ಕಷ್ಟದಲ್ಲಿರೋ ವಿಜಯಲಕ್ಷ್ಮಿಗೆ ಸ್ಪಂದಿಸಿದ ಕರುನಾಡು, ಹರಿದು ಬಂತು ಸಹಾಯ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಜೊತೆ ನಟಿ ವಿಜಯಲಕ್ಷ್ಮಿ ಸುದ್ದಿಗೋಷ್ಠಿ. ಆರ್ಥಿಕ ಸಹಾಯ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ನಟಿ.
'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮಿ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಭಿಕ್ಷೆ ಎಂದುಕೊಂಡಾದರೂ ಸಹಾಯ ಮಾಡಿ, ಎಂದು ವಿಡಿಯೋ ಮೂಲಕ ಕನ್ನಡದ ಜನತೆಗೆ ಮನವಿ ಮಾಡಿಕೊಂಡಿದ್ದರು. ಇದೀಗ ಅಭಿಮಾನಿಗಳು ಹಾಗೂ ಸಂಘದವರು ಸೇರಿಕೊಂಡು 3 ಲಕ್ಷ 2 ಸಾವಿರ 900 ರೂ. ಸಂಗ್ರಹ ಮಾಡಿ ವಾಣಿಜ್ಯ ಮಂಡಳಿ ಮೂಲಕ ವಿಜಯಲಕ್ಷ್ಮಿಗೆ ಹಸ್ತಾಂತರಿಸಿದ್ದಾರೆ.
"
'ನನಗೆ ಯಾರೂ ಇಲ್ಲ ಅನ್ನೋದು ನಿಮಗೆ ಗೊತ್ತಿದೆ. ಅಮ್ಮ ಹೋಗಿದ ತಕ್ಷಣ ನಾನು ಕರೆ ಮಾಡಿದ್ದು ಪ್ರೇಮಾ ಅವರಿಗೆ. ಏನ್ ಮಾಡ್ತೀಯಾ ನೀನು ಎಂದು ಪ್ರಶ್ನೆ ಮಾಡಿ, ನನಗೆ ಬಾಮಾ ಹರೀಶ್ ಅವರ ನಂಬರ್ ಕೊಟ್ಟರು. ಕರೆ ಮಾಡಿದ ತಕ್ಷಣ ಬರ್ತಾ ಇದ್ದೀನಿ ಅಂತ ಹೇಳಿದ್ರು. ನಾವು ಹೆಣ್ಣು ಮಕ್ಕಳು ಎಷ್ಟೇ ಧೈರ್ಯವಂತರಾದರೂ ಒಂದು ಪಾಯಿಂಟ್‌ನಲ್ಲಿ ಸೋತು ಹೋಗುತ್ತೇವೆ. ಸುಂಟಿಕೊಪ್ಪ ಅನಾಥ ಆಶ್ರಮಕ್ಕೆ ಕರೆದುಕೊಂಡು ನೈಟ್ ಅಲ್ಲೇ ಇಟ್ಟು ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆಮೇಲೆ ಮೂರು ದಿನಗಳ ನಂತರ ಶ್ರೀರಂಗಪಟ್ಟಣದಲ್ಲಿ ಭೂದಿ ಬಿಟ್ಟು ಪೂಜೆ ಮಾಡಿ, ಅವರ ಆತ್ಮ ತೃಪ್ತಿಯಾಗಿ ಕಳುಹಿಸುವ ಕೆಲಸ ಮಾಡಿದ್ದೀವಿ,' ಎಂದು ವಿಜಯ್ ಲಕ್ಷ್ಮಿ ಮಾತನಾಡಿದ್ದಾರೆ.
