Ek Love Ya: ಸಿಗರೇಟ್ ಸೀನ್‌ಗೆ ಸಂಬಂಧಪಟ್ಟಂತೆ ನೇರವಾಗಿ ಉತ್ತರಿಸಿದ ರಚಿತಾ ರಾಮ್

ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಸಿಗರೇಟು ಸೇದುವುದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರುವುದಿಲ್ಲ. ಸಹಜವಾಗಿ ಮೂಡಿಬಂದರೆ ಆ ಪಾತ್ರಕ್ಕೆ ಒಂದು ಕಳೆ ಎಂದು ಡಿಂಪಲ್ ಕ್ವೀನ್ ರಚಿತಾ ರಾಮ್​ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್​ (Rachita Ram) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ಜೋಗಿ ಪ್ರೇಮ್ (Jogi Prem) ನಿರ್ದೇಶನದ 'ಏಕ್ ಲವ್ ಯಾ' (Ek Love Ya) ಚಿತ್ರವು ಒಂದು. ಈಗಾಗಲೇ ಹಾಡುಗಳ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ಅರ್ಜುನ್​ ಜನ್ಯ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್​ ಸಿಗರೇಟ್​ ಸೇದುವ ಹಾಗೂ ಎಣ್ಣೆ ಹೊಡೆಯುವ ದೃಶ್ಯವಿದ್ದೂ ಕೊಂಚ ಬೋಲ್ಡ್​ ಆಗಿಯೇ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಎದುರಾದ ಪ್ರಶ್ನೆಗೆ ರಚಿತಾ ರಾಮ್​ ನೇರವಾಗಿ ಉತ್ತರಿಸಿದ್ದಾರೆ.

Ek Love Ya Song: ಗಂಡ್ ಹೈಕ್ಳ ಎದೆಯಲ್ಲಿ ರಚ್ಚು , ಮೀಟ್ ಆ್ಯಂಡ್ ಡೇಟ್‌ರೆ ರೆಡಿ!

ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೊಂದು ಅರ್ಥ ಇದೆ. ಸುಮ್ಮನೇ ನಾನು ಸಿಗರೇಟ್​ ಸೇದಿಲ್ಲ. ಬೋಲ್ಡ್​ ದೃಶ್ಯಗಳಲ್ಲಿ ಯಾಕೆ ನಟಿಸಿದ್ದೇನೆ ಎಂಬುದು ಸಿನಿಮಾ ರಿಲೀಸ್​ ಆದಾಗ ಗೊತ್ತಾಗುತ್ತದೆ. ಹಾಗೂ ಸಿಗರೇಟು ಸೇದುವುದು ಕೃತಕವಾಗಿ ಕಾಣಿಸಿದರೆ ಚೆನ್ನಾಗಿ ಇರುವುದಿಲ್ಲ. ಸಹಜವಾಗಿ ಮೂಡಿಬಂದರೆ ಆ ಪಾತ್ರಕ್ಕೆ ಒಂದು ಕಳೆ. ದೃಶ್ಯಗಳಲ್ಲಿ ನೋಡಿದಾಗ ನಾನು ಇಷ್ಟು ಚೆನ್ನಾಗಿ ಸಿಗರೇಟು ಸೇದಿದ್ದೀನಾ ಅಂತ ಅನಿಸುತ್ತೆ ಎಂದು ರಚಿತಾ ರಾಮ್ ಹೇಳಿದ್ದಾರೆ. ಇನ್ನು 'ಏಕ್ ಲವ್ ಯಾ' ಚಿತ್ರವು ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿದ್ದು, ರಾಣಾ (Raanna) ಹಾಗೂ ಹೊಸ ನಟಿ ಗ್ರೀಷ್ಮಾ ನಾಣಯ್ಯ (Grishma Nanayya) ಅಭಿನಯಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video