ಕಿಚ್ಚನ ಹುಚ್ಚ ಸಿನಿಮಾಗೆ 21ರ ಹರೆಯ, ಅಂದೂ, ಇಂದೂ ಫೇಮಸ್ ಈ ಸೀನ್!

ಉಸಿರೇ ಉಸಿರೇ, ಈ ಉಸಿರ ಕೊಲ್ಲಬೇಡ....ಈ ಹಾಡು ಇವತ್ತಿಗೂ ಯಂಗ್ ಸ್ಟರ್ಸ್, ಲವ್ವರ್ಸ್ , ಭಗ್ನ ಪ್ರೇಮಿಗಳ ಹಾರ್ಟ್ ಫೇವರೇಟ್. ಅದಕ್ಕೆ ಕಾರಣ ಹಾಡಿನ ಲೈನ್ಸ್ ಹಾಗೂ ಕಿಚ್ಚನ ಲುಕ್ . ಈ ಹಾಡಿನಲ್ಲಿ ಕಿಚ್ಚನ ಹೇರ್ ಸ್ಟೈಲ್ ಹಾಗೂ ಸಿಗರೇಟ್ ಹಿಡಿಯೋ ಸ್ಟೈಲ್ ಗೆ ಸಾಕಷ್ಟು  ಜನರು ಫ್ಯಾನ್ಸ್ ಆಗಿ ಫಾಲೋ ಕೂಡ ಮಾಡಿದ್ರು.

Share this Video
  • FB
  • Linkdin
  • Whatsapp

ಉಸಿರೇ ಉಸಿರೇ, ಈ ಉಸಿರ ಕೊಲ್ಲಬೇಡ....ಈ ಹಾಡು ಇವತ್ತಿಗೂ ಯಂಗ್ ಸ್ಟರ್ಸ್, ಲವ್ವರ್ಸ್ , ಭಗ್ನ ಪ್ರೇಮಿಗಳ ಹಾರ್ಟ್ ಫೇವರೇಟ್. ಅದಕ್ಕೆ ಕಾರಣ ಹಾಡಿನ ಲೈನ್ಸ್ ಹಾಗೂ ಕಿಚ್ಚನ ಲುಕ್ . ಈ ಹಾಡಿನಲ್ಲಿ ಕಿಚ್ಚನ ಹೇರ್ ಸ್ಟೈಲ್ ಹಾಗೂ ಸಿಗರೇಟ್ ಹಿಡಿಯೋ ಸ್ಟೈಲ್ ಗೆ ಸಾಕಷ್ಟು ಜನರು ಫ್ಯಾನ್ಸ್ ಆಗಿ ಫಾಲೋ ಕೂಡ ಮಾಡಿದ್ರು. ಈಗ ಈ ಹಾಡಿನ ಸಿನಿಮಾಗೆ 21ರ ಹರೆಯ. ಸುದೀಪ್ ಹೆಸರಿನ ಜೊತೆ ಕಿಚ್ಚ ಅನ್ನೋ ಬಿರುದು ಸೇರಿ 21 ವರ್ಷವಾಗಿದೆ. ಸುದೀಪ್ ಕಂಡೊಡಣೆ ಅಭಿಮಾನಿಗಳು ಕಿಚ್ಚ ಕಿಚ್ಚ ಅಂತ ಕೂಗೋದಕ್ಕೆ ಶುರು ಮಾಡಿದ್ದೇ ಈ ಹುಚ್ಚ ಚಿತ್ರದಿಂದ ಅನ್ನೋದು ಸುದೀಪ್ ಗೆ ಹೆಮ್ಮೆಯ ವಿಚಾರ. ಹುಚ್ಚ ಸಿನಿಮಾ ಕಿಚ್ಚ ಸುದೀಪ್ ಗೆ ಮಾತ್ರವಲ್ಲ .. ಸಿನಿಮಾ ಪ್ರೇಮಿಗಳಿಗೂ ಸಾಕಷ್ಟು ನೆನಪುಗಳನ್ನ ಕೊಟ್ಟ ಚಿತ್ರ. ಹುಚ್ಚ ಚಿತ್ರದಲ್ಲಿ 'ಹೇ ಇಲ್ ಬಾ...' ಅಂತ ಹೀರೋಯಿನ್ ಗೆ ಸುದೀಪ್ ಕಿಚ್ಚಾಯಿಸೋ ಸೀನ್ ಇಂದಿಗೂ ಸಖತ್ ಫೇಮಸ್.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಚ್ಚ ಮತ್ತು ಈಗ ಸಿನಿಮಾ ಸುದೀಪ್ ಕೆರಿಯರ್ ನಲ್ಲಿ ಟರ್ನಿಂಗ್ ಪಾಯಿಂಟ್ ಚಿತ್ರಗಳು. ಹುಚ್ಚ ಚಿತ್ರದಂತೆ ಈಗ ಸಿನಿಮಾ ರಿಲೀಸ್ ಆಗಿ 10 ವರ್ಷ ಕಳೆದಿದೆ. ಕೇವಲ ಟಾಲಿವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಿಚ್ಚನ ಅಭಿನಯಕ್ಕೆ ಶಹಬಾಸ್ ಎಂದಿತ್ತು. 

Related Video