'ದಯವಿಟ್ಟು ವಿಚಾರವನ್ನು ಕಾಂಪ್ಲೀಕೇಟ್ ಮಾಡಬೇಡಿ. ಮೀಡಿಯಾದವರು ಓವರ್ ಎಫೀಶಿಯಂಟ್ ಆಗಬೇಡಿ. ಎಲ್ಲರ ಬಂದು ಕೈ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಯಾವ ಅಕೌಂಟ್‌ಗೆ ದುಡ್ಡು ಹಾಕಬೇಕು ಎಂದು ಕೇಳುತ್ತಿದ್ದಾರೆ. ಯಾರೂ ಚುಚ್ಚುವ ಕೆಲಸ ಮಾಡುತ್ತಿಲ್ಲ. ಶಿವಣ್ಣ, ಯಶ್ ಎಲ್ಲರೂ ನನ್ನ ಜೊತೆ ಮಾತನಾಡಿ ಆಯ್ತು. ನಾವು ಕಲಾವಿದರು ಹೊಡೆದುಕೊಂಡರೂ, ಒಂದೇ ಫ್ಯಾಮಿಲಿಯಲ್ಲಿ ಇರಬೇಕು. ಆನೇಕಲ್‌ನಲ್ಲಿ ಒಂದು ಮನೆ ಫ್ರೀ ಆಗಿ ಕೊಡುತ್ತಿದ್ದಾರೆ ನನಗೆ. ಆದರೆ ನಾನು ಹೋಗುತ್ತಿಲ್ಲ ಏಕೆಂದರೆ ನಾನು ಬೆಂಗಳೂರಿನಲ್ಲಿ ಇದ್ದರೆ ಮಾತ್ರ ಸಿನಿಮಾ ಚಿತ್ರೀಕರಣ ಮಾಡಲು ಸಾಧ್ಯ. ಒಂದು ತಿಂಗಳು ನಾನು ಅಳುವುದಕ್ಕೆ ಆಗುತ್ತಾ? ಅಕ್ಕನಿಗೆ ಒಂದೇ ತಿಂಗಳಲ್ಲಿ ಚಿಕಿತ್ಸೆ ನೀಡುವುದಕ್ಕೆ ಆಗುತ್ತಾ? ನಾನು ಅನಾಥೆ. ನನಗೆ ಇವರೇ ಫ್ಯಾಮಿಲಿ. ಈಗ ನನಗೆ 3 ಲಕ್ಷ ಬಂದಿದೆ ಅಂದ್ರೆ ನಾನು ಹರೀಶ್ ಅಣ್ಣ ಅವರಿಗೆ ಕೇಳುತ್ತಿರುವೆ ಅಣ್ಣ ಇದನ್ನ ಏನ್ ಮಾಡ್ಲಿ ಅಂತ,' ಎಂದಿದ್ದಾರೆ ವಿಜಯಲಕ್ಷ್ಮಿ.
ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತಾದರೂ ಪರವಾಗಿಲ್ಲ: ನಟಿ ವಿಜಯಲಕ್ಷ್ಮಿ'ಲಾಯರ್ ಅವರು ಮಾತನಾಡಿರುವುದರ ಬಗ್ಗೆ ಕೇಳಿಕೊಳ್ಳುವೆ. ನಾನು establish ಮಾಡಿಕೊಂಡಿದ್ದೀನಿ ಕರ್ನಾಟಕದಲ್ಲಿ, ನಾನು ಭಿಕ್ಷುಕಿ ಅಂತ. ಅದರಲ್ಲಿ ಏನಿದೆ? ಒಂದು ದಿನ ನಾವು ಜೀವನ ಮಾಡುವುದಕ್ಕೆ ಭಿಕ್ಷೆ ಎತ್ತಬೇಕು. ವಾಣಿಜ್ಯ ಮಂಡಳಿ ಹಾಗೂ ಕಲಾವಿದರ ಸಂಘ ಫ್ಯಾಮಿಲಿ ಆಗಿ ನಿಂತಿವೆ. ಹುಚ್ಚ ವೆಂಕಟ್ ಅಣ್ಣ, ಸುಧಾರಾಣಿ ಮ್ಯಾಡಮ್, ಶ್ರುತಿ ಮ್ಯಾಡಮ್, ಶಿವಣ್ಣ, ಪುನೀತ್ ಸರ್ ಎಲ್ಲರೂ ಮಾತನಾಡಿದ್ದಾರೆ. ಇವತ್ತಿನ ನಂತರ ಯಾರೂ ನನ್ನ ಕೈ ಬಿಡುವುದಿಲ್ಲ ನನಗೆ ಕೆಟ್ಟದು ಆಗಬೇಕು ಅಂತ ಯಾರೂ ಬಯಸುವುದಿಲ್ಲ. ಲಾಯರ್ ಜಗದೀಶ್ ಸರ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ವಿಡಿಯೋ ನೋಡಿದೆ. ಇದು ನನ್ನ ಫ್ಯಾಮಿಲಿ. ನೀವು ಸ್ವಲ್ಪ ಇವರನ್ನ ಈ ರೀತಿ ಕೆಟ್ಟದಾಗಿ ಬಯ್ಯಬಾರದು ಅಂತ ಕೇಳಿಕೊಳ್ಳುವೆ. ಅವರ ಪರ ನಾನು ಕ್ಷಮೆ ಕೇಳುತ್ತೇನೆ,' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.