Asianet Suvarna News Asianet Suvarna News

ಡಿ-ಬಾಸ್‌ ಬರ್ತಡೇ: ಮನವಿಗೆ ಕಿವಿಗೊಡ್ತಾರಾ ಅಭಿಮಾನಿಗಳು?

Jan 19, 2020, 10:43 AM IST

ಬೆಂಗಳೂರು (ಜ. 19): ಈ‌ ವರ್ಷವೂ ಸರಳ‌ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಚಾಲೆಂಜಿಂಗ್ ಸ್ಟಾರ್ ನಿರ್ಧರಿಸಿದ್ದಾರೆ. ಜ. 16 ರಂದು  ಹುಟ್ಟುಹಬ್ಬಕ್ಕೆ ಕೇಕ್, ಹೂವಿನ‌ಹಾರ ತರದಂತೆ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ.  

ಹನುಮನಾಗಲು ಮಾಂಸಾಹಾರ ತ್ಯಜಿಸಿದ್ರು ಡಿ ಬಾಸ್ ದರ್ಶನ್!

ಕೇಕ್, ಹಾರದ ಹಣದಲ್ಲಿ ಕೈಲಾದಷ್ಟು ದವಸ ಧಾನ್ಯಗಳನ್ನು ತನ್ನಿ ಎಂದು ಮನವಿ ಮಾಡಿದ್ದಾರೆ.   ಅಭಿಮಾನಿಗಳು ತಂದುಕೊಟ್ಟ ಅಕ್ಕಿ. ಬೇಳೆ . ಸಕ್ಕರೆಯನ್ನು ಅನಾಥಾಶ್ರಮಗಳಿಗೆ ರವಾನೆ ಮಾಡುವುದಾಗಿ ಹೇಳಿದ್ದಾರೆ.   ಬರ್ತಡೇ ಸಂಭ್ರಮದಲ್ಲಿ ಅಕ್ಕ ಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ. ಪಟಾಕಿ ಹೊಡೆದು ಪರಿಸರ ಮಾಲಿನ್ಯ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.