Asianet Suvarna News Asianet Suvarna News

ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

ನಿಮ್ಮೊಂದಿಗಿದ್ದೇವೆ ಅಂತ ಹೇಳ್ತಿದ್ದ ನಾಯಕರೆಲ್ಲಾ ಮೌನಕ್ಕೆ ಶರಣು
ದೆಹಲಿ ಮಟ್ಟದಲ್ಲೂ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂಬ ಬೇಸರ
ಬೇಸರದ ಮಧ್ಯೆಯೂ ಹೈದರಾಬಾದ್‌ಗೆ ಹರಿಪ್ರಸಾದ್ ಪ್ರಯಾಣ

First Published Sep 14, 2023, 11:26 AM IST | Last Updated Sep 14, 2023, 11:26 AM IST

ಕಾಂಗ್ರೆಸ್‌ ಪಕ್ಷದ ನೋಟಿಸ್‌ನಿಂದ ಬಿ.ಕೆ.ಹರಿಪ್ರಸಾದ್(BK Hariprasad) ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ವಿರುದ್ಧ ಹರಿಹಾಯ್ದಿದ್ದ ಅವರು ಈಗ ಏಕಾಂಗಿ ಆಗಿದ್ದಾರೆ. ಪಕ್ಷ ನೋಟಿಸ್ ಕೊಟ್ಟ ಬೆನ್ನಲ್ಲೇ ತಮ್ಮವರನ್ನು ಪರಿಷತ್ ಸದಸ್ಯ ಹುಡುಕುತ್ತಿದ್ದಾರೆ ಎನ್ನಲಾಗ್ತಿದೆ. ಸಿದ್ಧರಾಮಯ್ಯ( Siddaramaiah) ಮೇಲೆ  ಆರೋಪ ಮಾಡಿರೋದ್ರಿಂದ ಹರಿಪ್ರಸಾದ್‌ಗೆ ನೊಟೀಸ್ ನೀಡಲಾಗಿದ್ದು, 10 ದಿನಗಳಲ್ಲಿ ನೊಟೀಸ್‌ಗೆ ಉತ್ತರ ಕೊಡಲು ಎಐಸಿಸಿಯಿಂದಲೇ ಸೂಚನೆ ನೀಡಲಾಗಿದೆ. ಅಂದುಕೊಂಡಿದ್ದಕ್ಕೂ ವಾಸ್ತವಕ್ಕೂ ಬೇರೆಯದೇ ಆದ ಬೆಳವಣಿಗೆ ನಡೆದ ಬಗ್ಗೆ ಬೇಸರಗೊಂಡಿದ್ದಾರೆ. ಪಕ್ಷ ತೆಗೆದುಕೊಂಡ ಕ್ರಮದ ಲಾಭ-ನಷ್ಟದ ಲೆಕ್ಕಾಚಾರವನ್ನು ಹರಿಪ್ರಸಾದ್‌ ಮಾಡುತ್ತಿದ್ದಾರೆ. ಇನ್ನೂ ಈ ಬೇಸರದ ನಡುವೆಯೂ ಅವರು ನಾಳೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.16 ರಿಂದ ಎರಡು ದಿನಗಳ ಕಾಲ ನಡೆಯುವ ಸಿಡಬ್ಲುಸಿ CWC ಸಭೆಯಲ್ಲಿ ಭಾಗಿ ಆಗಲಿದ್ದಾರೆ. 

ಇದನ್ನೂ ವೀಕ್ಷಿಸಿ:  JDS ಕುಟುಂಬ ರಾಜಕಾರಣ ಪಾರ್ಟಿ..ನಮ್ದು ಅದರ ವಿರುದ್ಧ: ಪ್ರೀತಂ ಗೌಡ