Asianet Suvarna News Asianet Suvarna News

Ravichandran: 'ಕನ್ನಡಿಗ' ಚಿತ್ರದ ಹಾಡಿಗೆ ದನಿಯಾದ ಶಿವರಾಜ್‌ಕುಮಾರ್

Nov 25, 2021, 2:11 PM IST

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran)​ ಅಭಿನಯದ 'ಕನ್ನಡಿಗ' (Kannadiga) ಸಿನಿಮಾದ ಟೈಟಲ್ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shiva Rajkumar) ಹಾಡಿದ್ದಾರೆ. ಹೌದು! ಶಿವಣ್ಣ ಚಿತ್ರದಲ್ಲಿ ಅಭಿನಯಿಸುವ ಜೊತೆಗೆ ಸಾಕಷ್ಟು ಹಾಡುಗಳನ್ನು ಸಹ ಹಾಡಿದ್ದಾರೆ. ಇದೀಗ 'ಕನ್ನಡಿಗ' ಚಿತ್ರದ 'ಸರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ ಪಾಲ್ಗೆ' ಎಂಬ ಹಾಡನ್ನು ಶಿವಣ್ಣ ಹಾಡಿದ್ದು, ಸಿನಿಪ್ರಿಯರಿಗೆ ಇಷ್ಟವಾಗಿದೆ. ಈ ಹಾಡಿಗೆ ಖ್ಯಾತ ನಿರ್ದೇಶಕ ಸಂತೋಷ್​ ಆನಂದ್​ರಾಮ್​ (Santhosh Ananddram) ಅವರು ಸಾಹಿತ್ಯ ಬರೆದಿದ್ದು, 'ಕೆಜಿಎಫ್' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ರವಿ ಬಸ್ರೂರ್ (Ravi Basrur)​ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

'ಹಿರೋನೂ ಇವನೇ ವಿಲನ್ನು ಇವನೇ' ರವಿ ಬೋಪಣ್ಣ ಬಂದರೆ ಪೀಸ್ ಪೀಸ್

'ಕನ್ನಡಿಗ' ಚಿತ್ರ ಹೆಸರೇ ಹೇಳುವಂತೆ ಇದೊಂದು ಕನ್ನಡಿಗನ ಕಥೆ ಹೇಳುತ್ತದೆ ಎಂಬುದು ಗೊತ್ತಾಗುತ್ತದೆ. ಓಂಕಾರ್​ ಮೂವೀಸ್​ ಬ್ಯಾನರ್​ ಅಡಿಯಲ್ಲಿಈ ಚಿತ್ರ ತಯಾರಾಗಿದ್ದು, ಎನ್​.ಎಸ್​.ರಾಜ್​ಕುಮಾರ್​ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ.ಎಂ. ಗಿರಿರಾಜ್​ ಅವರು ಈ ಸಿನಿಮಾದ ಕಥೆಯನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪಾವನಾ, ಜೀವಿಕಾ, ಜಗದೀಶ್​ ಮೈತ್ರಿ, ಬಾಲಾಜಿ ಮನೋಹರ್​, ಅಚ್ಯುತ್​ ಕುಮಾರ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಶಿವಣ್ಣ ಈ ಹಾಡನ್ನು ಪುನೀತ್ ರಾಜ್‌ಕುಮಾರ್ (Puneeth Rajkumar)​ ನಿಧನ ಹೊಂದುವುದಕ್ಕೂ ಮೊದಲೇ ಹಾಡಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment