ರಜನಿಕಾಂತ್‌ 'ಜೈಲರ್' ಸಿನಿಮಾ ನೋಡಬೇಕಾ ?: ಟಿಕೆಟ್‌ ದರ ಎಷ್ಟು ಗೊತ್ತಾ ?

ಕರ್ನಾಕಟ ಬಾಕ್ಸ್‌ ಆಫೀಸ್‌ನಲ್ಲಿ ರಜನಿ ಧರೋಡೆ..!
100,200 ಅಲ್ಲ 5 ಪಟ್ಟು ಹೆಚ್ಚು 'ಜೈಲರ್' ರೇಟ್!
ರಜನಿಕಾಂತ್ರ 'ಜೈಲರ್' ಸಿನಿಮಾ ನೋಡಬೇಕಾ..?
ಖರ್ಚಿಗೆ ರೆಡಿಯಾಗಿ 600ರಿಂದ 1400 ರೂಪಾಯಿ !

First Published Aug 7, 2023, 9:50 AM IST | Last Updated Aug 7, 2023, 9:50 AM IST

ಸೂಪರ್ ಸ್ಟಾರ್ ತಲೈವನ ಸಿನಿಮಾ ಅಂದ್ರೆನೆ ಹಾಗೆ ಮಾರ್ಕೆಟ್‌ನಲ್ಲಿ ಅಬ್ಬರ ಜೋರಾಗೆ ಇರುತ್ತೆ. ಇದೇ ಆಗಸ್ಟ್ 10ಕ್ಕೆ ಜೈಲರ್ ಬಿಗ್ ಸ್ಕ್ರೀನ್‌ಗೆ ಬರ್ತಾನೆ. ಆದ್ರೆ ಈ ಭಾರಿ ಜೈಲರ್ ಅವತಾರವೆತ್ತಿರೋ ತಲೈವಾ ರಜನಿಕಾಂತ್(Rajinikanth) ಕರ್ನಾಟಕದಲ್ಲಿ ಬಾಕ್ಸಾಫೀಸ್ ದರೋಡೆ ಮಾಡುತ್ತಿದ್ದಾರೆ. ಯಾವ್ ಮಟ್ಟಕ್ಕೆ ಗೊತ್ತಾ.? ಜೈಲರ್ ಟಿಕೇಟ್ ರೇಟ್ 100 ಅಥವ 200 ಅಲ್ಲವೇ ಅಲ್ಲ. ಅದರ ಐದು ಪಟ್ಟು ಹೆಚ್ಚಾಗಿದೆ. ಸೂಪರ್ ಸ್ಟಾರ್ ಸಿನಿಮಾಗಳಿಗೆ ಭಾರಿ ಡಿಮ್ಯಾಂಡ್ ಇದೆ. ಅದರಲ್ಲೂ ಕರ್ನಾಟಕಲ್ಲಿ ರಜನಿಕಾಂತ್‌ರ ಯಾವ್ ಸಿನಿಮಾ ಬಂದ್ರು ಬಾಕ್ಸಾಫೀಸ್ ನಲ್ಲಿ ಗೆಲ್ಲದೇ ಹೋಗಲ್ಲ. ಭಟ್ ಈ ಭಾರಿ ಬರೀ ಭಾಕ್ಸಾಫೀಸ್ ಗೆಲ್ಲುವ ಮುನ್ಸೂಚನೆ ಮಾತ್ರ ಕೊಟ್ಟಿಲ್ಲ ರಜನಿಕಾಂತ್. ಬದ್ಲಾಗಿ ನಾನು ಈ ಭಾರಿ ಕರ್ನಾಟಕ ಬಾಕ್ಸಾಫೀಸ್‌ನ ದರೋಡೆ ಮಾಡುತ್ತೇನೆ ಎಂದಿದ್ದಾರೆ. ಅದಕ್ಕೆ ಕಾರಣ ತಲೈವರ್ ನಟಿಸಿರೋ ಜೈಲರ್ ಸಿನಿಮಾ(Jailer movie) ಟಿಕೆಟ್ ರೇಟ್. ಸಾಮಾನ್ಯವಾಗಿ ಯಾವ್ದೇ ಸಿನಿಮಾ ಬಂದ್ರು ಆ ಚಿತ್ರದ ಟಿಕೆಟ್ ರೇಟ್ 100,200,300 ಇರುತ್ತೆ. ಆದ್ರೆ ಜೈಲರ್ ಸಿನಿಮಾ ಟಿಕೆಟ್ ರೇಟ್ 600 ರೂಪಾಯಿಂದ ಶುರುವಾಗಿ 1400 ರೂಪಾಯಿ ವರೆಗೂ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್ ದರ ಕೇಳಿ ಕೆಲವರು ದಂಗಾಗಿದ್ದಾರೆ. ಜೈಲರ್ ಸಿನಿಮಾ ತಮಿಳುನಾಡಿಗಿಂತ ಮೊದಲು ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ(Bengaluru) ಮೊದಲ ದಿನದ 500ಕ್ಕೂ ಅಧಿಕ ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಪಿವಿಆರ್‌, ಐನಾಕ್ಸ್‌ ನಲ್ಲಿ ಟಿಕೆಟ್ ದರ ಹೆಚ್ಚಿದ್ದು, ಸಾಮಾನ್ಯ ಜನ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡಲು ಸಾಧ್ಯವಿಲ್ಲ. ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ ಎಂದು ಈ ರೀತಿ ದರ ಹೆಚ್ಚಿಸಿದರೆ ಹೇಗೆ? ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿ ಪ್ರೇಕ್ಷಕರು ಸಿಡಿದೆದಿದ್ದಾರೆ. 

ಇದನ್ನೂ ವೀಕ್ಷಿಸಿ:  ಈ ವರ್ಷ ಕನ್ನಡದ ಬ್ಯುಸಿ ಹೀರೋ ಯಾರು ಗೊತ್ತಾ..?: ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡೋದೇ ಇವರ ಖದರ್!