Asianet Suvarna News Asianet Suvarna News

Ram Mandir: 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..?

2 ಮೂರ್ತಿಗಳು ಕೃಷ್ಣಶಿಲೆಯಲ್ಲಿ 1 ಅಮೃತ ಶಿಲೆಯಲ್ಲಿ
ಕನ್ನಡಿಗರಿಬ್ಬರ ಕೈಯಲ್ಲಿ ಅರಳಿದ 2 ರಾಮಮೂರ್ತಿಗಳು
ಇದೇ ನೋಡಿ ಅಮೃತ ಶಿಲೆಯಲ್ಲಿ ಅರಳಿದ ರಾಮಲಲ್ಲಾ

ಭವ್ಯವಾದ ರಾಮ ಮಂದಿರ ಜನವರಿ 22 ರಂದು ಉದ್ಘಾಟನೆಯಾಗಿದೆ. ಈ ಐತಿಹಾಸಿ ಕ್ಷಣಕ್ಕೆ 7 ಸಾವಿರಕ್ಕೂ ಹೆಚ್ಚು ಗಣ್ಯರು ಸಾಕ್ಷಿಯಾದರು. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ನೆರವೇರಿಸಿದ್ರು. ಇನ್ನೂ ಗರ್ಭ ಗುಡಿಯಲ್ಲಿ ಇರುವುದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌(Arun Yogiraj) ಅವರು ಕೆತ್ತಿರುವ ಮೂರ್ತಿ. ಆದ್ರೆ ಇನ್ನೂ ಇಬ್ಬರು ಶಿಲ್ಪಿಗಳು ಸಹ ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದರು. ವಿಶೇಷ ಏನಂದ್ರೆ ಇಬ್ಬರು ಕನ್ನಡಿಗರು ರಾಮಲಲ್ಲಾ ಮೂರ್ತಿಯನ್ನು(Ram Lalla Idol) ಕೆತ್ತಿದ್ದಾರೆ. ಒಬ್ಬರು ಅರುಣ್‌ ಯೋಗಿರಾಜ್‌ ಆದ್ರೆ, ಮತ್ತೊಬ್ಬರು ಗಣೇಶ್‌ ಎಲ್‌. ಭಟ್. ಮತ್ತೊಬ್ಬರು ರಾಜಸ್ಥಾನದ ಶಿಲ್ಪಿ, ಅವರ ಕೈಯಲ್ಲಿ ಬಿಳಿ ಬಣ್ಣದ ಶ್ರೀರಾಮ ಲಲ್ಲಾ ಮೂರ್ತಿ ಅರಳಿದೆ. 

ಇದನ್ನೂ ವೀಕ್ಷಿಸಿ:  ಕೌಸಲ್ಯೆಯ ಪುತ್ರನಿಗೆ ಜಗಮಗ ಅಲಂಕಾರ..ಆಭರಣಗಳ ಬೆಲೆ ಎಷ್ಟು ಕೋಟಿ..?

Video Top Stories