ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಕೈವಾ ಟೀಸರ್! ಧನ್ವೀರ್-ಮೇಘಾಶೆಟ್ಟಿ ಕಾಂಬಿನೇಷನ್‌ನಲ್ಲಿ ಹೊಸ ಮ್ಯಾಜಿಕ್!

ಅದು 1980ರ ದಶಕ ಕೈವಾ ಅನ್ನೋ ರೌಡಿಯ ಹವಾ ಅಷ್ಟಿಷ್ಟಲ್ಲ . ಅಂದು ಬೆಂಗಳೂರಿನಲ್ಲಿ ನಡೆದಿದ್ದ ನೈಜ ಘಟನೆಯ ಸ್ಪೂರ್ತಿಯೇ ಕೈವಾ. ಟೀಸರ್‌ನಲ್ಲಿ  ಧನ್ವೀರ್ ಮೊದಲ ನೋಟಕ್ಕೆ ಶಿಳ್ಳೆ ಚಪ್ಪಾಳೆ ಗಿಟ್ಟಿಸುತ್ತಾರೆ.
 

First Published Nov 16, 2023, 9:19 AM IST | Last Updated Nov 16, 2023, 9:19 AM IST

ನಟ ಕಿರುತೆರೆ ಸ್ಟಾರ್ ನಟ ಜೆಕೆಗೆ ಕೈವ ಸಿನಿಮಾದ(Kaiva movie) ವಿಲನ್ ಪಾತ್ರ ಭರ್ಜರಿ ಬ್ರೇಕ್ ಕೊಡೋದು ಗ್ಯಾರಂಟಿ. ಬರೀ ತಗ್ಗೀ ಬಗ್ಗೀ ನಡಿಯೋ ಹುಡುಗರನ್ನ ನೋಡಿ ಬೇಜಾರಾಗೋಗಿತ್ತು ವಕೀಲ್ರೆ. ಬಹಳ ದಿನಗಳ ನಂತರ ಒಳ್ಳೆ  ಖಡಕ್ ಕತ್ತೀನ ನೋಡ್ದೆ ಎನ್ನುತ್ತಲೇ ಟೀಸರ್‌ಗೆ(Teaser) ಕಿಚ್ಚು ಹಚ್ಚಿದ್ದಾರೆ. ಮೊದಲ ಬಾರಿಗೆ ದಿನಕರ್ ತೂಗುದೀಪ(Dinakar Thoogudeepa) ನಟನೆ ಮಾಡಿದ್ದು ಥೇಟ್ ತೂಗುದೀಪ ಶ್ರೀನಿವಾಸ್ರನ್ನು ನೋಡಿದ ಅನುಭವವಾಗುತ್ತದೆ. ನಟಿ ಮೇಘಾ ಶೆಟ್ಟಿ(Megha Shetty) ಮುಸ್ಲಿ ಹುಡುಗಿಯ ಪಾತ್ರದಲ್ಲಿ ಮುದ್ದಾಗಿ ಕಾಣಿಸುತ್ತಾರೆ. ‘ಬೆಲ್ ಬಾಟಂ’ ರೀತಿಯ ಸಿನಿಮಾ ಮಾಡಿ ಸೈ ಎನಿಸಿಕೊಂಡಿರುವ ಜಯತೀರ್ಥ  ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪಕ್ಕಾ ರೆಟ್ರೋ ಶೈಲಿಯ ಸಿನಿಮಾ ಕೈವ. ‘ಕೈವ’ ಸಿನಿಮಾದ ಟೀಸರ್ ಎಲ್ಲರ ಗಮನ ಸೆಳೆಯುತ್ತಿದೆ. ರೌಡಿಸಂ ಜೊತೆ ಒಂದು ಪ್ರೇಮ ಕಥೆ ಇರಲಿದೆ. ‘ಕೈವ’ ಸಿನಿಮಾದ ಟೀಸರ್‌ನ ಅಭಿಷೇಕ್ ಅಂಬರೀಷ್ ಹಾಗೂ ದಿನಕರ್ ತೂಗುದೀಪ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಬೆಂಗಳೂರು(bengaluru) ಕರಗದಲ್ಲಿ ಹುಟ್ಟಿದ ಪ್ರೇಮಕಥೆ ಈ ಚಿತ್ರದ ಕಥಾವಸ್ತು. ನಿರ್ದೇಶಕ ಜಯತೀರ್ಥ ಈ ಕಥೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ‘ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ  ಈ ಕಥೆ ಪಡೆದು ತಿಗಳರಪೇಟೆಗೆ ಹೋಗಿ ಘಟನೆ ಬಗ್ಗೆ ವಿಸ್ತಾರವಾಗಿ ತಿಳಿದುಕೊಂಡರಂತೆ. ಗಂಗಾರಾಮ್ ಕಟ್ಟಡ ದುರಂತಕ್ಕೂ, ಈ ಚಿತ್ರದ ಕಥೆಗೆ ಸಂಬಂಧವಿದೆ’ ಎನ್ನುತ್ತಾರೆ ಜಯತೀರ್ಥ. ರವೀಂದ್ರಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ನಿರ್ದೇಶಕರು ನಟಿಸಿರುವುದು ವಿಶೇಷ. ಡಿಸೆಂಬರ್ ತಿಂಗಳಲ್ಲಿ ಸಿನಿಮಾ ತೆರೆಕಾನಲಿದ್ದು ಸದ್ಯ ಸ್ಯಾಂಡಲ್ವುಡ್ನಲ್ಲಿ ಜಯತೀರ್ಥರ ಕೈವದ್ದೆ ಚರ್ಚೆ. 

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರಿಗೆ ಶರೀರ ಬಾಧೆ ಕಾಡಲಿದ್ದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರಲಿದೆ