ವಿಕ್ರಾಂತ್ ರೋಣ ಹಬ್ಬಕ್ಕೆ ಕೌಂಟ್‌ಡೌನ್: ಥಿಯೇಟರ್ ಮುಂದೆ ಸಂಭ್ರಮಕ್ಕೆ ಸಜ್ಜಾದ ಫ್ಯಾನ್ಸ್!

ವಿಕ್ರಾಂತ್ ರೋಣ  ಸಿನಿಮಾ ಬಿಡುಗಡೆಗೆ ಇನ್ನು ಒಂದು ವಾರ ಇರುವಾಗ್ಲೆ ಸಿನಿಮಾ ಕಟೌಟ್ಗಳು ಬಣ್ಣ ಬಳಿದುಕೊಂಡು ಥಿಯೇಟರ್ ಮುಂದೆ ತಲೆ ಎತ್ತಲು ಸನ್ನದ್ಧವಾಗಿವೆ.  ಹೀಗಾಗಿ ಸುದೀಪ್ ಕಟೌಟ್ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ.

Share this Video
  • FB
  • Linkdin
  • Whatsapp

ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಇನ್ನು ಒಂದು ವಾರ ಇರುವಾಗ್ಲೆ ಸಿನಿಮಾ ಕಟೌಟ್‌ಗಳು ಬಣ್ಣ ಬಳಿದುಕೊಂಡು ಥಿಯೇಟರ್ ಮುಂದೆ ತಲೆ ಎತ್ತಲು ಸನ್ನದ್ಧವಾಗಿವೆ. ಹೀಗಾಗಿ ಸುದೀಪ್ ಕಟೌಟ್‌ಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಕರ್ನಾಟಕದಲ್ಲಿ 500 ಕ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ತೆರೆ ಕಾಣುತ್ತಿದ್ದು, ಬೇರೆ ಜಿಲ್ಲೆ, ತಾಲೂಕುಗಳಿಂದ ಅಭಿಮಾನಿಗಳು ಕಟೌಟ್‌ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆನಂದ್ ಆರ್ಟ್ಸ್ ಸೇರಿದಂತೆ ಬೆಂಗಳೂರಿನ ಹಲವೆಡೆ ವಿಕ್ರಾಂತ್ ರೋಣ ಕಟೌಟ್ಸ್ ಸಿದ್ಧವಾಗ್ತಿವೆ.

Add Asianetnews Kannada as a Preferred SourcegooglePreferred

ವಿಕ್ರಾಂತ್ ರೋಣ ಸಿನಿಮಾದ ಸಂಭ್ರಮದ ಜೊತೆ ಕಿಚ್ಚನ ಫ್ಯಾನ್ಸ್ ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ವಿಶೇಷ ಗೌರವ ಸಲ್ಲಿಸಲು ಸಿದ್ಧರಾಗಿದ್ದಾರೆ.ಅಪ್ಪುಗೆ ಪ್ರೀತಿಯ ಅಭಿಷೇಕ ಮತ್ತು ಪೂಜೆ ಮಾಡಲು ಪ್ಲಾನ್ ಮಾಡಿರೋ ಕಿಚ್ಚನ ಫ್ಯಾನ್ಸ್ ಹಲವು ಚಿತ್ರಮಂದಿರಗಳ ಮುಂದೆ ಸುದೀಪ್ ಹಾಗು ಪುನೀತ್ ರಾಜ್ಕುಮಾರ್ ಒಟ್ಟಿಗೆ ಇರೋ ಭಾವಚಿತ್ರದ ಕಟೌಟ್ ಹಾಕಲಿದ್ದಾರೆ. ಖಾಸಗಿ ಕಾರ್ಯಕ್ರಮ ಒಂದರಲ್ಲಿ ಕಿಚ್ಚ ಅಪ್ಪು ಇಬ್ಬರು ಅಪ್ಪಿಕೊಂಡು ತನ್ನ ಸ್ನೇಹ ಎಷ್ಟು ಗಟ್ಟಿಯಾಗಿದ್ದು ಅಂತ ಹೇಳಿದ್ರು. ಅದೇ ಫೋಟೋ ಈ ಬಣ್ಣ ಬಳ್ಳಿದುಕೊಂಡು ಕಟೌಟ್ ಆಗಿ ಚಿತ್ರಮಂದಿರಗಳ ಮುಂದೆ ನಿಲ್ಲಲಿದೆ.

Related Video