Asianet Suvarna News Asianet Suvarna News

50 ಸಾವಿರದಿಂದ 10 ಕೋಟಿಯವರೆಗೆ ಧ್ರುವ ಸಿನಿಪಯಣ.. ಮೊದಲ ಸಂಭಾವನೆಯಿಂದ ನಟ ಮಾಡಿದ್ದೇನು..?

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್‌ಗೆ 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ರಾತ್ರಿಯಿಂದಲೇ ಶುಭಾಶಯದ ಸುರಿಮಳೆಯನ್ನೇ ಸುರಿಸ್ತಿದ್ದಾರೆ. ಅದರಲ್ಲೂ ಧ್ರುವ ಅಣ್ಣನ ಅಗಲುವಿಕೆಯಿಂದ ಮೂರು ವರುಷದಿಂದ ಹುಟ್ಟುಹಬ್ಬವನ್ನೇ ಆಚರಿಸಿರಲಿಲ್ಲ. ಈ ಬಾರಿ ಬರ್ತಡೇ ಸೆಲೆಬ್ರೆಟ್ ಮಾಡ್ತಿದ್ದರಿಂದ ಧ್ರುವ ಅಭಿಮಾನಿಗಳಿಗೆ ಹಬ್ಬವೇ ಆದಂತಿದೆ. ಇದೇ ಸಂದರ್ಭದಲ್ಲಿ ಧ್ರುವ ಕೂಡ ಅಭಿಮಾನಿಗಳಿಗಾಗಿ ಸ್ಪೆಷಲ್ ಟ್ರಿಟ್ ಕೊಟ್ಟಿದ್ದಾರೆ. 

ಧ್ರುವ ಸರ್ಜಾ , ಸ್ಕ್ರಿನ್ ಮೇಲೆ ಅದ್ಧೂರಿಯಾಗಿ ಬರ್ತಿದ್ದರೆ ಸಾಕು.. ಆ ಬಹದ್ದೂರ್‌ ಗಂಡಿನ  ಖದರ್‌ ಬೇರೆಯಾಗಿರುತ್ತೆ. ಅದರಲ್ಲೂ ಪೊಗರಿನಿಂದ ಡೈಲಾಗ್ ಹೇಳ್ತಿದ್ರೆ  ಥೀಯೇಟರ್‌ನಲ್ಲಿ ಶಿಳ್ಳೆ ಚಪ್ಪಾಳೆಗಳ ಸುನಾಮಿಯೇ ಎದ್ಬಿಟ್ಟಿರುತ್ತೆ. ಹಾಗಂತ ಧ್ರುವ ಕೇವಲ ಪಡ್ಡೆ ಹೈಕಳ ಹೃದಯ ಗೆದ್ದವರಲ್ಲ, ಚಾರ್ಮಿಂಗ್ ಸ್ಮೈಲ್‌ನಿಂದ ಅದೆಷ್ಟೋ ಯುವತಿಯರ ನಿದ್ದೆಯನ್ನೂ ಕೆಡಿಸಿದ ಕ್ರೆಡಿಟ್ ಇವರಿಗೆ ಸಲ್ಲುತ್ತೆ. ಇಂದು ಧ್ರುವ ಸರ್ಜಾ(Dhruva Sarja) ಪ್ಯಾನ್ ಇಂಡಿಯಾ ಸ್ಟಾರ್(Pan India) ಆಗಿ ಗುರುತಿಸಿಕೊಳ್ತಿರೋ ನಟ. ಆದರೆ ಅದಕ್ಕೂ ಮುಂಚೆನೇ ಸ್ಟಾರ್ ಧ್ರುವ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಬ್ಯಾಕ್ ಟು ಬ್ಯಾಕ್ 3 ಹಿಟ್ ಸಿನೆಮಾಗಳನ್ನ ಕೊಟ್ಟು, ಶಿವಣ್ಣನ ನಂತರ ಹ್ಯಾಟ್ರಿಕ್ ಹಿಟ್ ಸಿನೆಮಾಗಳನ್ನ ಕೊಟ್ಟ ಹಿರೋ ಅಂತ ಅನಿಸಿಕೊಂಡಿದ್ದಾರೆ. ಆದರೂ ಧ್ರುವ ಸರ್ಜಾ ಕನ್ನಡಕ್ಕೆ ಒಬ್ಬನೇ ಹ್ಯಾಟ್ರಿಕ್ ಹಿರೋ ಅವರೇ ಶಿವರಾಜ್ಕುಮಾರ್ ಎಂದು ಹೇಳಿ ತಮ್ಮ ಸಿಂಪ್ಲಿಸಿಟಿ ತೋರಿಸಿದ್ದವರು.ಇಂದಿಗೆ ಧ್ರುವ ಸರ್ಜಾ ಸಿನಿಪಯಣ ಆರಂಭಿಸಿ 11 ವರ್ಷಗಳೇ ಕಳೆದಿದ್ದಾಗಿದೆ. ಸರ್ಜಾ ಕುಟುಂಬದ ಕುಡಿ ಅಂತ ಇವರ ಸಿನಿ ಜರ್ನಿ ರತ್ನಗಂಬಳಿಯಲ್ಲಿ ಸಾಗಿದ್ದಲ್ಲ. ಬದಲಾಗಿ ಧ್ರುವ ಸರ್ಜಾ ಕುಟುಂಬದ ಹೆಸರೆತ್ತದೇ ತಮ್ಮದೇ ಟ್ಯಾಲೆಂಟ್ನಿಂದ ಸಿನಿಮಾ ಜರ್ನಿ ಆರಂಭಿಸಿದ್ದರು. ಅದಕ್ಕಂತಾನೇ ಸಿನಿರಂಗಕ್ಕೆ ಬರೋ ಮುಂಚೆ ಡಾನ್ಸ್, ಫೈಟ್, ಆ್ಯಕ್ಟಿಂಗ್ ಕ್ಲಾಸ್ಗಳಿಗೂ ಸೇರಿ ತಯಾರಿ ಮಾಡಿಕೊಂಡಿದ್ದರು. ಎಲ್ಲಾ ತಯಾರಿ ನಂತರವೇ, 2012ರಲ್ಲಿ ತೆರೆಗೆ ಬಂದ ಇವರ ಸಿನಿಮಾ ‘ಅದ್ಧೂರಿ’. ಈ ಸಿನಿಮಾಗಾಗಿ ಧ್ರುವ ಪಡೆದ ಸಂಬಳ 50 ಸಾವಿರ ಮಾತ್ರ. ಇದೇ ಧ್ರುವ ಇಂದು ಆಕ್ಷನ್ ಪ್ರಿನ್ಸ್ ರೂಪದಲ್ಲಿ ಒಂದುಸಿನಿಮಾಗೆ 10 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ.  

ಇದನ್ನೂ ವೀಕ್ಷಿಸಿ:  Today Horoscope: ಸಿಂಹ ರಾಶಿಯವರಿಗೆ ಈ ದಿನ ಲಾಭದಾಯಕವಾಗಿದ್ದು, ಇಂದು ಆದಿತ್ಯ ಹೃದಯ ಪಠಿಸಿ

Video Top Stories