ಈ ವರ್ಷ ಕನ್ನಡದ ಬ್ಯುಸಿ ಹೀರೋ ಯಾರು ಗೊತ್ತಾ..?: ವರ್ಷಕ್ಕೆ ಮೂರ್ನಾಲ್ಕು ಸಿನಿಮಾ ಮಾಡೋದೇ ಇವರ ಖದರ್!
ಕನ್ನಡಕ್ಕೆ ಬೇಕು ಬಿಗ್ ಹೀರೋಗಳ ಸಿನಿಮಾ..!
ಈ ವರ್ಷ ಕನ್ನಡದ ಬ್ಯುಸಿ ಹೀರೋ ಯಾರು..?
ಶಿವರಾಜ್ ಕುಮಾರ್ ಎಷ್ಟು ಸಿನಿಮಾದಲ್ಲಿ ಬ್ಯುಸಿ ?
ಚಿತ್ರರಂಗ ಬೆಳಿಬೇಕು ಅಂದ್ರೆ ಒಬ್ಬ ಸ್ಟಾರ್ ಹೀರೋ ವರ್ಷಕ್ಕೆ ಎರಡು ಮೂರು ಸಿನಿಮಾ ಮಾಡಬೇಕು. ಈ ಪಾಲಿಸಿಯನ್ನ ಫಾಲೋ ಮಾಡಿಕೊಂಡು ಬಂದಿದ್ರು ಅಣ್ಣಾವ್ರು. ಆದ್ರೆ ಈಗಿನ ಟಾಪ್ ಸ್ಟಾರ್ ಅಂತಹ ಯಾವ್ದೇ ಇರಾದೆ ಇಲ್ವೇ ಇಲ್ವಾ ಅನ್ನೋ ಮಾತು ಗಾಂಧೀನಗರದಲ್ಲಿದೆ. ಯಾಕಂದ್ರೆ ಕನ್ನಡದ ಟಾಪ್ ಸ್ಟಾರ್ಸ್ ಸಿನಿಮಾ ಮಾಡುತ್ತಿಲ್ಲ. ಇದ್ರಿಂದ ಸ್ಯಾಂಡಲ್‌ವುಡ್(Sandalwood) ಈ ವರ್ಷ ಸ್ಟಾರ್ಸ್ ಸಿನಿಮಾಗಳಿಲ್ಲದೇ ಇದುವರೆಗೂ ಮಂಕಾಗಿದೆ. ಒಂದ್ ಕಡೆ ಕನ್ನಡದ ಬಿಗ್ ಸ್ಟಾರ್ಸ್ ಸಿನಿಮಾ ಮಾಡುತ್ತಿಲ್ಲ. ಆದ್ರೆ ಒಬ್ರು ಟಾಪ್ ಸ್ಟಾರ್ ಮಾತ್ರ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವ್ರೇ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್(Shivaraj kumar). ಶಿವಣ್ಣ ಈ ವರ್ಷದ ಬ್ಯುಸಿಯೆಸ್ಟ್ ಹೀರೋ ಅನ್ನೋ ಪಟ್ಟದಲ್ಲಿದ್ದಾರೆ. ಅಲ್ಲಿ ಸದ್ಯ ಬರೋ ಹೆಸರು ಒಂದೇ? ಹೌದು ಅದು ಬೇರೆ ಯಾರೋ ಅಲ್ಲ. ಒನ್ ಆ್ಯಂಡ್ ಒಲ್ಲಿ ಶಿವರಾಜ್ ಕುಮಾರ್. ಯೆಸ್ ಶಿವರಾಜ್ ಕುಮಾರ್ರ ಘೋಸ್ಟ್ ಸಿನಿಮಾ(Cinema) ತೆರೆಗೆ ಬರೋದಕ್ಕೆ ರೆಡಿಯಾಗ್ತಿದೆ. ಇದರ ಜೊತೆಗೆ ಭೈರತಿ ರಣಗಲ್ ಶೂಟಿಂಗ್ ನಡೆಯುತ್ತಿದೆ. ಅಷ್ಟೇ ಅಲ್ಲ ಅರ್ಜುನ್ ಜನ್ಯಾ ನಿರ್ದೆಶನದ 45 ಸಿನಿಮಾದ ಶೂಟಿಂಗ್ ಶುರುವಾಗಿದೆ. ಈ ಸಿನಿಮಾಗಳ ಜೊತೆಗೆ ಯೋಗರಾಜ್ ಭಟ್ ನಿರ್ದೇಶನದಲ್ಲಿ ಕರಟಕ ದಮನಕ ಚಿತ್ರೀಕರಣಕ್ಕೂ ಚಾಲನೆ ಕೊಟ್ಟಿದ್ದಾರೆ ಕರುನಾಡ ಚಕ್ರವರ್ತಿ. ಇದು ಕನ್ನಡ ಚಿತ್ರರಂಗದ ಕತೆ ಆದ್ರೆ ತಮಿಳುನ ಸೂಪರ್ ಸ್ಟಾರ ರಜನಿಕಾಂತ್ರ ಜೈಲರ್ ನಲ್ಲಿ ಧನುಷ್ರ ಕ್ಯಾಪ್ಟರ್ ಮಿಲ್ಲರ್ನಲ್ಲೂ ನಟಿಸಿದ್ದು, ಈ ಸಿನಿಮಾಗಳು ರಿಲೀಸ್ ಡೇಟ್ಗೆ ಹತ್ತಿರದಲ್ಲಿವೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಸಿಂಹ ರಾಶಿಯವರಿಗೆ ಹಣಕಾಸಿನಲ್ಲಿ ನಷ್ಟ..ಶುಕ್ರನಿಂದ ಈ ಎಲ್ಲಾ ರಾಶಿಯವರಿಗೆ ತೊಂದರೆ