Asianet Suvarna News Asianet Suvarna News

ಹುಟ್ಟುಹಬ್ಬದ ದಿನವೇ 'ಜೂನಿಯರ್' ಆಗಿ ಬಂದ ರೆಡ್ಡಿ‌ ಪುತ್ರ ಕಿರೀಟಿ!

ಗಣಿ ಧಣಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಬೆಳ್ಳಿ ತೆರೆ ಮೇಲೆ ಕೀರ್ತಿ ಪತಾಕೆ ಹಾರಿಸೋ ಟೈಂ ಹತ್ತಿರ ಆಗಿದೆ. ಇಷ್ಟು ದಿನ ಸಿನಿಮಾ ಟೈಟಲ್ ಅನೌನ್ಸ್ ಮಾಡದೇ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ರೆಡ್ಡಿ ಸನ್, ಈಗ ತನ್ನ ಹುಟ್ಟುಹಬ್ಬದ ದಿನವೇ ಟೈಟಲ್ ಅನೌನ್ಸ್ ಮಾಡಿದ್ದಾರೆ.

Oct 1, 2022, 1:02 PM IST

ಗಣಿ ಧಣಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಬೆಳ್ಳಿ ತೆರೆ ಮೇಲೆ ಕೀರ್ತಿ ಪತಾಕೆ ಹಾರಿಸೋ ಟೈಂ ಹತ್ತಿರ ಆಗಿದೆ. ಇಷ್ಟು ದಿನ ಸಿನಿಮಾ ಟೈಟಲ್ ಅನೌನ್ಸ್ ಮಾಡದೇ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ರೆಡ್ಡಿ ಸನ್, ಈಗ ತನ್ನ ಹುಟ್ಟುಹಬ್ಬದ ದಿನವೇ ಟೈಟಲ್ ಅನೌನ್ಸ್ ಮಾಡಿದ್ದಾರೆ. ಸಿಲ್ವರ್ ಸ್ಕ್ರೀನ್‌ಗೆ ಜೂನಿಯರ್ ಆಗಿರೋ ಕಿರೀಟಿ ತಮ್ಮ ಸಿನಿಮಾಗೂ ಜೂನಿಯರ್ ಅಂತ ಹೆಸರಿಟ್ಟಿದ್ದಾರೆ. ಕಿರೀಟಿ ಇಂಟ್ರಡಕ್ಷನ್ ಟೀಸರ್ ಝಲಕ್ ನೋಡಿ ಭೇಷ್ ಎಂದಿದ್ರಿ. ಇದೀಗ ಟೈಟಲ್ ಅನೌನ್ಸ್ ಟೀಸರ್ ಕೂಡ ಅಷ್ಟೇ ಇಫ್ರೆಸೀವ್ ಆಗಿದೆ. ಮೊದಲ ಸಿನಿಮಾದಲ್ಲೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುತ್ತಿರೋ ಕಿರೀಟಿಗೆ ರಾಧಾಕೃಷ್ಣ ರೆಡ್ಡಿ ಅಕ್ಷನ್ ಕಟ್ ಹೇಳುತ್ತಿದ್ದಾರೆ. 

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಬಿಗ್ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬಹುದೊಡ್ಡ ಸ್ಟಾರ್ ಕಾಸ್ಟ್ ಮತ್ತೊಂದು ಹೈಲೆಟ್  ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಅಷ್ಟೇ ಅಲ್ಲ ತೆಲುಗು ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕ್ಯಾಮೆರಾಮನ್ ಕೆ ಸೆಂಥಿಲ್ ಕುಮಾರ್ ಭಾರತೀಯ ಚಿತ್ರರಂಗದ ಟಾಪ್ ಸಾಹಸ ನಿರ್ದೇಶಕ ಪೀಟರ್ ಹೆನ್ ಜೂನಿಯರ್ ಚಿತ್ರಕ್ಕೆ ವರ್ಕ್ ಮಾಡುತ್ತಿದ್ದಾರೆ. ಸಾಹಸ ಚಿತ್ರಕ್ಕಿದೆ. ಈಗ ರೆಡ್ಡಿ ಪುತ್ರ ಕಿರೀಟಿ ಜೂನಿಯರ್ ಆಗಿ ನಿಮ್ಮನ್ನ ರಂಜಿಸಲಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment