Asianet Suvarna News Asianet Suvarna News

ಹಿಂದಿ ಘೋಸ್ಟ್‌ ಟ್ರೈಲರ್‌ಗೆ ಕನ್ನಡಕ್ಕಿಂತ ಡಬಲ್, ತ್ರಿಬಲ್ ವೀಕ್ಷಣೆ! ಕನ್ಫ್ಯೂಸ್ ಆದ ಕನ್ನಡ ಪ್ರೇಕ್ಷಕ!

ಡಿಫರೆಂಟ್ ಶಿವಣ್ಣನನ್ನು ಯಂಗ್ ಶವರಾಜ್‌ ಕುಮಾರ್‌ರನ್ನು ಘೋಸ್ಟ್ ಟ್ರೈಲರ್‌ನಲ್ಲಿ ನೋಡಿದ  ಪ್ರೇಕ್ಷಕ ಶಾಕ್ ಆಗಿದ್ದು ನಿಜ. ಇದೀಗ ಘೋಸ್ಟ್ ಟ್ರೈಲರ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶಿವಣ್ಣನ ಘೋಸ್ಟ್ ಸಿನಿಮಾ ರಿಲೀಸ್ ಆಗುತ್ತಿದ್ದು, ಕನ್ನಡ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಆದ್ರೆ ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆದ ಘೋಸ್ಟ್ ಟ್ರೈಲರ್ ಕನ್ನಡ ಟ್ರೈಲರ್ಗಿಂತ ಹೆಚ್ಚು ಜನ ಹಿಂದಿ ಘೋಸ್ಟ್ ಟ್ರೈಲರ್ ನೋಡಿದ್ದಾರೆ .

ಮೂರು ದಿನಗಳಿಂದ 'ಘೋಸ್ಟ್' (Ghost) ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಆದರೆ, ಕಳೆದ ಮೂರು ದಿನಗಳಲ್ಲಿ 'ಘೋಸ್ಟ್' ಸಿನಿಮಾ ಹಿಂದಿ ಟ್ರೈಲರ್ ಪೆನ್ ಮೂವೀಸ್ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿತ್ತು. ಆ ಟ್ರೈಲರ್‌ಗೆ ಸುಮಾರು 13 ಮಿಲಿಯನ್ ವೀವ್ಸ್ ಸಿಕ್ಕಿದೆ. ಅಚ್ಚರಿ ವಿಷಯ ಏನಂದ್ರೆ, ಕನ್ನಡದ ಟ್ರೈಲರ್ಗೆ(Kannada trailer) ಹಿಂದಿಯ ಅರ್ಧದಷ್ಟೂ ವೀವ್ಸ್ ಸಿಕ್ಕಿಲ್ಲ. ಕನ್ನಡದಲ್ಲಿ ಕೇವಲ 5.8 ಮಿಲಿಯನ್ ವೀವ್ಸ್ ಸಿಕ್ಕಿದೆ. ತಮಿಳಿನಲ್ಲಿ 'ಘೋಸ್ಟ್' ಟ್ರೈಲರ್ಗೆ 3.73 ಲಕ್ಷ ವೀವ್ಸ್ ಸಿಕ್ಕಿದೆ. ಅದೇ ತೆಲುಗಿನಲ್ಲಿ 5.68 ಲಕ್ಷ ವೀವ್ಸ್ ಸಿಕ್ಕಿದ್ದರೆ, ಅದೇ ಮಲಯಾಳಂನಲ್ಲಿ 1.50 ವೀವ್ಸ್ ಸಿಕ್ಕಿದೆ. ಈ ಬದಲಾವಣೆಗೆ ಮುಖ್ಯ ಕಾರಣ ಜೈಲರ್(Jailer) ಸಿನಿಮಾ ಸೃಷ್ಟಿಸಿದ ಕ್ರೇಜ್. ಶಿವರಾಜ್‌ಕುಮಾರ್‌ಗೆ(Shivarajkumar) ಇದೀಗ ಭಾರತ ದೇಶದಾದ್ಯಂತ ಅತಿ ದೊಡ್ಡ ಫ್ಯಾನ್ ಫೋಲೋಯಿಂಗ್ ಶುರುವಾಗಿದೆ. ಜೈಲರ್ ನರಸಿಂಹ ಪಾತ್ರ ಸೃಷ್ಟಿಸಿದ ಹವಾ ಇದಾಗಿದೆ. ಇದರಿಂ.ದಾಗಿ ಘೋಸ್ಟ್ ಸಿನಿಮಾ ಟ್ರೈಲರ್ನ್ನು ಹಿಂದಿಯವರೂ ಕೂಡ ಮುಗಿಬಿದ್ದು ನೋಡಿದ್ದಾರೆ. ಇನ್ನು ಘೋಸ್ಟ್ ಶ್ರೀನಿ  ನಿರ್ದೇಶನ ಮಾಡಿದ್ದು ಶಿವಣ್ಣ  ಒಜಿ ಒರಿಜಿನಲ್ ಗ್ಯಾಂಗ್ ಸ್ಟರ್ಆಗಿ ಕಾಣಿಸಿಕೊಂಡಿದ್ದಾರೆ.  ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಿನಿಮಾ ರೆಡಿಯಾಗಿದ್ದು ಐದು ಭಾಷೆಗಳಲ್ಲಿ ದಸರಾ ಹಬ್ಬಕ್ಕೆ ಥಿಯೇಟರ್ನಲ್ಲಿ ಧಮಾಕ ಮಾಡಲು ಬರುತ್ತಿದೆ.

ಇದನ್ನೂ ವೀಕ್ಷಿಸಿ:  ಯಶ್ ಸ್ಟಾರ್ ಆಗೋ ಮೊದಲು ಹೇಗಿದ್ರು ? ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್‌ ಕಟ್ಟೆಯಲ್ಲೇ ರಾತ್ರಿ ಕಳೆದಿದ್ದ ರಾಕಿಂಗ್‌ಸ್ಟಾರ್‌ !

Video Top Stories