Asianet Suvarna News Asianet Suvarna News

ಸಂಸ್ಥೆಗಳನ್ನು ಬ್ಯಾನ್ ಮಾಡಿದ್ರೆ ಅಂಡರ್ ವರ್ಲ್ಡ್ ಹಾಗೆ ಕೆಲಸ ಮಾಡ್ತಾರೆ; PFI ಬ್ಯಾನ್‌ಗೆ ನಟ ಚೇತನ್ ರಿಯಾಕ್ಷನ್

ಪಿಎಫ್‌ಐ ಬ್ಯಾನ್ ಮಾಡಿದ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪಿಎಫ್‌‌ಐ ಸೈದ್ದಾಂತಿಕವಾಗಿ ಒಪ್ಪಿಗೆ ಇಲ್ಲ. ಸಂಸ್ಥೆಗಳು ಬ್ಯಾನ್ ಮಾಡಿದಷ್ಟು, ಅವುಗಳು ಮತ್ತಷ್ಟು ಬೆಳೆದುಕೊಳ್ಳುತ್ತದೆ ಎಂದು ಹೇಳಿದರು.

ಪಿಎಫ್‌ಐ ಬ್ಯಾನ್ ಮಾಡಿದ ಬಗ್ಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾನಾಡಿದ ಚೇತನ್, ನನಗೆ ಪಿಎಫ್‌‌ಐ ಸೈದ್ದಾಂತಿಕವಾಗಿ ಒಪ್ಪಿಗೆ ಇಲ್ಲ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ದಾಂತಕ್ಕೂ ಭಿನ್ನಾಭಿಪ್ರಾಯ ಇದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದಕ್ಕೂ ನನ್ನ ಸಮ್ಮತಿ ‌ಇಲ್ಲ. ಪಿಎಫ್‌ಐ ಯಲ್ಲಿ ಅಕ್ರಮ ಕಂಡುಬಂದಿದ್ದಲ್ಲಿ ಆಕ್ಷನ್ ತೆಗೆದುಕೊಳ್ಳಲೇಬೇಕು. ಸಂಸ್ಥೆ ಬ್ಯಾನ್ ವಿಚಾರವನ್ನು ನಾನು ಸಂಪೂರ್ಣವಾಗಿ ಒಪ್ಪಲ್ಲ. ಯಾಕಂದ್ರೆ ಸಂಸ್ಥೆಗಳು ಬ್ಯಾನ್ ಮಾಡಿದಷ್ಟು, ಅವುಗಳು ಮತ್ತಷ್ಟು ಬೆಳೆದುಕೊಳ್ಳುತ್ತದೆ. RSS ಅನ್ನು ಒಂದು ಸಲ ಬ್ಯಾನ್ ಮಾಡಿದ್ರು.ಬ್ಯಾನ್ ಮಾಡಿದ ಮೇಲೆ ಸ್ವಲ್ಪ ದಿನ ಭಯ ಇತ್ತು. ಆದ್ರೀಗ RSS ಹೆಚ್ಚು ಕಡಿಮೆ ದೇಶವನ್ನು ಆಳುತ್ತಿದೆ. ಹಾಗಂತ RSS ಅನ್ನು ಬ್ಯಾನ್ ಮಾಡುವ ಬಗ್ಗೆ ನನಗೆ ಒಪ್ಪಿಗೆ ಇಲ್ಲ. ಸಂಸ್ಥೆಗಳನ್ನು ಬ್ಯಾನ್ ಮಾಡಿದ್ರೆ, ಅವರು ಅಂಡರ್ ವರ್ಲ್ಡ್ ಥರ ಕೆಲಸ ಮಾಡೋದಕ್ಕೆ ಶುರು ಮಾಡ್ತಾರೆ ಎಂದು ಹೇಳಿದರು.  
 

Video Top Stories