Puneeth Rajkumar: ಅಪ್ಪು ನಿಧನದ ಬಳಿಕ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್‍ಕುಮಾರ್ ದಂಪತಿ

ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ ಭೇಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ಚರ್ಚಿಸಿದ್ದಾರೆ. 

Share this Video
  • FB
  • Linkdin
  • Whatsapp

ಮೈಸೂರು (ನ.26): ಸ್ಯಾಂಡಲ್‍ವುಡ್ ನಟ ಶಿವರಾಜ್‍ಕುಮಾರ್ (Shiva Rajkumar) ಅವರು ಪತ್ನಿ ಗೀತಾ ಶಿವರಾಜ್‍ಕುಮಾರ್ (Geetha Shivarajkumar) ಅವರ ಜೊತೆಗೆ ಮೈಸೂರಿಲ್ಲಿರುವ ಶಕ್ತಿಧಾಮಕ್ಕೆ (Shaktidhama) ಭೇಟಿಕೊಟ್ಟು ಅಲ್ಲಿಯ ನಿರ್ವಹಣೆಯ ಕುರಿತಾಗಿ ಚರ್ಚಿಸಿದ್ದಾರೆ. ಶಕ್ತಿಧಾಮ ನಿರ್ವಹಣೆ ಕುರಿತಂತೆ ಧರ್ಮದರ್ಶಿಗಳ ಸಭೆ ನಡೆದಿದೆ. ಟ್ರಸ್ಟ್ ಅಧ್ಯಕ್ಷೆ ಗೀತಾ ಶಿವರಾಜ್‍ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಾಗಿದೆ. 

Ravichandran: 'ಕನ್ನಡಿಗ' ಚಿತ್ರದ ಹಾಡಿಗೆ ದನಿಯಾದ ಶಿವರಾಜ್‌ಕುಮಾರ್

ಸಭೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ, ಮ್ಯಾನೇಂಜಿಂಗ್ ಟ್ರಸ್ಟಿ ಜಯದೇವ್, ಖಜಾಂಚಿ ಸುಮನ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು. ವಿಶೇಷವಾಗಿ 150 ಮಕ್ಕಳ ಆರೈಕೆ, ಶಿಕ್ಷಣ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಶಕ್ತಿಧಾಮದ ಜವಾಬ್ದಾರಿ ವಹಿಸಿಕೊಂಡಿದ್ದ ಪುನೀತ್ ರಾಜ್‌ಕುಮಾರ್ (Puneeth Rajkumar) ನಿಧನದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿ ಮಕ್ಕಳೊಂದಿಗೂ ಚರ್ಚೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video