ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಯಶ್ ಮಸ್ತಿ: ಹಾರ್ದಿಕ್‌, ಕ್ರುನಾಲ್ ಜೊತೆ ರಾಕಿಭಾಯ್ ಸಖತ್ ಡಾನ್ಸ್, ವಿಡಿಯೋ ವೈರಲ್

ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಯಶ್ ಸಖತ್ ಮಸ್ತಿ ಮಾಡಿದ್ದಾರೆ. ಹಾರ್ದಿಕ್‌, ಕ್ರುನಾಲ್ ಜೊತೆ ರಾಕಿಭಾಯ್ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.  

First Published Jun 19, 2023, 4:37 PM IST | Last Updated Jun 19, 2023, 4:37 PM IST

ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್‌ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ-ನತಾಶಾ ಮದುವೆಗೆ ಕಳೆದ ಫೆಬ್ರವರಿಯಲ್ಲಿ ಹೋಗಿದ್ದರು. ಹಾರ್ದಿಕ್‌ ಪಾಂಡ್ಯ ಮದುವೆಯಲ್ಲಿ ಯಶ್ ಹೇಗೆಲಾ ಮಸ್ತಿ ಮಾಡಿದ್ದಾರೆ ಅಂತ ಗೊತ್ತಾಗ್ತಿರೋದು ಈಗ. ಯಾಕಂದ್ರೆ ಇಷ್ಟು ದಿನ ಯಶ್ ದಂಪತಿ ಹಾರ್ದಿಕ್‌ ಪಾಂಡ್ಯ ಮದುವೆಗೆ ಹೋದ ಪೋಟೋಗಳು ಮಾತ್ರ ಹರಿದಾಡ್ತಿದ್ವು. ಈಗ ಆ ಮದುವೆಯ ಮಸ್ತ್ ಕ್ಷಣಗಳ ಹಲವು ವೀಡಿಯೋಗಳು ಒಂದೊಂದಾಗೆ ಹೊರ ಬರುತ್ತಿವೆ. ಹಾರ್ದಿಕ್ ಪಾಂಡ್ಯ ದಂಪತಿಗಳ ಜೊತೆ ಯಶ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಹಾರ್ದಿಕ್‌ ತಮ್ಮ ಕೃನಾಲ್ ಪಾಂಡ್ಯಾರನ್ನ ಡಾನ್ಸ್ ವೇದಿಕೆಗೆ ತಳ್ಳಿದ್ದಾರೆ ಯಶ್.