Bahukrita Vesham: ವೈಷ್ಣವಿ ಗೌಡ ನಟನೆಯ ಚಿತ್ರಕ್ಕೆ ಸಿನಿಮಂದಿಯ ಅಭಿಪ್ರಾಯವೇನು?

ಡಿಲೇರಿಯಂ ಫೋಬಿಯಾ ಕಥೆಯುಳ್ಳ 'ಬಹುಕೃತ ವೇಷಂ' ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ವೀಕ್ಷಿಸಿದ ಸಿನಿಮಂದಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ.

Share this Video
  • FB
  • Linkdin
  • Whatsapp

ಡಿಲೇರಿಯಂ ಫೋಬಿಯಾ ಕಥೆಯುಳ್ಳ 'ಬಹುಕೃತ ವೇಷಂ' (Bahukrita Vesham) ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ವೀಕ್ಷಿಸಿದ ಸಿನಿಮಂದಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ. ಚಿತ್ರವನ್ನು ವೀಕ್ಷಿಸಿ ಮಾತನಾಡಿದ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ (Manju Pavagada) 'ವೈಷ್ಣವಿ ಅವರ ನಟನೆ ಅದ್ಭುತವಾಗಿದೆ, ಚಿತ್ರದ ಖಳನಾಯಕ ಕರಣ್ ನಾರಾಯಣ್ ತುಂಬಾ ಚೆನ್ನಾಗಿ ಅಭಿನಯಿಸಿದ್ದು, ಕ್ಲೈಮ್ಯಾಕ್ಸ್ ಟ್ವೀಸ್ಟ್ ಮಸ್ತ್ ಇದೆ, ಟೋಟಲ್ಲಿ ಸಿನಿಮಾ ಸಖತ್ ಆಗಿದೆ ಎಂದು ತಿಳಿಸಿದ್ದಾರೆ. ಚಿತ್ರದ ನಾಯಕ ಶಶಿಕಾಂತ್ ಮಾತನಾಡಿ, ಹೊಸಬರ ಚಿತ್ರಕ್ಕೆ ಈ ರೀತಿಯಲ್ಲಿ ರೆಸ್ಪಾನ್ಸ್ ಬರುತ್ತೆ ಎಂದು ಅಂದುಕೊಂಡಿರಲಿಲ್ಲ. ನಮ್ಮ ಎರಡು ವರ್ಷದ ಫಲ ಈಗ ಪ್ರತಿಫಲ ನೀಡಿದೆ ಹೇಳಿದರು.

Bahukrita Vesham: ಡಿಲೇರಿಯಂ ಫೋಬಿಯಾ ಕಥೆಯುಳ್ಳ ಚಿತ್ರದಲ್ಲಿ ವೈಷ್ಣವಿ ಗೌಡ!

ಇನ್ನು ಚಿತ್ರದ ನಾಯಕಿ ವೈಷ್ಣವಿ ಗೌಡ, ಚಿತ್ರಕ್ಕೆ ಬೊಂಬಾಟ್ ರೆಸ್ಪಾನ್ಸ್ ಬರುತ್ತಿದ್ದು, ಸಿನಿಮಾದಲ್ಲಿ ಬರುವ ಪ್ರತಿ ಡೈಲಾಗ್‌ಗೆ ಸಿನಿರಸಿಕರು ಕೌಂಟರ್ ಕೊಟ್ಟು, ಚಪ್ಪಾಳೆ ಹೊಡೆದು ಶಿಳ್ಳೆ ಹೊಡೆಯುತ್ತಿದ್ದಾರೆ. ಹಾಗೂ ಎಲ್ಲರೂ ನಮ್ಮ ಚಿತ್ರವನ್ನು ವೀಕ್ಷಿಸಿ ಎಂದು ಹೇಳಿದರು. ಮಧ್ಯಮ ವರ್ಗದ ಒಳ್ಳೆಯ ಕುಟುಂಬದ ಹುಡುಗಿಯೊಬ್ಬಳ ಜೀವನದಲ್ಲಿ ಬರುವ ಕೆಲವು ತಿರುವುಗಳು, ಕೆಲ ಘಟನೆಗಳು ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಅನ್ನೋದೆ ಸಿನಿಮಾದ ಕಥೆಯ ಒಂದು ಎಳೆ. ಬಿಗ್‌ಬಾಸ್‌ ಸ್ಪರ್ಧಿ ವೈಷ್ಣವಿ ಗೌಡ (Vaishnavi Gowda) ಹಾಗೂ ಶಶಿಕಾಂತ್‌ (Shashikanth) ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video