ಹೊಂಬಾಳೆ ಫಿಲ್ಮ್ಸ್​​ ಮತ್ತೊಂದು ಹೊಸ ಹೆಜ್ಜೆ: ಬಾಕ್ಸಾಫೀಸ್​​ನಲ್ಲಿ ಮುಗ್ಗರಿಸಿದ 'ಕಂಗುವಾ'

ಕೆಲವು ದಿನಗಳ ಹಿಂದಷ್ಟೇ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಜೊತೆ ಮೂರು ಸಿನಿಮಾ ಅಂತ ಅನೌನ್ಸ್​​ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈಗ, ಫ್ಯಾಂಟಸಿ ಸಿನಿಮಾದ ಮಾಡೋಕೆ ಸಜ್ಜಾಗಿದೆ. ಆ ಸಿನಿಮಾದ ಫಸ್ಟ್​ ಲುಕ್​ ಕೂಡ ರಿಲೀಸ್ ಮಾಡಿದೆ. 

First Published Nov 17, 2024, 4:19 PM IST | Last Updated Nov 17, 2024, 4:19 PM IST

ಮಲೆಯಾಳಂನ ಸ್ಟಾರ್​ ನಟಿ ಕೀರ್ತಿ ಸುರೇಶ್ ಮದುವೆಗೆ ಸಜ್ಜಾಗಿದ್ದಾರಂತೆ. ಕೀರ್ತಿ ಸುರೇಶ್​​ ಡಿಸೆಂಬರ್​​​ನಲ್ಲಿ ಹಸೆಮಣೆ ಏರುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. 2 ವರ್ಷಗಳ ಹಿಂದೆ ಕೀರ್ತಿ ಸುರೇಶ್ ಕೇರಳ ಮೂಲದ ರಾಜಕಾರಣಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಕಳೆದ ವರ್ಷ ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಕೀರ್ತಿ ಸುರೇಶ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂದು ಹೇಳಲಾಗಿತ್ತು. ಈಗ ಕೀರ್ತಿ ಸುರೇಶ್ ಮದುವೆಯ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಡಿಸೆಂಬರ್ನಲ್ಲಿ ಅವರು ಮದುವೆಯಾಗಲಿದ್ದಾರೆ, ಗೋವಾದಲ್ಲಿ ಮದುವೆ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಇದು ಪೋಷಕರು ನಿಶ್ಚಯಿಸಿದ ಮದುವೆ, ಕೀರ್ತಿ ಸುರೇಶ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಹೊಂಬಾಳೆ ಫಿಲ್ಮ್ಸ್​​ ಮತ್ತೊಂದು ಹೊಸ ಹೆಜ್ಜೆ: ಕರ್ನಾಟಕದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಹೊಸ ಸಾಹಸಕ್ಕೆ ಹೈ ಹಾಕಿದೆ. ಕೆಲವು ದಿನಗಳ ಹಿಂದಷ್ಟೇ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಜೊತೆ ಮೂರು ಸಿನಿಮಾ ಅಂತ ಅನೌನ್ಸ್​​ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈಗ, ಫ್ಯಾಂಟಸಿ ಸಿನಿಮಾದ ಮಾಡೋಕೆ ಸಜ್ಜಾಗಿದೆ. ಆ ಸಿನಿಮಾದ ಫಸ್ಟ್​ ಲುಕ್​ ಕೂಡ ರಿಲೀಸ್ ಮಾಡಿದೆ. ಈ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 

ಜಸ್​​ಕರಣ್ ಸಿಂಗ್ ಧ್ವನಿಯಾದ ಹಾಡಿನೊಂದಿಗೆ ಎದೆಗಿಳಿದ ಅಂಶು: ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ಅಂಶು ಸಿನಿಮಾದ ಹಾಡು ಬಿಡುಗಡೆ ಆಗಿದೆ. ಅಂಶು ಸಿನಿಮಾದ ಹಾಡಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಫೇಮಸ್​ ಗಾಯಕ ಪಂಜಾಬಿನ ಜಸ್​​ಕರಣ್ ಸಿಂಗ್ ಹಾಡಿದ್ದಾರೆ. ಮಹೇಂದ್ರ ಗೌಡ ಬರೆದಿರೋ ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂಶು ಸಿನಿಮಾಗೆ ಎಂ.ಸಿ ಚನ್ನಕೇಶವ ನಿರ್ದೇಶನ ಮಾಡಿದ್ದಾರೆ.

ಬಾಕ್ಸಾಫೀಸ್​​ನಲ್ಲಿ ಮುಗ್ಗರಿಸಿದ 'ಕಂಗುವಾ': ಟಾಲಿವುಡ್​​ನ ಭಾರಿ ಸೌಂಡ್ ಮಾಡಿದ್ದ ಕಂಗುವಾ ಸಿನಿಮಾ ಬಾಕ್ಸಾಫೀಸ್​​​ ಕಲೆಕ್ಷನ್​​ನಲ್ಲಿ ಮುಗ್ಗರಿಸಿದೆ. ಸೂರ್ಯ ನಟನೆಯ ಕಂಗುವಾ ಸಿನಿಮಾ ರಿಲೀಸ್ ಆಗಿ ಮೊದಲ ದಿನ 24 ಕೋಟಿ ರೂಪಾಯಿ ಗಳಿಸಿತ್ತು, ಆದ್ರೆ. ಸಿನಿಮಾ ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಫಲವಾಗಿದ್ದು, ಎರಡನೇ ದಿನ ಕೆಲವೇ 9 ಕೋಟಿ ರೂಪಾಯಿ ಗಳಿಸಿದ್ದು ಬಾಕ್ಸಾಫೀಸ್​​ ಮೇಲಿದ್ದ ಎಲ್ಲರ ನಿರೀಕ್ಷೆಯನ್ನ ಕಂಗುವಾ ಸುಳ್ಳು ಮಾಡಿದೆ. 

Video Top Stories