ಗಲ್ಲಿ ಗಲ್ಲಿಯಲ್ಲಿಯೂ ರಾಕಿಭಾಯ್ ಲುಕ್: ಟ್ರೆಂಡ್ ಸೆಟ್ ಮಾಡಿದ ಕೆಜಿಎಫ್ ಹೇರ್ ಸ್ಟೈಲ್
ಕೆಜಿಎಫ್ ಸಿನಿಮಾದ ರಾಕಿಭಾಯ್ ಹೇರ್ ಸ್ಟೈಲ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಕಿ ಹೇರ್ ಸ್ಟಾರ್ ಟ್ರೆಂಡ್ ಸೆಟ್ ಮಾಡಿದೆ.
ಕೆಜಿಎಫ್ ಸಿನಿಮಾ ರಿಲೀಸ್ ಆದಾಗ ವಾವ್ಹ್ ಒಂದೊಂದು ಕ್ಯಾರೆಕ್ಟರ್ ನ ಎಷ್ಟು ಚೆನ್ನಾಗಿ ಡಿಸೈನ್ ಮಾಡಿದ್ದಾರೆ ಅನ್ನೋ ಟಾಕ್ ಜೋರಾಗಿತ್ತು...ಅದೇ ರೀತಿ ರಾಕಿ ಭಾಯ್ ಲುಕ್ಕಿಗಂತು ಎಲ್ಲರೂ ಫಿದಾ ಆಗಿದ್ರು. ಏನ್ ಹೇರ್ ಸ್ಟೈಲ್, ಹೆಂಗಿದೆ ಗೊತ್ತಾ ಯಶ್ ಬಿಯರ್ಡ್ ಅನ್ನೋರೆ ಹೆಚ್ಚಾಗಿದ್ರು. ಲುಕ್ ರಿವಿಲ್ ಆದ ಕೆಲವೇ ದಿನಗಳಲ್ಲಿ ಯಶ್ ಲುಕ್ ಅನ್ನ ಎಲ್ಲರೂ ಫಾಲೋ ಮಾಡೋದಕ್ಕೆ ಶುರು ಮಾಡಿದ್ರು. ಈಗ ಅದೇ ನಂಬರ್ ಒನ್ ಟ್ರೆಂಡಿಂಗ್ ನಲ್ಲಿರೋ ಸ್ಟೈಲ್. ಅಲ್ಲಿ ನೋಡು ಗಣೇಶ ಇಲ್ಲಿ ನೋಡೋ ಗಣೇಶ ಅನ್ನೋ ರೀತಿ.. ಅಲ್ಲಿ ನೋಡು ರಾಕಿ ಭಾಯ್. ಇಲ್ಲಿ ನೋಡು ರಾಕಿ ಭಾಯ್ ಅನ್ನೋ ಹಾಗೆ ಆಗಿದೆ..ಯಾಕಂದ್ರೆ ಎಲ್ಲಿ ನೋಡಿದ್ರು ರಾಕಿ ಭಾಯ್ ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಓಡಾಡ್ತಿರೋರೆ ಹೆಚ್ಚಾಗಿದ್ದಾರೆ. ಎಷ್ಟೋ ಜನ.. ಯಾರ್ ಯಾರನ್ನೋ ನೋಡಿ ಯಶ್ ಅಂದುಕೊಂಡು ಹತ್ತಿರ ಹೋಗಿ ಮೋಸ ಹೋಗಿದ್ದಾರೆ.