ಮೊದಲು ಕರೆಂಟ್ ಶಾಕ್.. ಸತ್ತ ಮೇಲೆ ಪೀಸ್ ಪೀಸ್..!: ಕೊಟ್ಟ ಹಣ ಕೇಳಿದ್ದಕ್ಕೆ ಆಶ್ರಮದಲ್ಲೇ ಮುನಿ ಮರ್ಡರ್..!

ಚಿಕ್ಕೋಡಿಯ ಹಿರೇಕೋಡಿಯ ಜೈನಮುನಿಗಳ ಹತ್ಯೆಯನ್ನು ಮಾಡಲಾಗಿದೆ. ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಕರೆಂಟ್‌ ಶಾಕ್‌ ಕೊಟ್ಟು ಕೊಲೆ ಮಾಡಲಾಗಿದೆ.

First Published Jul 9, 2023, 1:15 PM IST | Last Updated Jul 9, 2023, 1:15 PM IST

ಬೆಳಗಾವಿ: ಅವರು ಜೈನ ಮುನಿಗಳು.. 40 ವರ್ಷಕ್ಕೆ ದೀಕ್ಷೆ ಪಡೆದು. ಧರ್ಮಪ್ರಾಚರಕ್ಕೆ ನಿಂತಿದ್ರು. ದೇಶವನ್ನೆಲ್ಲಾ ಸುತ್ತಿ ಕೊನೆಗೆ ನೆಲೆ ಕಂಡುಕೊಂಡಿದ್ದು ನಮ್ಮ ಕರ್ನಾಟಕದಲ್ಲಿ.. ಕೋಳೆದ 15 ವರ್ಷದಿಂದ ಬೆಳಗಾವಿಯಲ್ಲಿ(Belagavi) ಧರ್ಮ ಸೇವೆಯಲ್ಲಿ ನಿರತರಾಗಿದ್ದ ಜೈನ ಮುನಿ(Jain Monk) ಆವತ್ತೊಂದು ದಿನ ಮಿಸ್ಸಿಂಗ್.. ರಾತ್ರಿ ಕೊಠಡಿಯಲ್ಲಿ ಮಲಗಿದ್ದವರು ಬೆಳಗಾಗೋದ್ರಲ್ಲಿ ನಾಪತ್ತೆ. ಅವರಿಗಾಗಿ ಅವರ ಭಕ್ತರು ಹುಡಕಾಡದ ಜಾಗವೇ ಇಲ್ಲ.. ದಿನಪೂರ್ತಿ ಅವರಿಗಾಗಿ ಹುಡುಕಾಡಿದ ಭಕ್ತರು ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ರು. ಪೊಲೀಸರು ಅಖಾಡಕ್ಕಿಳಿದ್ರು. ಆಶ್ರಮದ ಸಿಬ್ಬಂದಿಗಳನ್ನೆಲ್ಲಾ ವಿಚಾರಣೆ ಮಾಡಿದ್ರು. ಹತ್ತಾರು ಮಂದಿಯನ್ನ ಪ್ರಶ್ನೆ ಮಾಡಿದ್ರು.. ಆದ್ರೆ ಆ ಹತ್ತಾರು ಮಂದಿಯಲ್ಲಿ ಒಬ್ಬ ಕೊಟ್ಟ ಹೇಳಿಕೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಅವನನ್ನೇ ಲಾಕ್ ಮಾಡಿಕೊಂಡು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಆತ ಕೊಟ್ಟ ಒಂದೊಂದು ಹೇಳಿಕೆಯೂ ಪೊಲೀಸರ ತಲೆ ತಿರುಗುವಂತೆ ಮಾಡಿತ್ತು. ಆಗ ಆತ ತಾನೇ ಕೊಲೆ(Murder) ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೂ ಜೈನಮುನಿಗಳ ಮೃತದೇಹ ಕೊಳವೆ ಬಾವಿಯಲ್ಲಿ ಪೀಸ್‌ ಪೀಸ್‌ ಆಗಿ ಸಿಕ್ಕಿದೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ವೀಕ್ಷಿಸಿ:  ನಿತ್ಯಾನಂದನ ಕೈಲಾಸದಲ್ಲಿ ರಾಜಕೀಯ ಬೆಳವಣಿಗೆ: ನಿತ್ಯನ ಸರ್ವಾಧಿಕಾರ, ರಂಜಿತಾ ಮಂತ್ರಿಮಂಡಲ.. ಏನಿದು ಕತೆ.?