Sandalwood: 2024ಕ್ಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಸಿನಿಮಾ ಹಬ್ಬ..! ಮುಂದಿನ ವರ್ಷ ಇಂಡಿಯಾದಲ್ಲಿ ಕನ್ನಡ ಚಿತ್ರಗಳದ್ದೇ ಸೌಂಡ್..!
ಈ ವರ್ಷ ಮುಗೀತು. ಈ ವರ್ಷ ಆಗಿದ್ದೆಲ್ಲಾ ಇನ್ಮುಂದೆ ಇತಿಹಾಸ. ಮುಂದಿನ ವರ್ಷ ಆಗೋದೆಲ್ಲವೂ ಇತಿಹಾಸ ಆಗಬೇಕು ರೆಕಾರ್ಡ್ ಬುಕ್ ಸೇರಬೇಕು. ಅದು ಕಂಡಿತಾ ನೆಡದೇ ನಡೆಯುತ್ತೆ ಅನ್ನೋ ನಂಬಿಕೆ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ಬೇರೂರಿದೆ. ಯಾಕಂದ್ರೆ ಕನ್ನಡದಲ್ಲಿ ಮುಂದಿನ ವರ್ಷ ಬಿಗ್ ಸ್ಟಾರ್ಗಳ ಸಾಲು ಸಾಲು ಸಿನಿಮಾಗಳು ತೆರೆ ಕಾಣುತ್ತಿವೆ.
2023 ಇನ್ನು ನೆನಪು ಮಾತ್ರ. ನೀವೆಲ್ಲಾ 2023ಕ್ಕೆ ರಿಪ್ ಅಂತ ಪೋಸ್ಟ್ ಹಾಕೊಳ್ತೀರಾ. ಆದ್ರೆ ಹಿಂದೆ ಏನಾಯ್ತು ಅಂತ ಯೋಚ್ನೆ ಮಾಡೋದಕ್ಕಿಂತ ಮುಂದೆ ಏನು ಆಗಬೇಕು ಅಂತ ಪ್ಲಾನ್ ಮಾಡಿ ಮುಂದಕ್ಕೆ ಹೀಗೋದೇ ಬೆಸ್ಟ್. ಹಾಗಾಗಿ ಈ ವರ್ಷಕ್ಕಿಂತಲೂ ಮುಂದಿನ ವರ್ಷ ಸ್ಯಾಂಡಲ್‌ವುಡ್‌ಗೆ(Sandalwood) ಬೆಸ್ಟ್ ಈಯರ್ ಆಗುತ್ತೆ ಅನ್ನೋ ನಂಬಿಕೆ ನಮ್ಮ ಕನ್ನಡ ಸಿನಿ ಪ್ರೇಮಿಗಳಲ್ಲಿದೆ. ಯಾಕಂದ್ರೆ 2024ರಲ್ಲಿ ಕನ್ನಡ ಸಿನಿಮಾಗಳ ಹಬ್ಬ ನಡೆಯುತ್ತೆ. ಪ್ಯಾನ್ ಇಂಡಿಯಾದಲ್ಲಿ ಕನ್ನಡ ಸಿನಿಮಾಗಳದ್ದೇ ಸೌಂಡ್ ಇರುತ್ತೆ. ಪ್ರತಿ ವರ್ಷ ನೂರಾರು ಸಿನಿಮಾಗಳು ರಿಲೀಸ್ ಆಗ್ತಾವೆ. ಎಲ್ಲಾ ಸಿನಿಮಾಗಳು ಹಿಟ್ ಆಗಲ್ಲ. ಆದ್ರೆ ಚೆನ್ನಾಗಿರೋ ಸಿನಿಮಾಗಳಿಗೂ ಜನರು ಚಿತ್ರಮಂದಿರಕ್ಕೆ ಬಂದು ನೋಡಿಲ್ಲ. ಈ ವರ್ಷ ಅಂತಹ ಅನುಭವ ಸ್ಯಾಂಡಲ್‌ವುಡ್‌ಗೆ ಆಗಿವೆ. ಅಷ್ಟೆ ಅಲ್ಲ ಈ ವರ್ಷ ಸ್ಟಾರ್ ನಟರ ಸಿನಿಮಾಗಳು(Movies) ತೆರೆಕಂಡಿದ್ದು ಬೆರಳೆಣಿಕೆಯಷ್ಟು. ಆದ್ರೆ 2024 ಹಾಗಾಗಲ್ಲ. ಕನ್ನಡದಲ್ಲಿ ಬಿಗ್ ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದು ಬರೋದಕ್ಕೆ ಪ್ಲಾನ್ ಮಾಡಿಕೊಂಡಿವೆ. ಆ ಸಿನಿಮಾಗಳಲ್ಲಿ ಮೊದಲಿಗೆ ಸಿಗೋದೇ ದುನಿಯಾ ವಿಜಯ್ರ(Duniya Vijay) ಭೀಮ(Bheema movie). 2023 ಕನ್ನಡ ಚಿತ್ರರಂಗಕ್ಕೆ ಶುಕ್ರದೆಸೆ ಇರಲಿಲ್ಲ. ಆದ್ರೆ 2024 ಹಾಗಾಗಲ್ಲ. ಜನವರಿ ಮಧ್ಯದವರೆಗೆ ಶೂನ್ಯ ಮಾಸ ನಡೆಯಲಿದ್ದು, ಅದಾದ ನಂತರ ಕನ್ನಡದಲ್ಲಿ ಸಾಲು ಸಾಲು ಬಿಗ್ ಸ್ಟಾರ್ ಸಿನಿಮಾಗಳು ತೆರೆ ಕಾಣುತ್ತೆವೆ. ನಟ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಭೀಮ ಸಿನಿಮಾದ ಶೂಟಿಂಗ್ ಮುಗಿದಿದ್ದು, ಜನವರಿ ಕೊನೆವಾರ ತೆರೆ ಮೇಲೆ ಬರಲಿದೆ.
ಇದನ್ನೂ ಓದಿ: Max Movie:ಕ್ರಿಕೆಟ್ ಮೈದಾನದಿಂದ 'ಮ್ಯಾಕ್ಸ್' ಮೈದಾನಕ್ಕೆ ಕಿಚ್ಚ..! ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬ್ಯುಸಿಯಾದ ಬಾದ್ ಷಾ..!