Sharan: ಹೀರೋಯಿನ್ ಮೇಲೆ ಕುಳಿತು ಯಡವಟ್ಟು ಮಾಡಿದ ಕಾಮಿಡಿ ಅಧ್ಯಕ್ಷ!

ಕಾಮಿಡಿ ಅಧ್ಯಕ್ಷ ಶರಣ್ ಇತ್ತೀಚೆಗೆ ಒಂದ್ ಹೇಳಿಕೆ ಕೊಟ್ಟಿದ್ರು, ಒಂದ್ ಕಾಲದಲ್ಲಿ ನನ್ ಸಿನಿಮಾಗೆ ಬಾಂಬೆ ಹಿರೋಯಿನ್‌ಗಳು ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ ಅಂದಿದ್ರು. ಆದ್ರೆ ಈಗ ಶರಣ್ ಬಾಂಬೆ ಹೀರೋಯಿನ್ ಒಬ್ರಿಗೆ ಒಂದ್ ಎಡವಟ್ಟು ಮಾಡ್ಬಿಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಕಾಮಿಡಿ ಅಧ್ಯಕ್ಷ ಶರಣ್ (Sharan) ಇತ್ತೀಚೆಗೆ ಒಂದ್ ಹೇಳಿಕೆ ಕೊಟ್ಟಿದ್ರು, ಒಂದ್ ಕಾಲದಲ್ಲಿ ನನ್ ಸಿನಿಮಾಗೆ ಬಾಂಬೆ ಹಿರೋಯಿನ್‌ಗಳು ಕೂಡ ಒಪ್ಪಿಕೊಳ್ಳುತ್ತಿರಲಿಲ್ಲ ಅಂದಿದ್ರು. ಆದ್ರೆ ಈಗ ಶರಣ್ ಬಾಂಬೆ ಹೀರೋಯಿನ್ ಒಬ್ರಿಗೆ ಒಂದ್ ಎಡವಟ್ಟು ಮಾಡ್ಬಿಟ್ಟಿದ್ದಾರೆ. 'ತ್ರಿವಿಕ್ರಮ' (Trivikrama) ಸಿನಿಮಾದ ಸುದ್ದಿಗೋಷ್ಠಿಗೆ ಬಂದಿದ್ದ ಶರಣ್, ಆ ಚಿತ್ರದ ನಾಯಕ ನಟಿ ಆಕಾಂಕ್ಷ ಶರ್ಮಾ (Akanksha Sharma) ತೊಡೆ ಮೇಲೆ ಕುಳಿದುಕೊಳ್ಳೋಕೆ ಹೋಗಿದ್ರು. ಹೀರೋಯಿನ್ ತೊಡೆ ಮೇಲೆ ಕುಳಿತುಕೊಳ್ಳೋಕೆ ಹೋದ ಶರಣ್‌ಗೆ ನಟಿ ತಾರಾ (Tara) ಬಾರಿಸಿ ಕಳಿಸಿದ್ದಾರೆ. 

Avatara Purusha: ಹೊಸ ಅವತಾರದಲ್ಲಿ ಬಂದ ಅಧ್ಯಕ್ಷ ಶರಣ್!

ಹಾಗಂತ ಇದು ಬೇಕಂತ ಮಾಡಿದ್ದಲ್ಲ ಅಚಾನಕ್ಕಾಗಿ ನಡೆದ ಘಟನೆ. ಈಗ ಇದೇ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದೆ. ಇನ್ನು ಶರಣ್‌ 'ತ್ರಿವಿಕ್ರಮ' ಅನ್ನೋದು ಯಶಸ್ಸಿನ ಸಿಂಬಲ್‌. ಈ ಸಿನಿಮಾ ಮೂಲಕ ಒಬ್ಬ ಸ್ಟಾರ್‌ ಹುಟ್ಟಿಕೊಂಡಿದ್ದಾನೆ’ ಎಂದು ವಿಕ್ರಂ ರವಿಚಂದ್ರನ್‌ (Vikram Ravichandran) ಬಗ್ಗೆ ಗುಣಗಾನ ಮಾಡಿದರು. ನಿರ್ದೇಶಕರಾದ ಸಂತೋಷ್‌ ಆನಂದ್‌ರಾಮ್‌, ಬಹದ್ದೂರ್‌ ಚೇತನ್‌, ಶಿವಮಣಿ, 'ತ್ರಿವಿಕ್ರಮ' ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕ ರಾಮ್ಕೋ ಸೋಮಣ್ಣ, ನಟ ಸಾಧು ಕೋಕಿಲ, ಆದಿ ಲೋಕೇಶ್‌ ಮತ್ತಿತರರು ಹಾಜರಿದ್ದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video