ಕನ್ನಡ ಚಿತ್ರರಂಗದ ಬಾಕ್ಸ್‌ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ 'ರಾಬರ್ಟ್‌' ದಿನೇ ದಿನೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಮೊದಲ ಲುಕ್, ಮೋಷನ್ ಪೋಸ್ಟರ್...ಎಲ್ಲವೂ ಕನ್ನಡ ಚಿತ್ರಾಭಿಮಾನಿಗಳ ಆಸಕ್ತಿ ಹೆಚ್ಚಿಸಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಎರಡನೇ ಲುಕ್‌ ರಿವೀಲ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ದರ್ಶನ್‌ ಹನುಮಂತನಾಗಿ ಹೆಗಲ ಮೇಲೆ ಪುಟ್ಟ ರಾಮನನ್ನು ಕೂರಿಸಿಕೊಂಡಿರುವ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಹೆಚ್ಚಾಗಿ ಮಾಸ್‌ ಆ್ಯಂಡ್ ರೋಮ್ಯಾಂಟಿಕ್‌ ಪಾತ್ರಗಳಲ್ಲಿ ಕಾಣಿಸಿಕೊಂಡ ಕನ್ನಡಿಗರ ಪ್ರೀತಿಯ ದಾಸ, ಕುರುಕ್ಷೇತ್ರದಲ್ಲಿ ಪೌರಾಣಿಕ ಪಾತ್ರವಾದ ದುರ್ಯೋಧನನಾಗಿ ಸಿಕ್ಕಾಪಟ್ಟೆ ಮಿಂಚಿದ್ದರು. ಇದೀಗ ಹನುಮಂತನಾಗಿ ಕಾಣಿಸಿಕೊಂಡು, ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡಿದ್ದಾರೆ.

ಇನ್ನು ದರ್ಶನ್‌ ನಾನ್‌ ವೇಜ್‌ ಲವರ್‌ ಎಂಬುವುದು ಅಪ್ಪಟ್ಟ ಡಿ-ಬಾಸ್‌ ಅಭಿಮಾನಿಗಳಿಗೆ ಗೊತ್ತೇ ಇರುತ್ತೆ. ಇನ್ನು ದೇವರ ಪ್ರಧಾನ ಚಿತ್ರಗಳಲ್ಲಿ ನಟಿಸುವಾಗ ನಟ-ನಟಿಯರು ಕೆಲವು ದಿನಗಳ ಕಾಲ ಮಾಂಸಹಾರವನ್ನ ತ್ಯಜಿಸಿ ಚಿತ್ರೀಕರಣಕ್ಕೆ ಮುಂದಾಗುತ್ತಾರೆ. ದರ್ಶನ್‌ ಸಹ ಅದೇ ರೀತಿ ಮಾಡಿದ್ದಾರೆ. 

ಹೆಗಲ ಮೇಲೆ ರಾಮನನ್ನು ಕುಳ್ಳಿರಿಸಿಕೊಂಡು ಹೊರಟಿದ್ದೆಲ್ಲಿಗೆ ಸಂಜಯ್‌?

ಪೊಸ್ಟರ್‌ನಲ್ಲಿ ಹನುಮಂತನಾಗಿ ಕಾಣಿಸಿಕೊಂಡಿರುವ ಡಿ-ಬಾಸ್ ಈ ದೃಶ್ಯದ ಚಿತ್ರೀಕರಣವನ್ನು 8 ದಿನಗಳ ಕಾಲ ಮಾಡಿದ್ದಾರೆ. ಈ ವೇಳೆ ದರ್ಶನ್‌ ಮಾಂಸಹಾರಕ್ಕೆ ನೋ ಎಂದಿದ್ದರಂತೆ. ಅಷ್ಟೇ ಅಲ್ಲದೇ ಸೆಟ್‌ನಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರಿಗೂ ಮಾಂಸ ಸೇವಿಸಬೇಡಿ ಎಂದು ಆರ್ಡರ್ ಮಾಡಿದ್ದರಂತೆ.

ಡಾ.ರಾಜ್‌ಕುಮಾರ್ 'ಭಕ್ತ ಕುಂಬಾರ', 'ಶ್ರೀನಿವಾಸ ಕಲ್ಯಾಣ...' ಮುಂತಾದ ಭಕ್ತಿ ಪ್ರಧಾನ ಚಿತ್ರಗಳನ್ನು ಮಾಡುವಾಗಲೂ ಈದೇ ರೀತಿ ಪಥ್ಯಕ್ಕೆ ಮುಂದಾಗುತ್ತಿದ್ದರಂತೆ. ಸುತರಾಂ ನಾನ್ ವೆಜ್ ತಿನ್ನುತ್ತಿರಲಿಲ್ಲವಂತೆ. ಅಲ್ಲದೇ ಇತ್ತೀಚೆಗೆ ರಕ್ಷಿತ್ ಶೆಟ್ಟಿಯ ಶ್ರೀಮನ್ನಾರಾಯಣದಲ್ಲಿ ಲಕ್ಷ್ಮೀ ಪಾತ್ರಧಾರಿ ಶಾನ್ವಿ ಶ್ರೀನಿವಾಸ್ ಸಹ ಕೆಲವು ದಿನಗಳ ಮಾಂಸಾಹಾರ ತ್ಯಜಿಸಿದ್ದಾಗಿ ಹೇಳಿಕೊಂಡಿದ್ದರು.