ವೆಂಕಟ್, ಸುಧಾರಾಣಿ, ಶ್ರುತಿಗೆ ವಿಜಯಲಕ್ಷ್ಮೀ ಧನ್ಯವಾದ.. ಮತ್ತೆ ಸಿನಿಮಾ ಮಾಡ್ತೆನೆ!

* ಕಷ್ಟದಲ್ಲಿರೋ ವಿಜಯಲಕ್ಷ್ಮಿಗೆ ಸ್ಪಂದಿಸಿದ ಕರುನಾಡು
* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಜೊತೆ ನಟಿ ಸುದ್ದಿಗೋಷ್ಠಿ. 
* ಆರ್ಥಿಕ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ವಿಜಯಲಕ್ಷ್ಮಿ.
* ವಾಣಿಜ್ಯ ಮಂಡಳಿಗೆ ಬೈದ ಜಗದೀಶ್ ಪರ ಕ್ಷಮೆಯಾಚಿಸಿದ ನಾಗಮಂಗಲ ನಟಿ

Share this Video
  • FB
  • Linkdin
  • Whatsapp

ಬೆಂಗಳೂರು(ಅ. 01) ಕಷ್ಟದಲ್ಲಿರೋ ನಟಿ ವಿಜಯಲಕ್ಷ್ಮಿಗೆ(Vijayalakshmi) ಕರುನಾಡು ಸ್ಪಂದಿಸಿದ್ದು ನಟಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ (Sandalwood) ಮಂಡಳಿ ಕಾರ್ಯದರ್ಶಿ ಜೊತೆ ನಟಿ ಸುದ್ದಿಗೋಷ್ಠಿ ನಡೆಸಿದ್ದು ಧನ್ಯವಾದ ಸಲ್ಲಿಸಿದ್ದಾರೆ.

ನಟಿಯ ಕಷ್ಟಕ್ಕೆ ಸ್ಪಂದಿಸಿದ ಕನ್ನಡಿಗರು

ಆರ್ಥಿಕ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ವಾಣಿಜ್ಯ ಮಂಡಳಿಗೆ ಬೈದ ಜಗದೀಶ್ ಪರ ಕ್ಷಮೆಯಾಚಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಸಂಕಟದಲ್ಲಿ ಸಹಾಯ ಬೇಡಿಕೆ ಇಟ್ಟಿದ್ದರು. ಅಭಿಮಾನಿಗಳಿಂದ ಹರಿದು ಬಂದ ನೆರವನ್ನು ನಟಿಗೆ ಹಸ್ತಾಂತರ ಮಾಡಲಾಗಿದೆ. ಅಕ್ಕನಿಗೆ ವ್ಯವಸ್ಥೆ ಮಾಡಿ, ಚಿತ್ರದಲ್ಲಿ ನಟಿಸುವುದಾಗಿ ಹೇಳಿಕೆ ನೀಡಿದ್ದಾರೆ. ನಾನು ಅನಾಥೆ, ಕನ್ನಡ ಚಿತ್ರರಂಗವೇ ನನ್ನ ಫ್ಯಾಮಿಲಿ ಎಂದ ವಿಜಯಲಕ್ಷ್ಮೀ ಹುಚ್ಚ ವೆಂಕಟ್, ಸುಧಾರಾಣಿ, ಶ್ರುತಿಗೆ ಧನ್ಯವಾದ ಸಲ್ಲಿಸಿದ್ದಾರೆ. 

Related Video