Asianet Suvarna News Asianet Suvarna News

ನೇತ್ರದಾನ ಮಹತ್ವ ಸಾರುವ 'ಅಕ್ಷಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

'ಅಕ್ಷಿ' ಚಿತ್ರವು ನೇತ್ರದಾನ ಮಹತ್ವ ಮತ್ತು ಸಾಮಾಜಿಕ ಕಳಕಳಿಯಿರುವ ಚಿತ್ರವಾಗಿದ್ದು, ಸಮಾಜದಲ್ಲಿ ನೇತ್ರದಾನದ ಬಗ್ಗೆ ಸಾಕಷ್ಟು ಮೂಢನಂಬಿಕೆ ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂದು ಶ್ರೀನಿವಾಸ್ ತಿಳಿಸಿದರು.

ದೆಹಲಿ (ಅ.25): 67ನೇ ರಾಷ್ಟ್ರೀಯ ಪ್ರಶಸ್ತಿ 2019ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಿತ್ರವಾಗಿ 'ಅಕ್ಷಿ' (Akshi) ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ (National Award) ದೊರಕಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (Venkaiah Naidu) ಅವರು ಪ್ರಶಸ್ತಿ ಪ್ರದಾನ ಮಾಡಿದರು.‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚಿತ್ರದ ನಟ-ನಿರ್ಮಾಪಕ ಶ್ರೀನಿವಾಸ್ (Srinivas), 'ಅಕ್ಷಿ' ಚಿತ್ರವು ನೇತ್ರದಾನ ಮಹತ್ವ ಮತ್ತು ಸಾಮಾಜಿಕ ಕಳಕಳಿಯಿರುವ ಚಿತ್ರವಾಗಿದ್ದು, ಸಮಾಜದಲ್ಲಿ ನೇತ್ರದಾನದ ಬಗ್ಗೆ ಸಾಕಷ್ಟು ಮೂಢನಂಬಿಕೆ ಇದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಪ್ರಶಸ್ತಿ ಲಭಿಸಲು ಕಾರಣರಾದ 'ಅಕ್ಷಿ' ತಂಡಕ್ಕೆ ಧನ್ಯವಾದಗಳು. ವಿಶೇಷವಾಗಿ ಎಸ್ ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ (S.P.Balasubramaniam) ಧನ್ಯವಾದಗಳು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories