'ಭಜರಂಗಿ 2' ಮರು ಪ್ರದರ್ಶನ: ಸಿನಿರಸಿಕರಿಂದ ಬೊಂಬಾಟ್ ರೆಸ್ಪಾನ್ಸ್

ಶಿವರಾಜ್‌ಕುಮಾರ್‌ (Shivaraj kumar) ಅಭಿನಯದ 'ಭಜರಂಗಿ 2' (Bhajarangi 2) ಸಿನಿಮಾ ಮತ್ತೆ ಮರು ಪ್ರದರ್ಶನ ಆರಂಭಿಸಿದ್ದು, ಚಿತ್ರಕ್ಕೆ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಶುಕ್ರವಾರ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಕಾರಣ ಅಭಿಮಾನಿಗಳೆಲ್ಲಾ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಹೊರಬಂದಿದ್ದರು. 
 

Share this Video
  • FB
  • Linkdin
  • Whatsapp

ಶಿವರಾಜ್‌ಕುಮಾರ್‌ (Shivaraj kumar) ಅಭಿನಯದ 'ಭಜರಂಗಿ 2' (Bhajarangi 2) ಸಿನಿಮಾ ಮತ್ತೆ ಮರು ಪ್ರದರ್ಶನ ಆರಂಭಿಸಿದ್ದು, ಚಿತ್ರಕ್ಕೆ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಶುಕ್ರವಾರ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಕಾರಣ ಅಭಿಮಾನಿಗಳೆಲ್ಲಾ ಅರ್ಧದಲ್ಲೇ ಚಿತ್ರಮಂದಿರಗಳಿಂದ ಹೊರಬಂದಿದ್ದರು. ಪುನೀತ್‌ಗೆ ಗೌರವ ವಿದಾಯ ಸಲ್ಲಿಸುವ ಸಲುವಾಗಿ 'ಭಜರಂಗಿ 2' ನಿರ್ಮಾಪಕರು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದರು. 

ಜೀವನದಲ್ಲಿ ಇದೇ ಮೊದಲು ನಾನು 5 ಗಂಟೆ ಶೋ ನೋಡುತ್ತಿರುವುದು

ಕೋವಿಡ್ ಸಂಕಷ್ಟದಲ್ಲಿ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಹೀಗಾಗಿ ಸಿನಿಮಾ ಪ್ರದರ್ಶನ ಮತ್ತೆ ಶುರು ಮಾಡಿ ಎಂದು ಶಿವಣ್ಣ ಅವರು ಹೇಳಿದ ನಂತರವೇ ರಾಜ್ಯದ ಚಿತ್ರಮಂದಿರಗಳಲ್ಲಿ 'ಭಜರಂಗಿ 2' ಚಿತ್ರ ಮರು ಪ್ರದರ್ಶನ ಆರಂಭವಾಗಿದೆ. ಇನ್ನು ಪುನೀತ್‌ ರಾಜ್‌ಕುಮಾರ್‌( Puneeth Rajkumar) ನಿಧನದಿಂದ ಆಘಾತಗೊಂಡಿದ್ದ ಸಿನಿಪ್ರೇಕ್ಷಕರು ಈಗ ಶಿವರಾಜ್‌ ಕುಮಾರ್‌ ಮೇಲಿನ ಪ್ರೀತಿಯಿಂದ ಚಿತ್ರಮಂದಿರಕ್ಕೆ ಮತ್ತೆ ಮರಳಿ ಬರುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಎ.ಹರ್ಷ (A.Harsha) ಆಕ್ಷನ್ ಕಟ್ ಹೇಳಿದ್ದು,ಚಿತ್ರದಲ್ಲಿ ಜಾಕಿ ಭಾವನಾ (Bhavana), ಸೌರವ್ ಲೋಕೇಶ್ (Sourav Lokesh), ಹಿರಿಯ ನಟಿ ಶ್ರುತಿ (Shruti) ಸೇರಿದಂತೆ ವಿಶೇಷವಾದ ತಾರಾಗಣವಿದೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video