ಜೂ. ಎನ್‌ಟಿಆರ್ ಕಾರ್ ನಂಬರ್‌ಗಳೆಲ್ಲ 9999 ! 9 ರ ಗುಟ್ಟು ಏನಿದು ಮಿಸ್ಟರಿ ?

ಜೂನಿಯರ್ ಎನ್‌ಟಿಆರ್‌ಗೆ 9999 ನಂಬರ್ ಮೇಲೆ ಯಾವುದೇ ಸೆಂಟಿಮೆಂಟ್ ಇಲ್ಲ. 9 ಸಂಖ್ಯೆ ಇತರೆ ಸ್ಟಾರ್ಸ್ ಹೇಳುವಂತೆ ಲಕ್ಕಿ ಅಂತಲೂ ಕಾರಿಗೆ ಹಾಕಿಲ್ಲ. ಬದಲಿಗೆ  ತಾರಕ್ ಈ 9 ರ ನಂಬರ್ ಹಿಂದೆ ತಾತ ಮತ್ತು ತಂದೆಯ ಸೆಂಟಿಮೆಂಟ್ ಅಡಗಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 
 

Share this Video
  • FB
  • Linkdin
  • Whatsapp

ಆರ್ ಆರ್ ಆರ್ ಸಿನಿಮಾದಲ್ಲಿ ಇವರ ಸಾಹಸಗಳು ಒಂದಾ ಎರಡಾ ಇದೀಗ ಜೂ.ಎನ್ಟಿಆರ್(N. T. Rama Rao Jr.) ಬಗ್ಗೆ ಹೊಸದೊಂದು ಕುತೂಹಲ ಚಿತ್ರರಂಗದಲ್ಲಿ ಹಬ್ಬಿದೆ. ಅದು ಜೂ. ಎನ್‌ಟಿಆರ್ ಬಳಿ ಇರೋ ಕಾರುಗಳ(Cars) ಮೇಲಿರೋ ನಂಬರ್‌ಗಳ ಬಗ್ಗೆ. ಟಾಲಿವುಡ್‌ನಲ್ಲಿ ಹಾಗೇ ನೋಡೋದಾದ್ರೆ ಅತಿ ಹೆಚ್ಚು ಕಾರ್ ಕ್ರೇಜ್ ಇರೋ ಸ್ಟಾರ್ಸ್ ಎಂದರೆ ಒಂದು ಮೆಗಾಸ್ಟಾರ್ ಚಿರಂಜೀವಿ. ಮತ್ತೊಬ್ಬರು ಶ್ರೀಕಾಂತ್. ಇವರನ್ನು ಹೊರತುಪಡಿಸಿದರೆ ಜೂ. ಎನ್ಟಿಆರ್ . ಎನ್ಟಿಆರ್ ಬಳಿ 5 ಕೋಟಿಯ ಲ್ಯಾಂಬೋರ್ಗಿನಿಯಿಂದ ಹಿಡಿದು ಒಂದು ಕೋಟಿಯ ಬಿಎಂ ಡಬ್ಲ್ಲೂ ವರೆಗೆ 5-6 ಕಾರುಗಳಿವೆ. ಆದರೆ ಅವರ ಎಲ್ಲಾ ಕಾರುಗಳ ನಂಬರ್(Car number) 9999.. ಇಷ್ಟಕ್ಕೂ ಈ ನಂಬರ್ ಯಾಕೆ..? ಈ ನಂಬರ್ ಹಿಂದಿದೆಯೇ ಏನಾದರೂ ಸೆಂಟಿಮೆಂಟ್..? ಅಥವಾ 9 ಅದೃಷ್ಟವೆಂದು ಹೀಗಂತ ನಂಬರ್ ಇಟ್ಟುಕೊಂಡರೇ ..? ಹೀಗೆಂದು 9 ರ ನಂಬರ್ ಹಿಂದಿನ ಮಿಸ್ಟರಿ ಹುಡುಕಿ ಹೊರಟಾಗಿ ಸಿಕ್ಕ ಮ್ಯಾಟರ್ ತುಂಬಾ ಇಂಟ್ರೆಸ್ಟಿಂಗಾಗಿತ್ತು.

ಇದನ್ನೂ ವೀಕ್ಷಿಸಿ: ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

Related Video