೀವು ಒಮ್ಮೆ ನೋಡಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies