ಕಿಚ್ಚನ ಕೈ ಹಿಡಿಯಿತು ವರ್ಷಾಂತ್ಯದ ಲಕ್; ಮ್ಯಾಕ್ಸ್ ಗಳಿಸಿದ್ದೆಷ್ಟು ಗೊತ್ತಾ?
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಚಿತ್ರೀಕರಣದ ವೇಳೆ ಕೆಲವು ದೃಶ್ಯಗಳನ್ನು ತಾಯಿ ಸರೋಜಮ್ಮನಿಗೆ ತೋರಿಸಿದ್ದ ಸುದೀಪ್, ಅವುಗಳನ್ನು ನೋಡಿ ಥ್ರಿಲ್ ಆಗಿದ್ದ ತಾಯಿ ಬಿಗ್ ಸ್ಕ್ರೀನ್ ಮೇಲೆ ಚಿತ್ರ ನೋಡಲು ಆಸೆಪಟ್ಟಿದ್ದರು.
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಮೂವಿ ಮೆಗಾ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ನೋಡಿದ ಫ್ಯಾನ್ಸ್ ಮ್ಯಾಕ್ಸ್ ಮ್ಯಾಕ್ಸಿಮಮ್ ಎಂಟರ್ಟೈನಿಂಗ್ ಆಗಿದೆ ಅಂತಿದಾರೆ. ಬಾಕ್ಸಾಫೀಸ್ನಲ್ಲೂ ಸಿನಿಮಾ ಕಮಾಲ್ ಮಾಡ್ತಾ ಇದೆ. 2024ರ ವರ್ಷಾಂತ್ಯಕ್ಕೆ ಬಂದಿರೋ ಮ್ಯಾಕ್ಸ್ ಸಿನಿಮಾ ಅಮೋಘ ಸಕ್ಸಸ್ ಕಂಡಿದೆ. ಎರಡೂವರೇ ವರ್ಷಗಳ ಗ್ಯಾಪ್ ನಂತರ ಬಂದಿರೋ ಕಿಚ್ಚನ ಸಿನಿಮಾಗೆ ಅಭಿಮಾನಿಗಳ ಮೆಚ್ಚುಗೆ ಸಿಕ್ಕಿದೆ. ಒಂದೇ ರಾತ್ರಿಯಲ್ಲಿ ನಡೆಯೋ ಈ ಥ್ರಿಲ್ಲಿಂಗ್ ಕಹಾನಿಯಲ್ಲಿ ಕಿಚ್ಚ ಮ್ಯಾಕ್ಸಿಮಮ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಅಸಲಿಗೆ ಮ್ಯಾಕ್ಸ್ ಸಿನಿಮಾ ಸೆಟ್ಟೇರಿದಾಗ ಇದ್ರಲ್ಲಿನ ಕಿಚ್ಚನ ಗೆಟಪ್ ನೋಡಿ ತಾಯಿ ಸರೋಜಮ್ಮ ಸಖತ್ ಖುಷಿಯಾಗಿದ್ರಂತೆ. ಈ ಸಿನಿಮಾದ ಚಿತ್ರೀಕರಣ ನಡೀತಾ ಇದ್ದ ವೇಳೆ ಕೆಲವು ದೃಶ್ಯಗಳನ್ನ ಅಮ್ಮನಿಗೆ ತೋರಿಸಿದ್ರಂತೆ ಸುದೀಪ್. ಅವುಗಳನ್ನ ನೋಡಿಯೇ ಥ್ರಿಲ್ ಆಗಿದ್ದ ಅಮ್ಮ ಸಿನಿಮಾನ ಬಿಗ್ ಸ್ಕ್ರೀನ್ ಮೇಲೆ ಚಿತ್ರ ನೋಡೋದಕ್ಕೆ ಆಸೆ ಪಟ್ಟಿದ್ರು. ಆದ್ರೆ ವಿಧಿ ಅದಕ್ಕೆ ಅವಕಾಶ ಕೊಡಲೇ ಇಲ್ಲ. ಇಷ್ಟೋಂದು ಮನರಂಜನೆ ಕೊಡುತ್ತಿರುವ ಮ್ಯಾಕ್ಸ್ ಸಿನಿಮಾ ಕಲೆಕ್ಷನ್ ಎಷ್ಟು ಮಾಡಿದೆ?
ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್