ಮೊನಾಲಿಸಾ ನೆನಪಲ್ಲಿ ‘ಗೌರಿ’ ಹಾಡು ಬಿಡುಗಡೆ: ಈ ಸಿನಿಮಾಗೆ 20 ವರ್ಷದ ಸಂಭ್ರಮ!

ಮೊನಾಲಿಸಾ ಚಿತ್ರದ ನಿರ್ದೇಶನಕ್ಕಾಗಿ ಇಂದ್ರಜಿತ್ ಲಂಕೇಶ್ ಅತ್ಯುತ್ತಮ ನಿರ್ದೇಶಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ರು. ಇದೀಗ ಮೊನಾಲಿಸಾ ಸಿನಿಮಾದ 20 ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖಾ, ನಟ ಶರಣ್ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ರು.

Share this Video
  • FB
  • Linkdin
  • Whatsapp

ಮೊನಾಲಿಸಾ ಈ ಹೆಸರನ್ನು ಕೇಳಿದ್ರೆ ಸಾಕು, ಕನ್ನಡದ ಸಿನಿ ಅಭಿಮಾನಿಗಳ ಮನಸ್ಸು 20 ವರ್ಷಗಳ ಹಿಂದಕ್ಕೆ ಹೋಗುತ್ತೆ. ಹಾಲಿವುಡ್ ಶಿಲ್ಪಿಯ ಕಲ್ಪನೆಯಲ್ಲಿ ಮೋಡಿ ಬಂದಿದ್ದ ಮೊನಾಲಿಸಾ (Monalisa movie) ಬಾವ ಚಿತ್ರದಂತೆ, ನಿರ್ದೇಶಕ ಇಂದ್ರಜಿತ್ (Indrajit Lankesh), ಮೊನಾಲಿಸಾ ಹೆಸರಿನಲ್ಲಿ ಅದ್ಭುತ ಲವ್ ಸ್ಟೋರಿ ಕಟ್ಟಿಕೊಟ್ಟಿದ್ರು. ಕನ್ನಡದಲ್ಲಿ ನನ್ನ ಪ್ರಿತಿಯ ಹುಡುಗಿ ಮಾಡಿ ಸಕ್ಸಸ್‌ಫುಲ್ ಹೀರೋ ಆಗಿದ್ದ ಧ್ಯಾನ್, ನಾಯಕನಾದ್ರೆ, ಜಯಂ ಸಿನಿಮಾ ಖ್ಯಾತೀಯ ಸದಾ ನಾಯಕಿಯಾಗಿದ್ರು. ಈ ಬ್ಯೂಟಿಫುಲ್ ಲವ್ ಸ್ಟೋರಿಗೆ ಶರಣ್‌ರ ಕಾಮಿಡಿ ಟಚ್ ಮತ್ತಷ್ಟು ವರ್ಕ್‌ಔಟ್ ಆಗಿತ್ತು. ಅಂದಹಾಗೆ ಮೊನಾಲಿಸಾ ಸಿನಿಮಾದ 20 ವರ್ಷದ ಸಂಭ್ರಮದಲ್ಲೇ ನಿರ್ದೇಶಕ ಇಂದ್ರಜಿತ್ ಆಕ್ಷನ್ ಕಟ್ ಹೇಳೋದುತ್ತಿರೋ ಗೌರಿ ಸಿನಿಮಾದ(Gowri Movie) ಹಾಡನ್ನೂ ರಿಲೀಸ್(Song release) ಮಾಡಲಾಗಿದೆ. ಮೊನಾಲಿಸಾ ಚಿತ್ರದ ಫೇಮಸ್ ಜೋಡಿ, ಧ್ಯಾನ್ ಅಂಡ್ ಸಧಾ, ಈ ಹಾಡನ್ನ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ರು. ಅಂದು ಮೊನಲಿಸಾಗೆ ಕೆಲಸ ಮಾಡಿದ ಆಲ್‌ಮೋಸ್ಟ್ ಟೆಕ್ನಿಷಿಯನ್ಸ್ ಗೌರಿ ಚಿತ್ರಕ್ಕೂ ಕೆಲಸ ಮಾಡಿರೊದು ವಿಶೇಷ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಹಾಗು ಸಾನ್ಯ ಅಯ್ಯರ್ ನಟನೆಯ ಗೌರಿ ಸಿನಿಮಾ ಸಾಕಷ್ಟು ಸ್ಪೆಷಾಲಿಟಿಗಳಿಂದ ಗಮನ ಸೆಳೆಯುತ್ತಿದೆ. ಆಗಸ್ಟ್ 15ಕ್ಕೆ ತೆರೆ ಮೇಲೆ ಬರಲಿರೋ ಗೌರಿ ಹಾಡುಗಳಂತು, ಟಾಪ್ ಲಿಸ್ಟ್‌ನಲ್ಲಿದ್ದು ಸಿನಿಮಾ ಕ್ರೇಜ್ ಹೆಚ್ಚಿಸಿವೆ. ಇದೀಗ, ಕವಿರಾಜ್ ಲೇಖನಿಯಲ್ಲಿ ಮೂಡಿಬಂದಿರೋ ಮುದ್ದಾದ ನಿನ್ನ ಹೆಸರೇನು ಪದಗಳಿಗೆ, ನಿಹಾಲ್ ಧ್ವನಿಯಾಗಿದ್ದು, ಜೆಸ್ಸಿಗಿಫ್ಟ್ ಅದ್ಬುತ ಟ್ಯೂನ್ ಬೆಸೆದಿದ್ದಾರೆ. 

ಇದನ್ನೂ ವೀಕ್ಷಿಸಿ: ‘ಬಾ ಬಾ ಬ್ಲಾಕ್ ಶೀಪ್ ಎಂದು ಮಚ್ಚು ಹಿಡಿದು ಬಂದ ಕಿಚ್ಚ ! ಕಿಕ್ ಕೊಟ್ಟ ಮ್ಯಾಕ್ಸ್ ಟೀಸರ್..ಫ್ಯಾನ್ಸ್‌ಗೆ 'max'imum' ಹಬ್ಬ!

Related Video