Small Screen
ಕಲರ್ಸ್ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 23ರಿಂದ ಹೊಸ ಧಾರಾವಾಹಿ ನೂರು ಜನ್ಮಕ್ಕೂ ಪ್ರಸಾರವಾಗುತ್ತಿದೆ. ಇದರಲ್ಲಿ ನಾಯಕನ್ನೊಬ್ಬ ನಾಯಕಿಯರಿಬ್ಬರು.
ಮೈತ್ರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುಂದರಿ ಹೆಸರು ಶಿಲ್ಪಾ ಕಾಮತ್. ಈಕೆ ಮಿಸ್ ಮಂಗಳೂರು 2023ರಲ್ಲಿ ಸೆಕೆಂಡ್ ರನ್ನರ್ ಅಪ್ ಸ್ಥಾನ ಗೆದ್ದಿದ್ದಾರೆ.
ಶಿಲ್ಪಾ ಕಾಮತ್ ಹುಟ್ಟಿದ್ದು ಉಡುಪಿ ಆದರೂ ಸಂಪೂರ್ಣವಾಗಿ ಬೆಳೆದಿದ್ದು ಮಂಗಳೂರಿನಲ್ಲಿ. ಧಾರಾವಾಹಿಗೋಸ್ಕರ ಬೆಂಗಳೂರಿಗೆ ಶಿಲ್ಫ್ ಆಗಿದ್ದಾರೆ.
ಎಂಕಾಮ್ ಪದವಿಧರೆ ಆಗಿರುವ ಶಿಲ್ಪಾ ಕಾಮತ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು ಹಲವಾರು ಫೋಟೋಶೂಟ್‌ಗಳನ್ನು ಮಾಡಿಸಿದ್ದಾರೆ.
ವಿದ್ಯಾಭ್ಯಾಸ ಮುಗಿದ ಮೇಲೆ ಮಂಗಳೂರಿನ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿದ್ದಾರೆ. ಅದಾ ಮೇಲೆ ಪ್ರತಿಷ್ಠಿತ ಐಟಿ ಕಂಪನಿಯಲ್ಲೂ ಕೆಲಸ ಮಾಡಿರುವ ಅನುಭವವಿದೆ.
ಮೊದಲು ಮಂಗಳೂರಿನ ಶಾರ್ಟ್ ಮೂವಿಯಲ್ಲಿ ನಟಿಸಿ ಆನಂತರ ರಂಗಸ್ಥಳ ಎಂದ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಸದ್ಯ ನೂರು ಜನ್ಮಕ್ಕೂ ಅವರ ಕೈ ಹಿಡಿದಿದೆ.
'ಇದು ನನ್ನ ಮೊದಲ ಧಾರಾವಾಹಿ ಆಗಿರು ಕಾರಣ ತುಂಬಾ ಎಕ್ಸೈಟ್ ಆಗಿದ್ದೀನಿ. ಇದು ನನಗೆ ಹೊಸತು' ಎಂದು ಶಿಲ್ಪಾ ಹೇಳಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಫೋಟೋಗಳನ್ನು ನೋಡಿ ಪ್ರೊಡಕ್ಷನ್ ಮ್ಯಾನೇಜರ್ ಮೆಸೇಜ್ ಮಾಡಿದ್ದಾರೆ. ಅದಾದ ಮೇಲೆ ಶಿಲ್ಪಾ ಒಂದ ಆಡಿಷನ್ ಕೊಟ್ಟಿದ್ದಾರೆ.
ಕುಟುಂಬದ ಜೊತೆ ಅಯೋಧ್ಯೆ ರಾಮನ ದರ್ಶನ ಪಡೆದ ಕಿರುತೆರೆಯ ವಿಲನ್ ಭಾನುಮತಿ
Flying Passport ಟ್ರಾವೆಲ್ ಜರ್ನಿಗೆ 14 ವರ್ಷ…. ಬ್ಯೂಟಿಫುಲ್ ಪಿಕ್ಸ್ ಇಲ್ಲಿದೆ
ಮೈಕೊರೆಯುವ ಚಳಿಯಲ್ಲಿ ಲಂಡನ್’ನಲ್ಲಿ ಕ್ರಿಸ್ಮಸ್ ಸಂಭ್ರಮಿಸಿದ ದೀಪಿಕಾ ದಾಸ್
ಬಿಗ್‌ಬಾಸ್ ಬಂದು ತಪ್ಪು ಮಾಡಿದೆ, ಚೈತ್ರಾ ಕುಂದಾಪುರ ಪಶ್ಚಾತಾಪಕ್ಕೆ ಕಾರಣವೇನು?