ಆರೋಪಿ ದರ್ಶನ್ ಗೆ ಕಾದಿದೆಯಾ ಘೋರ ಶಿಕ್ಷೆ..? ವಕೀಲರ ಬದಲಾವಣೆಗೆ ಸಮಯ ಕೇಳಿದ್ರಾ ನಟ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ವಿರುದ್ದ ಚಾರ್ಜ್​ಫ್ರೇಮ್ ಮಾಡಲಾಗಿದೆ. ಯಾವೆಲ್ಲಾ ದೋಷಾರೋಪ ಅನ್ನೋದನ್ನ ಆರೋಪಿಗಳಿಗೆ ಹೇಳಲಾಗಿದೆ. ಆರೋಪಿಗಳು ಆರೋಪ ಒಪ್ಪದ ಹಿನ್ನೆಲೆ ಸಾಕ್ಷಿಗಳ ವಿಚಾರಣೆ ನಡೆಸೋದಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ.

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿ ಮರ್ಡರ್​ಕೇಸ್​​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಮೇಲೆ ಚಾರ್ಜ್ ಫ್ರೇಮ್ ಮಾಡಿದ್ದು ಗೊತ್ತೇ ಇದೆ. ದರ್ಶನ್ ಮೇಲೆಯೇ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಹಾಗಾದ್ರೆ ದರ್ಶನ್ ಆರೋಪ ಸಾಬೀತಾದ್ರೇ ಈ ಎಲ್ಲಾ ಸೆಕ್ಷನ್ ಅನುಸಾರ ದರ್ಶನ್​ಗೆ ಆಗಲಿರೋ ಶಿಕ್ಷೆ ಎಷ್ಟು..? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಬರೊಬ್ಬರಿ 11 ಸೆಕ್ಷನ್..ಸಾಬೀತಾದ್ರೆ ನಟ ದರ್ಶನ್‌ಗೆ ಎಷ್ಟು ಶಿಕ್ಷೆ..?
ಯೆಸ್ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ವಿರುದ್ದ ಚಾರ್ಜ್​ಫ್ರೇಮ್ ಮಾಡಲಾಗಿದೆ. ಯಾವೆಲ್ಲಾ ದೋಷಾರೋಪ ಅನ್ನೋದನ್ನ ಆರೋಪಿಗಳಿಗೆ ಹೇಳಲಾಗಿದೆ. ಆರೋಪಿಗಳು ಆರೋಪ ಒಪ್ಪದ ಹಿನ್ನೆಲೆ ಸಾಕ್ಷಿಗಳ ವಿಚಾರಣೆ ನಡೆಸೋದಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ.

ಸಾಕ್ಷಿಗಳ ವಿಚಾರಣೆ, ಪಾಟೀ ಸವಾಲು, ಫೋರೆನ್ಸಿಕ್ ಸಾಕ್ಷಿಗಳು, ಸಿಸಿಟಿವಿ ಫೂಟೇಜ್​ಗಳು, ತಾಂತ್ರಿಕ ಸಾಕ್ಷಿಗಳು ಎಲ್ಲವನ್ನೂ ಕೋರ್ಟ್ ಕೂಲಂಕುಶವಾಗಿ ಪರಿಶೀಲನೆ ಮಾಡಿ ಅಂತಿಮ ತೀರ್ಪನ್ನ ನೀಡಲಿದೆ.

ಆರೋಪಿ ದರ್ಶನ್​ಗೆ ಕಾದಿದೆಯಾ ಅತ್ಯುಗ್ರ ಶಿಕ್ಷೆ..?
ಹೌದು ಈ ಪ್ರಕರಣದ ಬೆಳವಣಿಗೆ ನೋಡ್ತಾ ಇದ್ರೆ ಮತ್ತು ದರ್ಶನ್ ಮೇಲೆ ಹಾಕಲಾಗಿರೋ ಸೆಕ್ಷನ್ ನೋಡ್ತಾ ಇದ್ರೆ ಗರಿಷ್ಠ ಶಿಕ್ಷೆ ಖಚಿತ ಎನ್ನಲಾಗ್ತಾ ಇದೆ. ದರ್ಶನ್ ವಿರುದ್ದ ಹಾಕಿರೋದೆಲ್ಲಾ ಗಂಭೀರ ಸೆಕ್ಷನ್​ಗಳು. ಸೋ ಈ ಪ್ರಕರಣಗಳು ಸಾಬೀತು ಆಗಿದ್ದೇ ಆದ್ರೆ ದಾಸನಿಗೆ ಕಠಿಣಾತಿಕಠಿಣ ಶಿಕ್ಷೆ ಖಾಯಂ ಆಗಲಿದೆ.

