Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ ಎಂದರು ಗಣೇಶ್. 
 

Share this Video
  • FB
  • Linkdin
  • Whatsapp

ನಿರ್ದೇಶಕ ಸಿಂಪಲ್​ ಸುನಿ (Simple Suni) ಮತ್ತು ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh)​ ಅಭಿನಯದ 'ಸಖತ್' (Sakath) ಸಿನಿಮಾ ಇದೇ ತಿಂಗಳ ನವೆಂಬರ್ 26ಕ್ಕೆ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಂಪಲ್‌ ಸುನಿ, 'ಇದು ಎರಡೂವರೆ ಗಂಟೆ ನಗಿಸುವ ಸಿನಿಮಾ. ಪುಟಾಣಿ ಮಗುವಿನಿಂದ ಹಿಡಿದು ಅಜ್ಜ, ಅಜ್ಜಿಯವರೆಗೆ ಎಲ್ಲರೂ ನೋಡಬಹುದಾದ ಸಿನಿಮಾ' ಎಂದರು. ನಿರ್ಮಾಪಕರಾದ ನಿಶಾ ವೆಂಕಟ್‌ ಕೋಣಂಕಿ ಮತ್ತು ವೆಂಕಟ್‌ ನಾರಾಯಣ್‌ ದಂಪತಿ ತಮ್ಮ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಬಿಡುಗಡೆ ಖುಷಿಯನ್ನು ಹಂಚಿಕೊಂಡರು.

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ಗಣೇಶ್‌, '200 ರೂಪಾಯಿ ಹಿಡಿದುಕೊಂಡು ಬೆಂಗಳೂರಿಗೆ ಬಂದವನು ನಾನು. ದೇವರು ತುಂಬಾ ಕೊಟ್ಟುಬಿಟ್ಟಿದ್ದಾನೆ. ಪ್ರತೀಕ್ಷಣ ಖುಷಿಯಾಗಿರಬೇಕು ಅಂತ ಬಯಸುತ್ತೇನೆ. ಯಾರಿಗೆ ಸಿಕ್ಕರೂ ಅವರಿಂದ ಕಲಿಯಬೇಕು ಅಥವಾ ಕಲಿಸುತ್ತಿರಬೇಕು ಎಂದು ನಂಬಿಕೊಂಡಿದ್ದೇನೆ. ಈ ಸಿನಿಮಾ ನಿಮಗೆ ಖುಷಿ ಕೊಡಲಿದೆ' ಎಂದರು. ನಿರ್ಮಾಪಕ ಸುಪ್ರೀತ್‌, ನಾಯಕ ನಟಿಯರಾದ ನಿಶ್ವಿಕಾ ನಾಯ್ಡು, ಸುರಭಿ ಪುರಾಣಿಕ್‌ ಸಂತೋಷವಾಗಿದ್ದರು. ರಂಗಾಯಣ ರಘು, ಸಾಧು ಕೋಕಿಲ, ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದ್ದು, ವಿಶೇಷವಾಗಿ ಗಣೇಶ್ ಪುತ್ರ ವಿಹಾನ್ (Vihan) ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video