ಸ್ಯಾಂಡಲ್‌ವುಡ್‌ನಲ್ಲಿ ಕ್ರಿಕೆಟ್ ಹಬ್ಬಕ್ಕೆ ಕೌಂಟ್‌ಡೌನ್: ಕೆಸಿಸಿ ಸೀಸನ್4ರ ಪ್ರಾಕ್ಟೀಸ್‌ನಲ್ಲಿ ಸೆಂಚ್ಯೂರಿ ಸ್ಟಾರ್ ಶಿವಣ್ಣ..!
ಭಾರತೀಯ ಚಿತ್ರರಂಗದ ಬಾದ್ ಷಾ ಕಿಚ್ಚ ಸುದೀಪ್ ಮನಸ್ಸು ಮಾಡಿದ್ರೆ ಏನ್ ಆಗಲ್ಲ ಹೇಳಿ. ಎಲ್ಲವೂ ಸಾಧ್ಯವಾಗುತ್ತೆ. ಕಿಚ್ಚ ಸುದೀಪ್ ಐದು ವರ್ಷದ ಹಿಂದೆ ಇಡೀ ಸ್ಯಾಂಡಲ್‌ವುಡ್‌ನನ್ನ ಒಂದು ಮಾಡೋಕೆ ಹುಟ್ಟುಹಾಕಿದ್ದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಈಗ ನಾಲ್ಕನೇ ಆವೃತ್ತಿಗೆ ಬಂದಿದೆ.
ಇದೇ ಡಿಸೆಂಬರ್ 23 24 ಮತ್ತು 25ಕ್ಕೆ ಕೆಸಿಸಿ ಸೀಸನ್ 2 ಕ್ರಿಕೆಟ್ ಹಬ್ಬ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ(Chinnaswamy Ground) ನಡೆಯುತ್ತಿದೆ. ಕೆಸಿಸಿಯಲ್ಲಿ(KCC) ಕನ್ನಡದ ದಿಗ್ಗಜ ಸ್ಟಾರ್ಸ್ ಇದ್ದಾರೆ ಅಂತಾರಷ್ಟ್ರೀಯ ಕ್ರಿಕೆಟ್ ಆಟಗಾರರೂ(Cricket) ಆಡುತ್ತಿದ್ದಾರೆ. ಒಟ್ಟು ಆರು ತಂಡಗಳು ಕ್ರಿಕೆಟ್ ಹಬ್ಬಕ್ಕೆ ಸಾಕ್ಷಿಯಾಗಲಿದ್ದು, ಕರುನಾಡ ಚಕ್ರವರ್ತಿ ಡಾಕ್ಟರ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಈ ಭಾರಿ ರಾಷ್ಟ್ರಕೂಟ ಫ್ಯಾಂಥರ್ಸ್ ತಂಡ ಕಣಕ್ಕಿಳಿಯುತ್ತಿದೆ. ಹೀಗಾಗಿ ನಟ ಶಿವರಾಜ್ ಕುಮಾರ್(Shivaraj kumar) ಬೆಳ್ಳಂ ಬೆಳಗ್ಗೆ ಪ್ರಾಕ್ಟೀಸ್ ಮಾಡೋಕೆ ಮೈದಾನಕ್ಕೆ ಇಳಿದಿದ್ದಾರೆ. ಬೆಂಗಳೂರಿನ(Bengaluru) ಪ್ಯಾಲೇಜ್ ಗ್ರೌಂಡ್‌ನ ಬ್ರಿಜೇಶ್ ಪಟೇಲ್ ಅಖಾಡೆಮಿಯಲ್ಲಿ ಶಿವಣ್ಣ ಫುಲ್ ಎನರ್ಜಿಯಲ್ಲಿ ಬೌಲಿಂಗ್ ಬ್ಯಾಟಿಂಗ್ ಪ್ರಾಕ್ಟೀಟ್ ಮಾಡಿದ್ರು. ಬಳಿಕ ಮಾತನಾಡಿದ ಶಿವಣ್ಣ ಈ ಭಾರಿ ಕಪ್ ಗೆಲ್ಲೋದು ನಾವೇ. ನಮ್ ಟೀಂ ಸ್ಟ್ರಾಂಗ್ ಇದೆ. ನಾನು ವಿಕೆಟ್ ಕಬಳಿಸ್ತೇನೆ ಅಂದ್ರು. ಈ ಭಾರಿ ಈ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ಸುರೇಶ್ ರೈನಾ, ಮುರುಳಿ ವಿಜಯ್, ರಾಬಿನ್ ಉತ್ತಪ್ಪ, ಹರ್ಷಲ್ ಗಿಪ್ಸ್, ಎಂ ಬದ್ರಿನಾಥ್, ತಿಲಕರತ್ನೆ ದಿಲ್ಶ್ಯಾನ್ ಆಡುತ್ತಿದ್ದಾರೆ. ಇದರ ಜೊತೆಗೆ ನಟ ಕಿಚ್ಚ ಸುದೀಪ್, ಶಿವಣ್ಣ, ದುನಿಯಾ ವಿಜಯ್, ಡಾಲಿ ಧನಂಜಯ್, ಗಣೇಶ್, ಉಪೇಂದ್ರ ಒಂದೊಂದು ತಂಡ ಸೇರಿಕೊಳ್ಳಲಿದ್ದಾರೆ.
ಇದನ್ನೂ ವೀಕ್ಷಿಸಿ: ಕಾಟೇರ ರಿಲೀಸ್‌ಗೆ ಡೇಟ್ ಫಿಕ್ಸ್..! ಸಿನಿಮಾ ಟ್ರೈಲರ್ ಯಾವಾಗ ಬರುತ್ತೆ..?