ಕೊಲೆ ಆರೋಪ ಸಾಬೀತಾದ್ರೆ ಮರಣ ದಂಡನೆ ವಿಧಿಸೋ ಸಾಧ್ಯತೆ ಇರುತ್ತೆ. ಅಥವಾ ಜೀವಾವಧಿ ಶಿಕ್ಷೆಯನ್ನ ಕೂಡ ಕೊಡಬಹುದು. ಇನ್ನೂ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ಆರೋಪ ಸಾಬೀತಾದ್ರೂ ಕನಿಷ್ಟ ಹತ್ತು ವರ್ಷಗಳ ಶಿಕ್ಷೆ ವಿಧಿಸಲಾಗುತ್ತೆ.

ದರ್ಶನ್ ವಿರುದ್ದ ಹಾಕಲಾಗಿರೋ ಸೆಕ್ಷನ್ ಗಳನ್ನ ನೋಡಿದ್ರೆ ಇದು ಅಷ್ಟು ಸುಲಭದ ಪ್ರಕರಣ ಅಂತೂ ಅಲ್ಲ ಅನ್ನೋದು ಗೊತ್ತಾಗುತ್ತೆ. ಈ ಪ್ರಕರಣ ಸಾಬೀತು ಪಡಿಸೋಕೆ ಪ್ರಾಸಿಕ್ಯೂಶನ್ ಯಶಸ್ವಿ ಆದ್ರೆ ದರ್ಶನ್​ಗೆ ಕಠಿಣ ಸಜಾ ಫಿಕ್ಸ್.

ವಕೀಲರ ಬದಲಾವಣೆಗೆ ಸಮಯ ಕೇಳಿದ ದಾಸ..!
ಹೌದು ತನ್ನ ಪರ ವಾದ ಮಾಡಲಿರೋ ಲಾಯರ್​ನ ಬದಲಿ ಮಾಡಬೇಕು ಅದಕ್ಕೆ ಸಮಯಾವಕಾಶ ಬೇಕು ಅಂತ ದರ್ಶನ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕೇಸ್ ತುಂಬಾನೇ ಗಂಭೀರವಾಗಿರೋದ್ರಿಂದ ದರ್ಶನ್, ತನ್ನ ಪರ ಹೆಸರಾಂತ ಕ್ರಿಮಿನಲ್​ ಲಾಯರ್ ಅಖಾಡಕ್ಕೆ ಇಳಿಸೋ ಸಿದ್ದತೆ ಮಾಡ್ತಿದ್ದಾರೆ.

ಇನ್ನೊಂದು ಕಡೆಗೆ ಈ ಪ್ರಕರಣದಲ್ಲಿ ಎ-1 ಆಗಿರೋ ಪವಿತ್ರಾ ಗೌಡ ತನ್ನ ಬೇಲ್ ಅರ್ಜಿ ಪುನರ್​ಪರಿಶೀಲನೆ ಮಾಡಬೇಕು ಅಂತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾಳೆ. ಪವಿತ್ರಾ ಹೆಣ್ಣುಮಗಳು, ನೇರವಾಗಿ ಆಕೆ ಮಾರಣಾಂತಿಕ ಹಲ್ಲೆ ಮಾಡಿಲ್ಲ, ಸೋ ಪವಿತ್ರಾಗೆ ಬೇಲ್ ಸಿಕ್ಕರೂ ಸಿಗಬಹುದು. ಆದ್ರೆ ದಾಸನಿಗೆ ಮಾತ್ರ ಕಷ್ಟ ಕಷ್ಟ ಅಂತಾರೆ ಕಾನೂನು ಪಂಡಿತರು.

ಒಟ್ಟಾರೆ ರೇಣುಕಾಸ್ವಾಮಿ ಕೇಸ್ ನಿರ್ಣಾಯಕ ಹಂತಕ್ಕೆ ಬಂದಾಗಿದೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಅನ್ನುವಂತೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಈ ಕೇಸ್ ಕೂಡ ಅಂತಿಮ ಘಟ್ಟ ತಲುಪಲೇಬೇಕು. ಆ ಹಂತದಲ್ಲಿ ಏನಾಗಲಿದೆ ಅನ್ನೋದು ನ್ಯಾಯದೇವತೆಗೆ ಮಾತ್ರ ಗೊತ್ತು..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video