777 ಚಾರ್ಲಿಗೆ ಸಿಕ್ತು ಮುಖ್ಯಮಂತ್ರಿಗಳ ಬಲ: ರಕ್ಷಿತ್-ಚಾರ್ಲಿಗೆ ಜೈ ಎಂದ ಸಿಎಂ, ಸಚಿವರು!
'777 ಚಾರ್ಲಿ' ಸಿನಿಮಾ ಪ್ರತಿಯೊಬ್ಬ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿದೆ. ರಕ್ಷಿತ್ ಶೆಟ್ಟಿಯ ನಾಯಿ ಕಥೆ ನೋಡಿ ನಕ್ಕು-ಅತ್ತು ಥಿಯೇಟರ್ನಿಂದ ಹೊರ ಬರುತ್ತಿದ್ದಾರೆ. ಈ ಸಿನಿಮಾ ನೋಡ್ಲೇಬೇಕು ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಥಿಯೇಟರ್ಗೆ ಓಡೋಡಿ ಬಂದಿದ್ರು.
'777 ಚಾರ್ಲಿ' (777 Charlie) ಸಿನಿಮಾ ಪ್ರತಿಯೊಬ್ಬ ಸಿನಿ ಪ್ರೇಕ್ಷಕರ ಮನ ಮುಟ್ಟುತ್ತಿದೆ. ರಕ್ಷಿತ್ ಶೆಟ್ಟಿಯ (Rakshit Shetty) ನಾಯಿ ಕಥೆ ನೋಡಿ ನಕ್ಕು-ಅತ್ತು ಥಿಯೇಟರ್ನಿಂದ ಹೊರ ಬರುತ್ತಿದ್ದಾರೆ. ಈ ಸಿನಿಮಾ ನೋಡ್ಲೇಬೇಕು ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಕೂಡ ಥಿಯೇಟರ್ಗೆ ಓಡೋಡಿ ಬಂದಿದ್ರು. ಖುದ್ದು ಸಿಎಂ ಬೊಮ್ಮಾಯಿ ಅವರೇ ನಾನು ಚಾರ್ಲಿ ಸಿನಿಮಾ ನೋಡ್ಬೇಕು ಅಂತ ನಟ ರಕ್ಷತ್ ಶೆಟ್ಟಿಗೆ ಕೇಳಿದ್ದಕ್ಕೆ ಸ್ಪೆಷಲ್ ಶೋ ಅರೇಂಜ್ ಮಾಡಿತ್ತು ಚಿತ್ರತಂಡ. ಹೀಗಾಗಿ ಮಾಲ್ ನಲ್ಲಿ ಸಿಎಂ ಬೊಮ್ಮಾಮಿ, ಸಚಿವ ಆರ್ ಅಶೋಕ್, ನಾಗೇಶ್ ಕುಮಾರ್, ಸುಧಾಕರ್, ನಟ ಜಗ್ಗೇಶ್ ಒಟ್ಟಿಗೆ ಕೂತು 777 ಚಾರ್ಲಿಯನ್ನ ನೋಡಿದ್ದಾರೆ.
ರಕ್ಷಿತ್ ಶೆಟ್ಟಿ ಹೈ ಕ್ವಾಲಿಟಿ ಸಿನಿಮಾಗಳನ್ನು ಕೊಟ್ಟಿದ್ದಾರೆ: ಚಾರ್ಲಿ ನೋಡಿ ತೇಜಸ್ವಿ ಸೂರ್ಯ ಪ್ರತಿಕ್ರಿಯೆ
ಸಿಎಂ ಬೊಮ್ಮಾಯಿ ಶ್ವಾನ ಪ್ರಿಯರು. ಇವ್ರ ಮನೆಯಲ್ಲಿ ಸನ್ನಿ ಅನ್ನೋ ನಾಯಿ ಇತ್ತು. ಅದು ತೀರಿಕೊಂಡಾಗ ಕಣ್ಣೀರಿಟ್ಟಿದ್ದ ಬೊಮ್ಮಾಯಿಆ ನಾಯಿಯನ್ನ ಸಂಪ್ರದಾಯ ಬದ್ಧವಾಗಿ ಅಂತ್ಯಕ್ರಿಯೆ ಮಾಡಿದ್ರು. ಈಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಚಾರ್ಲಿ ಕಥೆ ಸಿಎಂ ಬೊಮ್ಮಾಯಿ ಅವರ ಮನಸ್ಸು ಮುಟ್ಟಿದೆ. ಈ ಸಿನಿಮಾ ನೋಡಿ ಸಿಎಂ ಭಾವುಕರಾಗಿದ್ರು. ಬಳಿಕ ಮಾತನಾಡಿದ ಸಿಎಂ, ನಾನು ಶ್ವಾನ ಪ್ರಿಯ. ಮನುಷ್ಯನನ್ನ ಹೆಚ್ಚು ಪ್ರೀತಿ ಮಾಡೋ ಪ್ರಾಣಿ ನಾಯಿ. ನಾಯಿ ಮತ್ತು ಮನುಷ್ಯನ ಸಂಬಂಧವನ್ನ ಸೂಕ್ಷವಾಗಿ ತೋರಿಸಿದ್ದಾರೆ ಎಂದರು.
ಚಾರ್ಲಿಯನ್ನು ಮೆಚ್ಚಿದ ಪರಭಾಷಾ ಸ್ಟಾರ್ಸ್; ಬೋನಿ ಕಪೂರ್, ರಿಕಿ, ಮಧುರ್ ಭಂಡಾರ್ಕರ್ ಪ್ರತಿಕ್ರಿಯೆ
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದಾಗ ನಿಮ್ಮ ನೆಚ್ಚಿನ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋಗೆ ಕರೆಸಿ ಸಂದರ್ಶನ ಮಾಡಿತ್ತು. ಆಗ ಸಿಎಂಗೆ ನೆನಪಿನ ಕಾಣಿಕೆಯಾಗಿ ಹೆಣ್ಣು ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟಿದ್ರು. ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಟ್ಟ ನಾಯಿ ಮರಿಯನ್ನ ಸಿಎಂ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದಾರೆ. ಈ ಬಗ್ಗೆಯೂ ಸಿಎಂ ಹೇಳಿದ್ದಾರೆ.