Asianet Suvarna News Asianet Suvarna News

ಹೇಗಿದೆ ನೋಡಿ ದೂದ್‌ಪೇಡ ದಿಗಂತ್ ಅಡ್ವೆಂಚರ್ ಲೈಫ್..!

ಸ್ಯಾಂಡಲ್‌ವುಡ್‌ನಲ್ಲಿ ದೂದ್‌ಪೇಡ ಹುಡುಗ ಅಂತ ಫೇಮಸ್ ಆಗಿರೋ ಮಲೆನಾಡಿನ ಹ್ಯಾಂಡ್ಸಮ್ ಹಂಕ್ ದಿಗಂತ್ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ದೂದ್‌ಪೇಡ ಹುಡುಗ ಅಂತ ಫೇಮಸ್ ಆಗಿರೋ ಮಲೆನಾಡಿನ ಹ್ಯಾಂಡ್ಸಮ್ ಹಂಕ್ ದಿಗಂತ್ (Digant) ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಗೋವಾ (Goa) ಕಡಲ ತೀರದಲ್ಲಿ ಸಮ್ಮರ್ ಸಾಲ್ಟ್‌ ಜಂಪ್‌ ಮಾಡೋಕೆ ಹೋಗಿ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟಾಗಿತ್ತು. ಕೊನೆಗೆ ಒಂದು ದಿನ ಗೊವಾದಲ್ಲೇ ತುರ್ತು ಚಿಕಿತ್ಸೆ ಪಡೆದಿದ್ದ ದಿಗಂತ್ರನ್ನ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಈಗ ದಿಗ್ಗಿ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿರೋ  ವೈದ್ಯರ ತಂಡ ದಿಗಂತ್‌ರನ್ನು ತುರ್ತು ನಿಗಾ ಘಟಕದಿಂದ ವಾರ್ಡ್‌ಗೆ ಶಿಫ್ಟ್ ಮಾಡಿದ್ದಾರೆ. ದಿಗ್ಗಿ ನಾನು ಆರೋಗ್ಯವಾಗಿದ್ದೇನೆ ಅಂತ ತಮ್ಸ್ಅಪ್ ಇರೋ ಫೋಟೋ ಕಳಿಸಿದ್ದಾರೆ.

ಆಸ್ಪತ್ರೆಯಿಂದ ನಟ ದಿಗಂತ್ ಡಿಸ್ಚಾರ್ಜ್: 3 ತಿಂಗಳು ರೆಸ್ಟ್

ನಟ ದಿಗಂತ್ ಸಿಕ್ಕಾಪಟ್ಟೆ ಕ್ರೇಜಿ ಹುಡುಗ. ಕ್ರೇಜಿ ಜೀವನ ನಡೆಸಬೇಕು, ಅಡ್ವೆಂಚರ್ ಲೈಫ್ ಲೀಡ್ ಮಾಡ್ಬೇಕು ಅನ್ನೋ ಆಸೆ ದಿಗ್ಗಿಯದ್ದು. ಹೀಗಾಗಿ ದಿಗಂತ್ ನೂರಾರು ಮೈಲಿ ಸೈಕ್ಲಿಂಗ್ ಹೋಗ್ತಾರೆ, ಪತ್ನಿ ಐಂದ್ರಿತಾ ಜೊತೆ ತನ್ನ ಸ್ನೇಹಿತರ ತಂಡ ಕಟ್ಟಿಕೊಂಡು ಟ್ರಕ್ಕಿಂಗ್ ಮಾಡ್ತಾರೆ. ಕ್ರಿಕೆಟ್ ಆಡ್ತಾರೆ. ಒಂದ್ ರೀತಿ ಕಂಪ್ಲೀಟ್  ಸ್ಪೋರ್ಟ್ಸ್ ಮ್ಯಾನ್ ಕ್ಯಾರೆಕ್ಟರ್ ದಿಗಂತ್ರದ್ದು.