Asianet Suvarna News Asianet Suvarna News

'ಜೇಮ್ಸ್' ಚಿತ್ರಕ್ಕೆ ಪುನೀತ್‌ ಅವರದ್ದೇ ವಾಯ್ಸ್: ಚಿತ್ರತಂಡ ನಿರ್ಧಾರ

Nov 3, 2021, 3:15 PM IST
  • facebook-logo
  • twitter-logo
  • whatsapp-logo

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಾರತೀಯ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಸೇರಿದಂತೆ ಅಧಿಕ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ದಾರೆ. ಅಪ್ಪು ಕಡೆಯದಾಗಿ ಅಭಿನಯಿಸಿದ ಚಿತ್ರ 'ಜೇಮ್ಸ್' (James). ಹೌದು! ಅಪ್ಪು ಈ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಇದೀಗ ಚಿತ್ರತಂಡ ಚಿತ್ರದ ಬಿಡುಗಡೆ ದಿನಾಂಕ ಹಾಗೂ ಅಪ್ಪುಗೆ ವಾಯ್ಸ್ ಡಬ್ಬಿಂಗ್ ಕೊಡುವವರು ಯಾರು ಎಂಬೆಲ್ಲ ವಿಷಯಗಳನ್ನು ಹಂಚಿಕೊಂಡಿದೆ. 'ಜೇಮ್ಸ್' ಚಿತ್ರಕ್ಕೆ ಚೇತನ್ ಕುಮಾರ್ (Chetan Kumar) ಆಕ್ಷನ್ ಕಟ್ ಹೇಳುತ್ತಿದ್ದಾರೆ. 

ಕನ್ನಡದ ರಾಯಭಾರಿಯಾಗಿ ನಮ್ಮನ್ನ ಹರಸುತ್ತೀರಿ: ನಿರ್ದೇಶಕ ಚೇತನ್

ಈ ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ' ನಾಯಕಿಯಾಗಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಈ ಚಿತ್ರದಲ್ಲಿ ಸ್ಟೈಲಿಶ್ ವಿಲನ್ (Vilain) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ. ಹಾಗೂ 'ಕನ್ನಡದ ರಾಯಭಾರಿಯಾಗಿ, ಅಗೋಚರ ಶಕ್ತಿಯಾಗಿ ನೀವು ನಮ್ಮನ್ನ ಹರಸುತ್ತೀರಿ, ಮುನ್ನಡೆಸುತ್ತಿರಿ. ನಿಮ್ಮ ನೆನಪುಗಳು ನನ್ನೊಳಗೆ ಸದಾ ಜೀವಂತ. ಜನುಮ ಜನುಮಕ್ಕೂ ಸದಾ ಚಿರ ಋಣಿ' ಎಂದು ಪುನೀತ್ ನೆನಪನ್ನು ಚೇತನ್ ಕುಮಾರ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಕೂಡಾ ಮಾಡಿದ್ದಾರೆ.


ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories