ದರ್ಶನ್ ಸಮ್ಮುಖದಲ್ಲಿಯೇ ಪ್ರಾಣಿ ದತ್ತು ಪಡೆದ ಇಂಡುವಾಳು ಸಚ್ಚಿದಾನಂದ

ಕರುನಾಡ ದಾಸನ ಸ್ನೇಹಿತ ಸಚ್ಚಿದಾನಂದ ಅವರು ಮೈಸೂರಿನ ಝೂಗೆ ಭೇಟಿ ಕೊಟ್ಟು 2.50 ಲಕ್ಷ ರೂ. ಮೊತ್ತಕ್ಕೆ ಆನೆ ಹಾಗೂ ಹುಲಿಯನ್ನು ವರ್ಷಕ್ಕೆ ದತ್ತು ಪಡೆದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸಹ ಇವರಿಗೆ ಸಾಥ್ ನೀಡಿದ್ದರು. 

Share this Video
  • FB
  • Linkdin
  • Whatsapp

ರಾಬರ್ಟ್ ಹೀರೋ, ಸ್ಯಾಂಡಲ್‌ವುಡ್ ಯಜಮಾನ ಖ್ಯಾತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿರುವ ಪ್ರಾಣಿ ಸಂಗ್ರಹಲಾಯಗಳು ಪ್ರಾಣಿಗಳನ್ನು ದತ್ತು ಪಡೆಯಲು ಕರೆ ನೀಡಿದ್ದೇ ನೀಡಿದ್ದು, ನಿರೀಕ್ಷೆಗೂ ಮೀರಿ ನಿಧಿ ಸಂಗ್ರಹವಾಗುತ್ತಿದೆ. ಅದರಲ್ಲಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು, ಸ್ನೇಹಿತರು ತಾ ಮುಂದು, ನಾ ಮುಂದೆಂದು ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ದರ್ಶನ್ ಹೆಸರಿನ ಸಿಂಹವನ್ನು ದತ್ತು ಪಡೆದ ಬೆನ್ನಲ್ಲೇ ಇದೀಗ ಕರುನಾಡ ದಾಸನ ಸ್ನೇಹಿತ ಸಚ್ಚಿದಾನಂದ ಅವರು ಮೈಸೂರಿನ ಝೂಗೆ ಭೇಟಿ ಕೊಟ್ಟು 2.50 ಲಕ್ಷ ರೂ. ಮೊತ್ತಕ್ಕೆ ಆನೆ ಹಾಗೂ ಹುಲಿಯನ್ನು ವರ್ಷಕ್ಕೆ ದತ್ತು ಪಡೆದಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸಹ ಇವರಿಗೆ ಸಾಥ್ ನೀಡಿದ್ದರು. 

ಸಿನಿಮಾ ಹಂಗಾಮ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Related Video