
ದರ್ಶನ್ ಸಿನಿಮಾಗೆ ರಚಿತಾ ಪ್ರೊಡ್ಯೂಸರ್; ಋಣ ತೀರಿಸಲು ಇದು ಸುಸಮಯವೇ?
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಆದರೀಗ ಆ ಸಖತ್ ಸುದ್ದಿ ಏನೆಂದು ಬಹಿರಂಗ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಬಿಗ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಆದರೀಗ ಆ ಸಖತ್ ಸುದ್ದಿ ಏನೆಂದು ಬಹಿರಂಗ ಮಾಡಿದ್ದಾರೆ. ತೂಗುದೀಪ್ ಬ್ಯಾನರ್ ಮೂಲಕ ಬಣ್ಣ ಹಚ್ಚಿ, ಸಿನಿ ಜರ್ನಿ ಆರಂಭಿಸಿದ ರಚಿತಾ ರಾಮ್ ಈಗ ತಮ್ಮದೇ ಬ್ಯಾನರ್‌ನಲ್ಲಿ ದರ್ಶನ್ ಸಿನಿಮಾ ಪ್ರೊಡ್ಯೂಸ್ ಮಾಡಬೇಕೆಂದು ನಿರ್ಧರಿಸಿದ್ದಾರಂತೆ! ಈಗಾಗಲೇ ತಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣವಾದ 'ರಿಷಭಾ ಪ್ರಿಯಾ' ಕಿರುಚಿತ್ರ ಸಿಕ್ಕಾಪಟ್ಟೆ ಹಿಟ್ ಆಗಿದ್ದು, ಡಿ-ಬಾಸ್ ಸಿನಿಮಾ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಒಟ್ಟಿನಲ್ಲಿ'ಬುಲ್ ಬುಲ್' ಕಾಂಬಿನೇಷನ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವುದು ಸುಳ್ಳಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment