ಆಟೋ ಮೇಲೆ ಬರೆದಿದ್ದ ಸಾಲು ಕಂಡು ಕರಗಿದ ಸುದೀಪ್, ಮಾಡಿದ್ದೇನು ನೋಡಿ
ಕಿಚ್ಚ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಜಾದ್ ಖಾನ್ ಎನ್ನುವ ಬಾಲಕನನ್ನು ಭೇಟಿಯಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕ ಕಿಚ್ಚನ ಅಪ್ಪಟ ಅಭಿಮಾನಿ. ಒಮ್ಮೆಯಾದರು ಸುದೀಪ್ ಅವರನ್ನು ನೋಡಬೇಕು ಎನ್ನುವ ಆಸೆ. ಅಭಿಮಾನಿಯ ಆಸೆ ಈಡೇರಿಸಿದ್ದಾರೆ ಸುದೀಪ್. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಸುದೀಪ್ ಕಿಚ್ಚನ ಮೇಲೆ ಹುಚ್ಚು ಪ್ರೀತಿ ಅಂತ ಆಟೋ ಮೇಲೆ ಬರೆದಿದ್ದ ಸಾಲು ನೋಡಿ ಕಾರು ನಿಲ್ಲಿಸಿ ಆಟೋ ಡ್ರೈವರ್ ಅವರನ್ನು ಮಾತನಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕಿಚ್ಚ ಸುದೀಪ್ ವಿಕ್ರಾಂತ್ ರೋಣ ರಿಲೀಸ್ ಜೊತೆಗೆ ಬಿಗ್ ಬಾಸ್ ಒಟಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದ್ದು ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿದೆ. ಈ ನಡುವೆ ಕಿಚ್ಚ ವಿಶೇಷ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಜಾದ್ ಖಾನ್ ಎನ್ನುವ ಬಾಲಕನನ್ನು ಭೇಟಿಯಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕ ಕಿಚ್ಚನ ಅಪ್ಪಟ ಅಭಿಮಾನಿ. ಒಮ್ಮೆಯಾದರು ಸುದೀಪ್ ಅವರನ್ನು ನೋಡಬೇಕು ಎನ್ನುವ ಆಸೆ. ಅಭಿಮಾನಿಯ ಆಸೆ ಈಡೇರಿಸಿದ್ದಾರೆ ಸುದೀಪ್. ನಿರ್ಮಾಪಕ ಜಾಕ್ ಮಂಜು ಅವರ ಸಹಾಯದಿಂದ ಪುಟ್ಟ ಬಾಲಕ ಸುದೀಪ್ ಅವರನ್ನು ಭೇಟಿಯಾಗಿ ಸಂತಸ ಪಟ್ಟಿದ್ದಾನೆ.ಇನ್ನು ಬಿಗ್ ಬಾಸ್ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಸುದೀಪ್ ಆಟೋ ಮೇಲೆ ಕಿಚ್ಚನ ಮೇಲೆ ಹುಚ್ಚು ಪ್ರೀತಿ ಅಂತ ಆಟೋ ಮೇಲೆ ಬರೆದಿದ್ದ ಸಾಲು ನೋಡಿ ಕಾರು ನಿಲ್ಲಿಸಿ ಆಟೋ ಡ್ರೈವರ್ ಅವರನ್ನು ಮಾತನಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.