ಚಾರ್ಲಿಯನ್ನು ಮೆಚ್ಚಿದ ಪರಭಾಷಾ ಸ್ಟಾರ್ಸ್; ಬೋನಿ ಕಪೂರ್, ರಿಕಿ, ಮಧುರ್ ಭಂಡಾರ್ಕರ್ ಪ್ರತಿಕ್ರಿಯೆ
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿಗೆ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಬೇರೆ ಭಾಷೆಯ ಕಲಾವಿದರು ಸಿನಿಮಾ ನೋಡಿ ಮೆಚ್ಚಿಕೊಂಂಡಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ(777 Charlie) ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾ ಜೂನ್ 10 ತೆರೆಗೆ ಬಂದಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಭರ್ಜರಿ ಕಮಾಯಿ ಮಾಡಿದೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ಬಹುತೇಕ ಪ್ರೇಕ್ಷಕರು ಕಣ್ಣೀರಾಕಿದ್ದಾರೆ. ಇತ್ತೀಚಿಗಷ್ಟೆ ಸಿಂ ಎಂ ಬಸವರಾಜ್ ಬೊಮ್ಮಾಯಿ 777 ಚಾರ್ಲಿ ಸಿನಿಮಾ ವೀಕ್ಷಿಸಿ ಕಣ್ಣೀರಾಕಿದ್ದರು. ಅಲ್ಲದೇ ತನ್ನ ಮನೆಯ ನಾಯಿಯನ್ನು ನೆನೆದು ಭಾವುಕರಾಗಿದ್ದರು. ಚಾರ್ಲಿಗೆ ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಬೇರೆ ಭಾಷೆಯ ಕಲಾವಿದರು ಸಿನಿಮಾ ನೋಡಿ ಮೆಚ್ಚಿಕೊಂಂಡಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ, ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕಿ ಕೇಜ್(Grammy Award Winner Ricky Kej) ಕೂಡ 777 ಚಾರ್ಲಿ ನೋಡಿ ಮೆಚ್ಚಿಕೊಂಡಿದ್ದಾರೆ. ರಿಕಿ ಸಿನಿಮಾ ವೀಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 'ವಾವ್ ಎಷ್ಟು ಅದ್ಭುತವಾಗಿದೆ. ಚಾರ್ಲಿಯ ಪ್ರತಿ ದೃಶ್ಯವನ್ನು ತುಂಬಾ ಇಷ್ಟಪಟ್ಟೆ. ರಕ್ಷಿತ್ ಶೆಟ್ಟಿ ಅದ್ಭುತವಾಗಿ ಪರ್ಫಾಮ್ ಮಾಡಿದ್ದಾರೆ. ಕಿರಣ್ ರಾಜ್ ಮೇಧಾವಿ. ಭಾವನಾತ್ಮಕ ರೋಲರ್ ಕೋಸ್ಟರ್ ಆಗಿತ್ತು. ನನ್ನನ್ನು ಕೊನೆಯವರೆಗೂ ಕಣ್ಣೀರಿಡುವಂತೆ ಮಾಡಿತು. ತಕ್ಷಣ ಹೋಗಿ ಈ ಸಿನಿಮಾ ನೋಡಿ ಎಂದು ಗ್ರ್ಯಾಮಿ ಅವಾರ್ಡ್ ವಿನ್ನರ್ ಸಂಗೀತ ನಿರ್ದೇಶಕ ಟ್ವೀಟ್ ಮಾಡಿದ್ದಾರೆ. ರಿಕಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ರಕ್ಷಿತ್ ಧನ್ಯವಾದ ತಿಳಿಸಿದ್ದಾರೆ.
ಇನ್ನುಬಾಲಿವುಡ್‌ನ ಖ್ಯಾತ ನಿರ್ಮಾಪಕ ಬೋನಿ ಕಪೂರ್(Boney Kapoor) ಸಹ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ನೋಡಿ ಟ್ವೀಟ್ ಮಾಡಿರುವ ಬೋನಿ ಕಪೂರ್, ಉತ್ತಮ ವಿಷಯಗಳು ಪ್ರೇಕ್ಷಕರನ್ನು ಬೇಗ ಕಂಡುಕೊಳ್ಳುತ್ತದೆ. ರಕ್ಷಿತ್ ಶೆಟ್ಟಿ ಮತ್ತು ಕಿರಣ್ ರಾಜ್ ಅವರಿಗೆ ಅಭಿನಂದನೆಗಳು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ಬಗ್ಗೆ ಎಲ್ಲಾ ಕಡೆಯಿಂದ ಒಳ್ಳೆಯ ಮಾತು ಕೇಳಿಬರುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.
777 ಚಾರ್ಲಿ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ರಕ್ಷಿತ್ ಶೆಟ್ಟಿ ಸೇರಿ ಹಲವರ ಸಾಥ್!
ಬೋನಿ ಕಪೂರ್ ಟ್ವೀಟ್‌ಗೆ ರಕ್ಷಿತ್ ಪ್ರತಿಕ್ರಿಯೆ ನೀಡಿ, ಧನ್ಯವಾದಗಳು ಬೋನಿಜೀ ಎಂದಿದ್ದಾರೆ. ಇನ್ನು ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ (Madhur Bhandarkar) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. 777 ಚಾರ್ಲಿ ಬಗ್ಗೆ ಒಳ್ಳೆಯ ವಿಚಾರಗಳನ್ನು ಕೇಳುತ್ತಿದ್ದೀನಿ. ರಕ್ಷಿತ್ ಶೆಟ್ಟಿ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಇಂಥ ಅದ್ಭುತ ಕಂಟೆಂಟ್ ಕೊಟ್ಟಿದ್ದಕ್ಕೆ ಅಭಿನಂದನೆ' ಎಂದು ಟ್ವೀಟ್ ಮಾಡಿದ್ದಾರೆ. ರಕ್ಷಿತ್ ಧನ್ಯವಾದ ತಿಳಿಸಿದ್ದಾರೆ.
777 ಚಾರ್ಲಿ ಸಿನಿಮಾ ನೋಡಿ ಸಿಗರೇಟ್ ಬಿಟ್ಟ ಅಭಿಮಾನಿ; ಘಟನೆ ವಿವರಿಸಿದ ಕಿರಣ್
ಚಾರ್ಲಿಗೆ ಪರಭಾಷೆಯಿಂದನೂ ಸಿಗುತ್ತಿರವ ಪ್ರತಿಕ್ರಿಯೆ ಕನ್ನಡಿಗರಿಗೆ ಖುಷಿಯ ವಿಚಾರವಾಗಿದೆ. ಕನ್ನಡ ಸಿನಿಮಾಗಳು ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗ ಹೆಮ್ಮೆಯ ವಿಚಾರವಾಗಿದೆ. ಚಾರ್ಲಿ ಸಕ್ಸಸ್ ಸಿನಿಮಾತಂಡಕ್ಕೆ ಮಾತ್ರವಲ್ಲದೇ ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ.