Mugilpete Movie Review: ಮೋಡಿ ಮಾಡಿದ ಮನುರಂಜನ್-ಕಯಾದು ಜೋಡಿ

ಭರತ್ ಎಸ್. ನಾವುಂದ ನಿರ್ದೇಶನದ ಮನುರಂಜನ್ ರವಿಚಂದ್ರನ್ ಮುಗಿಲ್​ಪೇಟೆ ಚಿತ್ರ ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ಬಿಡುಗಡೆಯಾಗಿದ್ದು, ಹಾಡುಗಳೆಲ್ಲ ಚೆನ್ನಾಗಿವೆ. ಮನುರಂಜನ್​ ಕಯಾದು ಜೋಡಿ ಸೂಪರ್ ಆಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. 

First Published Nov 20, 2021, 12:57 PM IST | Last Updated Nov 20, 2021, 1:12 PM IST

ಭರತ್ ಎಸ್. ನಾವುಂದ (Bharath S Navunda) ನಿರ್ದೇಶನದ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran)  ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರ ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ಬಿಡುಗಡೆಯಾಗಿದೆ. ಮನುರಂಜನ್‌ಗೆ ನಾಯಕಿಯಾಗಿ ಕಯಾದು ಲೋಹರ್  (Kayadu Lohar) ಅಭಿನಯಿದ್ದಾರೆ. ಚಿತ್ರ ವೀಕ್ಷಿಸಿ ಬಂದ ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದ್ದು, ಕ್ಲೈಮ್ಯಾಕ್ಸ್​ ತುಂಬ ಎಮೋಷನಲ್​ ಆಗಿದೆ. ಹಾಡುಗಳೆಲ್ಲ ಚೆನ್ನಾಗಿವೆ. ಮನುರಂಜನ್​ ಕಯಾದು ಜೋಡಿ ಸೂಪರ್ ಆಗಿದೆ ಎಂದು ಸಿನಿರಸಿಕರು ಹೊಗಳಿದ್ದಾರೆ. 

ಪ್ರೇಕ್ಷಕರ ಹೃದಯದಲ್ಲಿ ಪಾಸ್ ಆಯ್ತು ಮುಗಿಲ್‌ಪೇಟೆ Trailer!

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ 'ಮುಗಿಲ್​ಪೇಟೆ' ಕಥಾವಸ್ತು. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಮುಂತಾದ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment