ಇಲ್ಲಿತನಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಕನ್ನಡ ಚಿತ್ರಗಳು ಯಾವುವು ಗೊತ್ತಾ?
ನಂ.1 ಸ್ಥಾನದಲ್ಲಿ ಕೆಜಿಎಫ್ 2, 1200 ಕೋಟಿ ಕಲೆಕ್ಷನ್!
ನಂ.2 ಸ್ಥಾನದಲ್ಲಿ ಕಾಂತಾರಾ, 400 ಕೋಟಿ ಕಲೆಕ್ಷನ್
ನಂ.3. ಸ್ಥಾನದಲ್ಲಿ ಕೆಜಿಎಫ್ 1,250 ಕೋಟಿ ಕಲೆಕ್ಷನ್!
ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 1 ಕೋಟಿಯಲ್ಲಿ ಸಿನಿಮಾ ಮಾಡುವ ಕಾಲ ಈಗ ಹೋಗಿದೆ. ಮಿನಿಮಮ್ ಬಜೆಟ್ ಅಂದ್ರೆ 10 ರಿಂದ 20 ಕೋಟಿ ಬಜೆಟ್‌ನಿಂದ ಶುರುವಾಗಿ 100 ಕೋಟಿ 150 ಕೋಟಿ ಬಂಡವಾಳದ ಸಿನಿಮಾಗಳನ್ನು ನಿರ್ಮಾಣ ಮಾಡುವ ಹಂತಕ್ಕೆ ಇದೀಗ ಸ್ಯಾಂಡಲ್‌ವುಡ್ ಬಂದಿದೆ. ಕನ್ನಡ ಚಿತ್ರರಂಗದಲ್ಲಿ ಇಲ್ಲಿವರೆಗೆ ರಿಲೀಸ್ ಆಗಿರೋ ಸಾವಿರಾರು ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಚಿತ್ರಗಳು(top 10 highest Collection movies) ವಿಕಿಪೀಡಿಯಾ(Wikipedia) ಪ್ರಕಾರ ಹೀಗಿವೆ. ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿಶ್ಮಟ್ಟದಲ್ಲಿ ಓಪನ್ ಮಾಡಿದ ಕೀರ್ತಿ ಹೊಂಬಾಳೆ ಸಂಸ್ಥೆಗೆ ಸೇರುತ್ತದೆ. ಕೆಜಿಎಫ್ (KGF) ಚಿತ್ರವನ್ನು 50 ಕೋಟಿಯಲ್ಲಿ ನಿರ್ಮಿಸಿ 250 ಕೋಟಿ ಲಾಭ ಮಾಡಿದ್ರು. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಮೊದಲಬಾರಿ. ಪ್ರಶಾಂತ್ ನೀಲ್ ಟ್ಯಾಲೆಂಟ್ ಯಶ್ ಫೇಸ್ ವ್ಯಾಲ್ಯೂ ನಟನಾ ಪ್ರತಿಭೆ. ಎಲ್ಲವೂ ಕೂಡಿಬರೋ ಹಾಗೆ ಮಾಡಿತ್ತು.
ಇದನ್ನೂ ವೀಕ್ಷಿಸಿ: ಶಕ್ತಿ ಯೋಜನೆ ಎಫೆಕ್ಟ್: ಬಸ್‌ನಲ್ಲಿ ವಿದ್ಯಾರ್ಥಿಗಳ ಡೇಂಜರ್ ಜರ್ನಿ..!