ಜಪಾನ್‌ನಲ್ಲೂ ಕೆಜಿಎಫ್, ಕೆಜಿಎಫ್-2 ಮೇನಿಯಾ: ಆ ಭಾಷೆಯಲ್ಲಿ ರಾಕಿ ಹೇಳಿದ್ದೇನು ಗೊತ್ತಾ..?

ಭಾರತೀಯ ಸಿನಿಮಾಗಳಿಗೆ ಜಪಾನ್‌ನಲ್ಲಿ ಭಾರಿ ಬೇಡಿಕೆ..!
ಜಪಾನ್‌ಗೆ ಡಬ್ ಆದ ಮೊದಲ ಕನ್ನಡ ಸಿನಿಮಾ ಕೆಜಿಎಫ್! 
ಜಪಾನ್‌ನಲ್ಲಿ ರಾಕಿ ಭಾಯ್‌ ಕೆಜಿಎಫ್ ಬಿಡುಗಡೆ ಯಾವಾಗ..?

First Published Jul 9, 2023, 1:32 PM IST | Last Updated Jul 9, 2023, 1:32 PM IST

ಇಂಡಿಯನ್ ಸಿನಿಮಾ ಜಗತ್ತಿನ ಸಾವಿರ ಕೋಟಿ ಸರದಾರ ಕೆಜಿಎಫ್ (KGF) ಸಿನಿಮಾ ಈಗ ಜಪಾನಿಗರನ್ನ ರಂಜಿಸೋಕೆ ರೆಡಿಯಾಗಿದೆ. ಕೆಜಿಎಫ್ 1 ಹಾಗೂ ಕೆಜಿಎಫ್ 2 ಸಿನಿಮಾಗಳು ಜಪಾನಿ ಭಾಷೆಗೆ ಡಬ್ ಆಗಿ ಅಲ್ಲಿನ ಥಿಯೇಟರ್‌ನಲ್ಲಿ ರಾರಾಜಿಸೋಕೆ ಬರ್ತಾ ಇವೆ. ಕೆಜಿಎಫ್ ಕಿಂಗ್ ರಾಕಿಂಗ್ ಸ್ಟಾರ್ ಯಶ್ಗೆ(Rocking star Yash) ವಿಶ್ವಾದ್ಯಂತ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ‘ಕೆಜಿಎಫ್ 2’ ಸಿನಿಮಾ ಹಲವು ರಾಷ್ಟ್ರಗಳಲ್ಲಿ ರಿಲೀಸ್ ಆಗಿತ್ತು. ಈಗ ಕೆಜಿಎಫ್ ಹಾಗೂ ಕೆಜಿಎಫ್ 2 ಜಪಾನ್ (Japan) ಭಾಷೆಯಲ್ಲಿ ಬರ್ತಾ ಇದೆ. ಈ ಖುಷಿಯನ್ನ ಜಪಾನಿ ಭಾಷೆಯಲ್ಲೇ ಹಂಚಿಕೊಂಡಿದ್ದಾರೆ ರಾಕಿ. ಜಪಾನ್ನಲ್ಲಿ ಭಾರತೀಯ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR cinema) ಜಪಾನ್ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಜುಲೈ 14ಕ್ಕೆ ‘ಪಠಾಣ್’ ಸಿನಿಮಾ ಜಪಾನ್ನಲ್ಲಿ ತೆರೆಗೆ ಬರುತ್ತಿದೆ. ಈಗ ‘ಕೆಜಿಎಫ್’ ಸಿನಿಮಾ ಕೂಡ ಇದೇ ಸಾಲಿಗೆ ಸೇರುತ್ತಿದೆ. ಜಪಾನ್ ಭಾಷೆಗೆ ಡಬ್ ಆಗಿ ತೆರೆಗೆ ಬರುತ್ತಿರುವ ಮೊದಲ ಕನ್ನಡ ಸಿನಿಮಾ ಅನ್ನೋದು ಕೆಜಿಎಫ್ನ ಮತ್ತೊಂದು ಹೆಗ್ಗಳಿಕೆಯಾಗಿದೆ.

ಇದನ್ನೂ ವೀಕ್ಷಿಸಿ:  ಮೊದಲು ಕರೆಂಟ್ ಶಾಕ್.. ಸತ್ತ ಮೇಲೆ ಪೀಸ್ ಪೀಸ್..!: ಕೊಟ್ಟ ಹಣ ಕೇಳಿದ್ದಕ್ಕೆ ಆಶ್ರಮದಲ್ಲೇ ಮುನಿ ಮರ್ಡರ್..!