ಮತ್ತೆ ಒಂದಾಗ್ತಿದೆ ಸೂಪರ್ ಹಿಟ್ ಸಿನಿಮಾಗಳ ಜೋಡಿ: ಜಕ್ಕಣ್ಣ ರಾಜಮೌಳಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ !
ಮೌಳಿಯ ಮೊದಲ ಸಿನಿಮಾ ನಾಯಕ ಜ್ಯೂ.ಎನ್‌ಟಿಆರ್!
ಜ್ಯೂ.ಎನ್ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ದ ರಾಜಮೌಳಿ!
ಅದ್ಧೂರಿ ಕತೆಯೊಂದನ್ನು ಸಿದ್ಧಪಡಿಸುತ್ತಿರುವ ರಾಜಮೌಳಿ
ರಾಜಮೌಳಿ ಹಾಗೂ ಜ್ಯೂನಿಯರ್ ಎನ್‌ಟಿಆರ್ ಮತ್ತೆ ಒಂದಾಗುತ್ತಿದ್ದಾರೆ. ಈಗಾಗಲೇ ತೆಲುಗುನಲ್ಲಿ ಸ್ಟುಡೆಂಡ್ ನಂಬರ್ ಒನ್, ಸಿಂಹಾದ್ರಿ, ಯಮದೊಂಗ ಅನ್ನೋ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರೋ ಜ್ಯೂ. ಎನ್‌ಟಿಆರ್ ಹಾಗೂ ರಾಜಮೌಳಿ ಮತ್ತೆ ಜೊತೆಯಾಗಿ ಆರ್‌ಆರ್‌ಆರ್ ಅನ್ನೋ ಮ್ಯಾಜಿಕ್ ಮಾಡಿದ್ರು. ಆ ಸಿನಿಮಾ ಕೂಡ ಬ್ಲ್ಯಾಕ್ ಬಸ್ಟರ್ ಸೂಪರ್ ಹಿಟ್ ಆಯ್ತು. ಈಗ ಈ ಜೋಡಿ ಮತ್ತೆ ಒಂದಾಗುತ್ತಿದ್ದಾರಂತೆ. ಜಕ್ಕಣ್ಣ ಜ್ಯೂನಿಯರ್ ಎನ್‌ಟಿಆರ್‌ಗಾಗಿ ಅದ್ಧೂರಿ ಕತೆಯೊಂದನ್ನ ಸಿದ್ಧಪಡಿಸುತ್ತಿದ್ದಾರಂತೆ. ಅಲ್ಲದೇ ಜ್ಯೂಎನ್ಟಿಆರ್ ಹಾಗು ರಾಜಮೌಳಿಯದ್ದು ಆಪ್ತ ಗೆಳೆತನ. ಬಾಹುಬಲಿ ಸಿನಿಮಾ ಪ್ರಚಾರದ ವೇಳೆ ಈ ಬಗ್ಗೆ ಹೇಳಿಕೊಂಡಿದ್ದ ರಾಜಮೌಳಿ. ಪ್ರಭಾಸ್ ನನ್ನ ಗೆಳೆಯ ಆದ್ರೆ ಜ್ಯೂ, ಎನ್ಟಿಆರ್ ನನ್ನ ಆಪ್ತ ಗೆಳೆಯ ಎಂದಿದ್ರು. ಅಷ್ಟೆ ಅಲ್ಲ ರಾಜಮೌಳಿ ನಿರ್ದೇಶನದ ಮೊದಲ ಸಿನಿಮಾದ ನಾಯಕ ಜ್ಯೂ,ಎನ್ಟಿಆರ್. ಹೀಗಾಗಿ ಮೌಳಿ ಹಾಗೂ ತಾರಕ್ ರಾಮ್ ಮಧ್ಯೆ ಅದ್ಭುತ ಕೆಮಿಸ್ಟ್ರಿ ವರ್ಕ್ ಆಗಿದೆ. ಇದರಿಂದ ನಾಲ್ಕು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.
ಇದನ್ನೂ ವೀಕ್ಷಿಸಿ: ಸಿಲಿಕಾನ್ ಸಿಟಿ ಮಹಿಳೆಯರೇ ಎಚ್ಚರ: ಕದ್ದು ಮುಚ್ಚಿ ಪಿಜಿಯಲ್ಲಿ ಕ್ಯಾಮೆರಾ ಇಟ್ಟಿದ್ದ ಭೂಪ..!